
ಮುಂಬೈ (ಸೆ.20) ನವರಾತ್ರಿ ಹಬ್ಬದ ಸಂಭ್ರಮ ಆರಂಭಗೊಂಡಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನವರಾತ್ರಿ ಹಬ್ಬ ನಡೆಯಲಿದೆ. ಉತ್ತರ ಭಾರತದಲ್ಲಿ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ವಿಶ್ವ ಹಿಂದೂ ಪರಿಷತ್ ಇದೀಗ ಮಾರ್ಗಸೂಚಿ ಪ್ರಕಟಿಸಿದೆ. ಹಿಂದೂಗಳು ಹಣೆಗೆ ತಿಲಕ ಧರಿಸಬೇಕು, ಆಧಾರ್ ಕಾರ್ಡ್ ಪರಿಶೀಲನೆ ನಡೆಸಲೂ ಈ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ವಿಶ್ವ ಹಿಂದೂ ಪರಿಷತ್ ಮಾರ್ಗಸೂಚಿಗೆ ಹಲವು ರಾಜಕೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಸಮರ್ಥಿಸಿದೆ.
ನವರಾತ್ರಿ ಹಬ್ಬದ ಪ್ರಮುಖ ಆಕರ್ಷಣೆ ಗರ್ಬಾ ನೃತ್ಯ. ಕುಟುಂಬ ಸಮೇತ ಗರ್ಬಾ ನೃತ್ಯ ಮಾಡಲಾಗುತ್ತದೆ. ನವರಾತ್ರಿ ಆಚರಣೆಯಲ್ಲಿ ಉತ್ತರ ಭಾರತದಲ್ಲಿ ಗರ್ಬಾ ನೃತ್ಯಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಇತ್ತೀಚಿನ ಹಲವು ವರ್ಷಗಳಿಂದ ನವರಾತ್ರಿ ಹಬ್ಬಕ್ಕ ಅತೀ ದೊಡ್ಡ ಗರ್ಬ ನೃತ್ಯ ಆಯೋಜಿಸಲಾಗುತ್ತದೆ. ಹಿಂದೂ ಬಾಂಧವರು ಜೊತೆಯಾಗಿ ಸೇರಿ ಗರ್ಬಾ ನೃತ್ಯ ಮಾಡಲಾಗುತ್ತದೆ. ಆದರೆ ಕಳೆದ ಕೆಲ ವರ್ಷಗಳಿಂದ ಹಿಂದೂ ಹೆಸರಿನಲ್ಲಿ ಅನ್ಯಮತದವರು ಗರ್ಬಾ ನೃತ್ಯದ ಸ್ಥಳ ಪ್ರವೇಶಿಸಿ ಮಹಿಳೆಯರ ಮೇಲೆ ಅಸಭ್ಯವಾಗಿ ವರ್ತಿಸಿದ ಘಟನೆಗಳು ನಡೆದಿದೆ. ನವರಾತ್ರಿಯ ಆರಾಧಾನ ಪದ್ಧತಿಗಳಲ್ಲಿ ಗರ್ಬಾ ಕೂಡ ಒಂದು ಪ್ರಕಾರದ ಆರಾಧಾನ ಪದ್ಧತಿಯಾಗಿದೆ. ಹೀಗಾಗಿ ಹಿಂದೂಗಳು ಮಾತ್ರ ಈ ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳಬೇಕು. ಇದಕ್ಕಾಗಿ ಗರ್ಬಾ ನೃತ್ಯ ಆಯೋಜಕರು ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವ ಹಿಂದೂ ಪರಿಷತ ಖಡಕ್ ಸೂಚನೆ ನೀಡಿದೆ.
ಈ ವರ್ಷ 9 ಅಲ್ಲ 10 ದಿನ ನಡೆಯುತ್ತಿದೆ ನವರಾತ್ರಿ… ವರ್ಷದ ಬಳಿಕ ಕೂಡಿ ಬರುತ್ತಲಿದೆ ಶುಭಯೋಗ
ಗರ್ಬಾ ನೃತ್ಯ ಆಯೋಜಕರು ಪ್ರತಿ ಪ್ರವೇಶ ದ್ವಾರದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಗರ್ಬಾ ನೃತ್ಯಕ್ಕೆ ಆಗಮಿಸುವ ಹಿಂದೂ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಸಂಪೂರ್ಣ ಸುರಕ್ಷತೆ ನೀಡಬೇಕು. ಪ್ರಮುಖವಾಗಿ ಅನ್ಯಧರ್ಮದವರು ದುರ್ಗೆ ಮಾತೆಯ ಆರಾಧಾನ ನೃತ್ಯದಲ್ಲಿ ಪಾಲ್ಗೊಳ್ಳದಂತೆ ಎಚ್ಚರವಹಿಸಬೇಕು. ಹೀಗಾಗಿ ಪ್ರವೇಶ ದ್ವಾರದಲ್ಲಿ ಮನೆಯಲ್ಲಿ ಪೂಜೆ ಮಾಡಿ ಹಣೆಗೆ ತಿಲಕ ಇಟ್ಟಿದ್ದಾರಾ ಅನ್ನೋದು ಪರಿಶೀಲನೆ ಮಾಡಬೇಕು. ಜೊತೆಗೆ ಆಧಾರ ಕಾರ್ಡ್ ಪರಿಶೀಲಿಸಬೇಕು ಎಂದು ಸೂಚಿಸಿದೆ.
ಗರ್ಬಾ ಆಯೋಜಕರು ಕಟ್ಟು ನಿಟ್ಟಿನ ಸೂಚನೆ ಪಾಲಿಸಬೇಕು. ಇನ್ನು ಬಜರಂಗದಳ ಸದಸ್ಯರು ದೇಶಾದ್ಯಂದ ಗರ್ಬಾ ನೃತ್ಯವನ್ನು ಮಾನಿಟರ್ ಮಾಡಲಿದ್ದಾರೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸದಸ್ಯರು ಮೇಲ್ವಿಚಾರಣೆ ಮಾಡಲಿದೆ. ಯಾವುದೇ ಅಹಿತರ ಘಟನೆಗೆ ಅವಕಾಶವಿಲ್ಲ ಎಂದು ವಿಹೆಚ್‌ಪಿ ಹೇಳಿದೆ.
ಗರ್ಬಾ ನೃತ್ಯ ಕೇವಲ ನೃತ್ಯವಲ್ಲ, ಇದು ದೇವಿಯ ಆರಾಧಾನ ಪದ್ಧತಿಯಾಗಿದೆ. ನವರಾತ್ರಿಯಲ್ಲಿ ದೇವಿಯನ್ನು ಆರಾಧಿಸಿವು ಅನೇಕ ಪ್ರಕಾರಗಳಲ್ಲಿ ಗರ್ಬಾ ಕೂಡ ಒಂದು. ಹೀಗಾಗಿ ಇದು ಸಂಪೂರ್ಣವಾಗಿ ಹಿಂದೂ ಧಾರ್ಮಿಕ ಭಾವನೆ ಹಾಗೂ ನಂಬಿಕೆಯ ಆರಾಧನೆಯಾಗಿದೆ ಎಂದು ವಿಶ್ವಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ಶ್ರೀರಾಜ್ ನಾಯರ್ ಹೇಳಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ವಿಶ್ವ ಹಿಂದೂ ಪರಿಷತ್ ಘೋಷಣೆಯನ್ನು ಖಂಡಿಸಿದ್ದಾರೆ. ಇದು ಸಮಾಜವನ್ನು ಒಡೆಯುವ ನಿರ್ಧಾರವಾಗಿದೆ, ಜಾತ್ಯಾತೀತವಾಗಿ ಹಬ್ಬದ ಆಚರಣೆಯಾಗಬೇಕು ಎಂದು ಕಾಂಗ್ರೆಸ್ ಹೇಳಿದೆ. ಹಿಂದೂ ಸಮುದಾಯ ದೇವಿಯನ್ನು ಆರಾಧಿಸುತ್ತದೆ. ಇದಕ್ಕೆ ಹಿಂದೂ ದೇವರಲ್ಲಿ ನಂಬಿಕೆ ಇಲ್ಲದ, ಮೂರ್ತಿ ಪೂಜೆ ವಿರೋಧಿಸುವ ಮತದವರು ಬಂದು ಏನು ಮಾಡಬೇಕಿದೆ. ಇದು ಜಾತ್ಯಾತೀತ ಹಬ್ಬವಲ್ಲ ಹಿಂದೂ ಹಬ್ಬ ಎಂದು ಬಿಜೆಪಿ ಹೇಳಿದೆ.
ನವರಾತ್ರಿಯ ಸಮಯದಲ್ಲಿ ದೇವಿಗೆ ಈ ಹಣ್ಣನ್ನು ಅರ್ಪಿಸಬಾರದು, ಏಕೆ ಗೊತ್ತೇ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ