Mumbai Police Helps: ವಿಶೇಷ ಚೇತನನಿಗೆ ರಸ್ತೆ ದಾಟಲು ನೆರವಾದ ಮುಂಬೈ ಟ್ರಾಫಿಕ್‌ ಪೊಲೀಸ್‌

By Suvarna News  |  First Published Dec 16, 2021, 5:01 PM IST
  • ವಿಶೇಷ ಚೇತನನ ಕೈ ಹಿಡಿದು ರಸ್ತೆ ದಾಟಿಸಿದ ಮುಂಬೈ ಪೊಲೀಸ್
  • ರಾಜೇಂದ್ರ ಸೋನಾವಾನೆ  ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ
  • ಟ್ವಿಟ್ಟರ್‌ನಲ್ಲಿ 7,000ಕ್ಕೂ ಹೆಚ್ಚು ಜನರಿಂದ ವೀಕ್ಷಣೆ

ಮುಂಬೈ(ಡಿ.16): ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಜಾಲತಾಣವಾದ ಟ್ವಿಟ್ಟರ್ ಪೇಜ್‌ ಯಾವಾಗಲೂ  ವಿವಿಧ ಸುರಕ್ಷತಾ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಚಮತ್ಕಾರಿ ವಿಧಾನದಲ್ಲಿ ಜನರಿಗೆ ನೆನಪಿಸುವ ಕಾರ್ಯಕ್ಕೆ  ಹಾಗೂ ಹಾಸ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ. ಆದರೆ ಮುಂಬೈ ಪೊಲೀಸರು ತಮ್ಮ ಎಂದಿನ ಶೇರ್‌ ಹಾಗೂ ಫೋಸ್ಟ್‌ನಿಂದ  ಪಕ್ಕಕ್ಕೆ ಸರಿದು ಇಂದು ವಿಭಿನ್ನವಾದ ಪೋಸ್ಟ್ ಮಾಡಿದ್ದಾರೆ. ಮುಂಬೈ ಟ್ರಾಫಿಕ್ ಪೋಲೀಸ್ ಒಬ್ಬರು, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗೆ ರಸ್ತೆ ದಾಟಲು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊವನ್ನು ಟ್ವಿಟ್ಟರ್‌ ಪೇಜ್‌ನಲ್ಲಿ ಶೇರ್‌ ಮಾಡಲಾಗಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋದಲ್ಲಿ ಮುಂಬೈನ  ಹೆಡ್ ಕಾನ್‌ಸ್ಟೇಬಲ್ ರಾಜೇಂದ್ರ ಸೋನಾವಾನೆ ಅವರು ವಿಶೇಷ ಚೇತನ ವ್ಯಕ್ತಿಗೆ ಸಹಾಯ ಹಸ್ತ ನೀಡುತ್ತಿರುವ ದೃಶ್ಯವಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ (CSMT) ರಸ್ತೆಯ ಜನನಿಬಿಡ ಜಂಕ್ಷನ್ ಅನ್ನು ದಾಟಲು ಕಷ್ಟ ಪಡುತ್ತಿದ್ದ ವಿಶೇಷ ಚೇತನ ವ್ಯಕ್ತಿಯ ಕೈ ಹಿಡಿದ ಸೋನಾವಾನೆ ಆತನನ್ನು ರಸ್ತೆ ದಾಟಿಸುತ್ತಿದ್ದಾರೆ.

Our , winning hearts across the 'universe'!

HC Rajendra Sonawane spotted at CSMT road doing what we do best - lending a helping hand to those in need! pic.twitter.com/PTbCJCQXa1

— Mumbai Police (@MumbaiPolice)

Tap to resize

Latest Videos

undefined

 

ನಮ್ಮ #MrMumbaiPolice, ಜಗತ್ತಿನಾದ್ಯಂತ ಎಲ್ಲರ ಹೃದಯಗಳನ್ನು ಗೆಲ್ಲುತ್ತಿದ್ದಾರೆ. ಹೆಚ್‌.ಸಿ. ರಾಜೇಂದ್ರ ಸೋನಾವಾನೆ(Rajendra Sonawane ) ಅವರು ಸಿಎಸ್‌ಎಂಟಿ ರಸ್ತೆ (CSMT road)ಯಲ್ಲಿ ನಾವು ಏನು ಒಳ್ಳೆಯದು ಮಾಡಬಹುದೋ ಅದನ್ನು ಮಾಡುತ್ತಿದ್ದಾರೆ. ಅಗತ್ಯವಿರುವವರಿಗೆ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ' ಎಂದು  ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋವನ್ನು 7,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.  ಮಾನವೀಯ ಕಾರ್ಯ ಮಾಡಿದ  ಟ್ರಾಫಿಕ್ ಪೊಲೀಸ್‌ ಸೋನಾವಾನೆಯನ್ನು ಪ್ರಶಂಸಿಸುತ್ತಿದ್ದಾರೆ.

Andhra police: ಆಂಧ್ರ ಪೊಲೀಸ್‌ ಪೇದೆಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಕಳೆದ ತಿಂಗಳು, ಚೆನ್ನೈ (Chennai)ನಲ್ಲಿ ಭಾರಿ ಮಳೆಯಿಂದ ಅನಾಹುತವಾದ ಸಂದರ್ಭದಲ್ಲಿ ಮಹಿಳಾ ಪೋಲೀಸ್ ಒಬ್ಬರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದ ವೀಡಿಯೊ ವೈರಲ್ ಆಗಿತ್ತು. ಮಹಿಳಾ ಪೋಲೀಸ್ ರಾಜೇಶ್ವರಿ (Rajeswari) ಅವರು ಜಲಾವೃತ ಪ್ರದೇಶದಲ್ಲಿ ರಕ್ಷಣಾ ಕಾರ್ಯವನ್ನು ಮಾಡುತ್ತಿದ್ದರು. ಮಳೆಗೆ ರಭಸವಾಗಿ ಬೀಸಿದ ಗಾಳಿಯಿಂದ ಮರವೊಂದರ ಕೊಂಬೆಗಳನ್ನು ರಕ್ಷಣಾ ಸಿಬ್ಬಂದಿ ಕತ್ತರಿಸಿದಾಗ, ರಾಜೇಶ್ವರಿ ಅವರು ತಮ್ಮ ಯುನಿಫಾರ್ಮ್‌ ಪ್ಯಾಂಟ್ ಮಡಚಿಕೊಂಡು, ತುಂಡು ಮಾಡಿದ ಕೊಂಬೆಗಳನ್ನು ದಾರಿಯಿಂದ ಪಕ್ಕಕ್ಕೆ ಹಾಕುತ್ತಿದ್ದರು. ಈ ವೇಳೆ ಅಲ್ಲಿ ಕೊಂಬೆಗಳ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿ ಕಾಣಿಸಿದ್ದು, ಆತನನ್ನು ಎತ್ತಿದ ರಾಜೇಶ್ವರಿ ಆಟೋ ಕಡೆಗೆ ಕರೆದೊಯ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನೆರವಾಗಿದ್ದರು. 

| Chennai, Tamil Nadu: TP Chatram Police Station's Inspector Rajeshwari carries an unconscious man, on her shoulders, to an autorickshaw in a bid to rush him to a nearby hospital.

Chennai is facing waterlogging due to incessant rainfall here.

(Video Source: Police staff) pic.twitter.com/zrMInTqH9f

— ANI (@ANI)

 

ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್‌ ಆಗಿತ್ತು. ಈ ವೇಳೆ ರಾಜೇಶ್ವರಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು. ನಂತರ ಈ ಬಗ್ಗೆ ಮಾಧ್ಯಮದವರು ಅವರ ಪ್ರತಿಕ್ರಿಯೆ ಕೇಳಿದಾಗ ಮಾತನಾಡಿದ ಮಹಿಳಾ ಅಧಿಕಾರಿ ರಾಜೇಶ್ವರಿ, 'ನಾನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅಸ್ವಸ್ಥ ವ್ಯಕ್ತಿಯನ್ನು ಎತ್ತಿಕೊಂಡು ಹೋಗಿ ಆಟೋದಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿದೆವು. ಬಳಿಕ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅಲ್ಲಿ ಆತನ ತಾಯಿ ಇದ್ದರು, ನಾನು ಅವರಿಗೆ ಆತಂಕಪಡಬೇಡಿ ಎಂದು ಭರವಸೆ ನೀಡಿದ್ದೇನೆ ಮತ್ತು ಪೊಲೀಸ್ ಇಲಾಖೆಯು ಅವರಿಗೆ ಬೆಂಬಲ ನೀಡಲಿದೆ ಎಂದು ಹೇಳಿದ್ದರು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಚಿಕಿತ್ಸೆ ಮುಂದುವರೆದಿದೆ ಯಾರೂ ಚಿಂತಿಸಬೇಕಾಗಿಲ್ಲ ಎಂದಿದ್ದರು. 

Punjab Politics: ಸಿಎಂ ವಿರೋಧಿಸುತ್ತಿದ್ದ ನಿರುದ್ಯೋಗಿ ಶಿಕ್ಷಕರ ಬಾಯಿಗೆ ಬಟ್ಟೆ ತುರುಕಿದ ಪೊಲೀಸರು!

ಚೆನ್ನೈ(Chennai)ನ ಟಿಪಿ ಛತ್ರಂ(TP Chatram) ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ರಾಜೇಶ್ವರಿ ಅವರು ಮಳೆಗಾಲದ ಆರಂಭದಿಂದಲೂ ರಕ್ಷಣಾ ಮತ್ತು ಪರಿಹಾರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ತಮ್ಮ ತಂಡದೊಂದಿಗೆ ಪ್ರತಿದಿನ ನಿರಾಶ್ರಿತರಿಗೆ ಆಹಾರ ನೀಡುತ್ತಿದ್ದರು.  ಒಟ್ಟಿನಲ್ಲಿ ಇತ್ತೀಚೆಗೆ ಪೊಲೀಸರು ತಮ್ಮ ಮಾನವೀಯ ಕಾರ್ಯಗಳಿಂದ ಖ್ಯಾತಿ ಗಳಿಸುತ್ತಿದ್ದಾರೆ.

click me!