
ನೂಹ್: ಕಳೆದ ತಿಂಗಳು ನಡೆದ ಕೋಮುಗಲಭೆ ಕಾರಣ ಅಪೂರ್ಣಗೊಂಡಿದ್ದ ಶೋಭಾಯಾತ್ರೆಯನ್ನು ನೂಹ್‌ನಲ್ಲಿ ಆ.28ರ ಇಂದು ನಡೆಸಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ನೂಹ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಬಿಗಿಬಂದೋಬಸ್ತ್ ಮಾಡಲಾಗಿದೆ. ಕಳೆದ ಜು.31 ರಂದು ನಡೆದ ಜಲಾಭಿಷೇಕ ಶೋಭಾಯಾತ್ರೆಯ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದರು. ಬಳಿಕ ನೂಹ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆದ ಭಾರೀ ಕೋಮು ಸಂಘರ್ಷಕ್ಕೆ 6 ಜನ ಬಲಿಯಾಗಿದ್ದರು. ಈ ವೇಳೆ ಮಸೀದಿ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಘಟನೆಗಳು ನಡೆದಿದ್ದವು. ಇದಾದ ಬಳಿಕ ಗಲಭೆಯಲ್ಲಿ ಭಾಗಿಯಾಗಿದ್ದವರ ಅಕ್ರಮ ಆಸ್ತಿಗಳನ್ನು ಸ್ಥಳೀಯ ಆಡಳಿತ ನೆಲಸಮಗೊಳಿಸಿತ್ತು. ಬಳಿಕ ಹೈಕೋರ್ಟ್ ಇದಕ್ಕೆ ತಡೆ ನೀಡಿತ್ತು.
ಹೀಗಾಗಿ ಅಂದು ಅಪೂರ್ಣಗೊಂಡಿದ್ದ ಯಾತ್ರೆಯನ್ನು ಇದೀಗ ಶ್ರಾವಣ ಮಾಸದ ಕೊನೆಯ ಸೋಮವಾರದ ಹಮ್ಮಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ 24 ಅರೆ ಸೇನಾಪಡೆಗಳು ಮತ್ತು 1,900 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆ.26 ರಿಂದ 28ರವರೆಗೆ ಸ್ಥಳದಲ್ಲಿ ಇಂಟರ್ನೆಟ್ ನಿಷೇಧಿಸಲಾಗಿದೆ. ಅಲ್ಲದೇ ಸೆಕ್ಷನ್ 144ನ್ನು ಜಾರಿ ಮಾಡಲಾಗಿದೆ. ಈ ನಡುವೆ ಶೋಭಾಯಾತ್ರೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಯಾತ್ರೆಗೆ ಅನುಮತಿ ನೀಡಲಾಗಿಲ್ಲ. ಜಲಾಭಿಷೇಕ ಮಾಡಲು ಯಾತ್ರೆ ಬದಲು ಜನರು ತಮ್ಮ ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.
VHP ಶೋಭಾಯಾತ್ರೆ ಮೇಲೆ ಕಲ್ಲೆಸೆಯಲು ಬಳಸಿದ್ದ ಹೋಟೆಲ್, ಅಂಗಡಿ ಧ್ವಂಸ
ನೂಹ್ ಗಲಭೆಗೆ ಕುಮ್ಮಕ್ಕು: ಪಾಕ್ ಯೂಟ್ಯೂಬ್ ಚಾನೆಲ್ ರದ್ದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ