ಅನೇಕ ನ್ಯೂನತೆಗಳಿವೆ: ಲಸಿಕೆ ಅಭಿಯಾನದ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ಚಾಟಿ!

By Suvarna NewsFirst Published May 31, 2021, 2:17 PM IST
Highlights

* ದೇಶಾದ್ಯಂತ ಕೊರೋನಾ ಅಬ್ಬರದ ನಡುವೆಯೂ ಮುಂದುವರೆದ ಲಸಿಕೆ ಅಭಿಯಾನ

* ಲಸಿಕೆ ಅಭಿಯಾನದಲ್ಲಿ ಅನೇಕ ನ್ಯೂನತೆಗಳಿವೆ, ಕೇಂದ್ರಕ್ಕೆ ಸುಪ್ರೀಂ ಛಾಟಿ

* ಲಸಿಕೆಯ ವಿಭಿನ್ನ ದರಗಳ ಬಗ್ಗೆಯೂ ಪ್ರಶ್ನಿಸಿದ ಸುಪ್ರೀಂ

ನವದೆಹಲಿ(ಮೇ.31): ಈ ವರ್ಷದ ಅಂತ್ಯದೊಳಗೆ ದೇಶದ ಎಲ್ಲಾ ನಾಗರಿಕರಿಗೂ ಕೊರೋನಾ ಲಸಿಕೆ ನೀಡುವ ಭರವಸೆ ಇದೆ ಎಂದು ಕೇಂದ್ರ ಸರ್ಕಾರ ಸೋಮವಾರದಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ತನ್ನ ಲಸಿಕೆ ನೀತಿ ಹಾಗೂ ಲಸಿಕೆಯ ವಿಭಿನ್ನ ದರಗಳ ಬಗ್ಗೆ ಪದೇ ಪದೇ ಟೀಕೆಯನ್ನೆದುರಿಸುತ್ತಿರುವ ಕೆಂದ್ರ ಸರ್ಕಾರ 2021ರ ಅಂತ್ಯದೊಳಗೆ ಈ ಲಸಿಕಾ ಅಭಿಯಾನ ಪೂರ್ಣಗೊಳ್ಳಲಿದೆ ಎಂದಿದೆ.

ಸರ್ಕಾರದ ಲಸಿಕಾ ನೀತಿಯಲ್ಲಿ ಲಸಿಕೆಗಳ ವಿಭಿನ್ನ ದರ, ಲಸಿಕೆ ಕೊರತೆ ಹಾಗೂ ನಿಧಾನಗತಿಯಲ್ಲಿ ಸಾಗುತ್ತಿರುವ ಅಭಿಯಾನ ಸಂಬಂಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ 45ವರ್ಷಕ್ಕಿಂತ ಹಿರಿಯರಿಗೆ ಶೇ. 100ರಷ್ಟು ಲಸಿಕೆ ಪೂರೈಸಿ, 18-44 ವಯೋಮಾನದವರಿಗೆ ಮಾತ್ರ ಯಾಕೆ ಕೇವಲ ಶೇ. 50ರಷ್ಟು ಲಸಿಕೆ ಪೂರೈಸುತ್ತಿದ್ದೀರೆಂದು ಕೇಂದ್ರವನ್ನು ಪ್ರಶ್ನಿಸಿದೆ.

ಸೆಂಟ್ರಲ್‌ ವಿಸ್ತಾ ಅಗತ್ಯ, ಕೆಲಸ ಮುಂದುವರೆಸಿ: 1 ಲಕ್ಷ ದಂಡ, ಅರ್ಜಿ ರದ್ದುಗೊಳಿಸಿದ ಕೋರ್ಟ್!

'45 ಕ್ಕಿಂತ ಹೆಚ್ಚಿನ ವಯೋಮಾನದವರಿಗೆ, ಕೇಂದ್ರವು ಲಸಿಕೆಯನ್ನು ಸಂಂಪೂರ್ಣವಾಗಿ ಖರೀದಿಸುತ್ತಿದೆ ಆದರೆ 18-44 ವಯಸ್ಸಿನವರಿಗೆ ನೀಡುವ ಲಸಿಕೆ ಖರೀದಿಯನ್ನು ವಿಂಗಡಿಸಲಾಗಿದೆ. ಲಸಿಕೆ ತಯಾರಕರು ಶೇ. 50ರಷ್ಟು ಲಸಿಕೆ ರಾಜ್ಯಗಳಿಗೆ ನೀಡುತ್ತಿವೆ. ಆದರೆ ಬೆಲೆಯನ್ನು ಕೇಂದ್ರ ನಿಗದಿಪಡಿಸುತ್ತಿದೆ. ಇನ್ನುಳಿದ ಲಸಿಕೆ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ, ಅದರ (ನೈಜ) ಕಾರಣವೇನು? ' ಎಂದು ಕೇಂದ್ರ ಪ್ರಶ್ನಿಸಿದೆ.

ಡಿ.ವೈ.ಚಂದ್ರಚೂಡ್, ಎಲ್.ಎನ್. ರಾವ್ ಮತ್ತು ಎಸ್ ರವೀಂದ್ರ ಭಟ್ ನೇತೃತ್ವದ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಈ ವಿಚಾರಣೆ ನಡೆಸಿ, 45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಆದರೆ ಎರಡನೇ ಅಲೆಯಲ್ಲಿ ಈ ವರ್ಗದಲ್ಲಿ ಹೆಚ್ಚಿನ ಅಪಾಯವಿಲ್ಲದೇ, 18-44 ವಯೋಮಾನದ ನಾಗರಿಕರು ಅಪಾಯದಲ್ಲಿದ್ದಾರೆ ಎಂಬುವುದು ನಿಮ್ಮ ವಾದ. ಹೀಗಿರುವಾಗ ಲಸಿಕೆ ಖರೀದಿ ವಿಚಾರದಲ್ಲಿ ಕೇವಲ 45 ವರ್ಷ ಮೇಲ್ಪಟ್ಟವರಿಗಷ್ಟೇ ಕೇಂದ್ರ ಯಾಕೆ ಲಸಿಕೆ ಖರೀದಿಸುತ್ತಿದೆ ಎಂದು ಪ್ರಶ್ನಿಸಿದೆ.

ಲಸಿಕೆ ವಿತರಣೆ: ದ. ಭಾರತಕ್ಕೇ ಕರ್ನಾಟಕ ನಂ.1!

ಇನ್ನು ಕೇಂದ್ರ ಜಾರಿಗೊಳಿಸಿರುವ ಡಿಜಿಟಲ್ ವ್ಯಾಕ್ಸಿನೇಷನ್‌ ಬಗ್ಗೆಯೂ ಸುಪ್ರೀಂ ಕಿಡಿ ಕಾರಿದೆ. ಇಂಟರ್ನೆಟ್‌ ಸೌಲಭ್ಯ ಸರಿಯಾಗಿ ಇಲ್ಲದಿರುವುದರಿಂದ ಲಸಿಕೆಗಾಗಿ ಕೋವಿನ್‌ ಪ್ಲಾಟ್‌ಫಾರಂನಲ್ಲಿ ನೋಂದಾವಣೆ ಖಡ್ಡಾಯ ಮಾಡಿರುವುದು ಹಳ್ಳಿಗಳಲ್ಲಿ ನಡೆಯುವ ಲಸಿಕೆ ಅಭಿಯಾನದ ಮೇಲೆ ಪರಿಣಾಮ ಬೀರಲಿದೆ. ಎಲ್ಲರೂ ನೊಂದಾವಣೆ ಮಾಡುವುದು ಖಡ್ಡಾಯ ಎನ್ನುತ್ತೀರಿ ಆದರೆ ಹಳ್ಳಿಗಳಲ್ಲಿ ಜನರು ಖುದ್ದು ಈ ಲಸಿಕೆ ಅಭಿಯಾನಕ್ಕೆ ನೋಂದಾವಣೆ ಮಾಡಿಕೊಳ್ಳುತ್ತಾರೆನ್ನುವುದನ್ನು ಅಪೇಕ್ಷಿಸಲು ಸಾಧ್ಯವಾ ಎಂದೂ ಪ್ರಶ್ನಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!