
ಬೆಂಗಳೂರು(ಮೇ.31): ಮೇ 21ರಂದು ಜಾರ್ಖಂಡ್‌ನ ಜೆಮ್ಶೆಡ್ಪುರದಿಂದ ಕರ್ನಾಟಕದ ಬೆಂಗಳೂರಿಗೆ ಪ್ರಾಣವಾಯು ಆಮ್ಲಜನಕವನ್ನೊಳಗೊಂಡ ‘ಆಮ್ಲಜನಕ ಎಕ್ಸ್ಪ್ರೆಸ್’ ರೈಲನ್ನು ಚಾಲನೆ ಮಾಡಿಕೊಂಡು ಬಂದ ಬೆಂಗಳೂರಿನ ಮಹಿಳಾ ಲೋಕೋ ಪೈಲಟ್ ಸಿರೀಶಾ ಗಜಿನಿ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಿರೀಶಾ ಅವರಿಗೆ ಕರೆ ಮಾಡಿ ಮಾತನಾಡಿರುವ 2 ನಿಮಿಷ 8 ಸೆಕೆಂಡ್ ಸಂಭಾಷಣೆಯು ಭಾನುವಾರ ಬೆಳಗ್ಗೆ ರೇಡಿಯೋ ಮತ್ತು ಟೀವಿ ವಾಹಿನಿಗಳಲ್ಲಿ ಪ್ರಸಾರವಾಗಿದೆ.
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
ಈ 2 ನಿಮಿಷದ ಸಂಭಾಷಣೆ ವೇಳೆ ಮೋದಿ ಅವರು, ‘ಸಿರೀಶಾ ಜೀ, ನೀವು ಮಹೋನ್ನತ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಿ. ಕೊರೋನಾ ವಿರುದ್ಧದ ಹೋರಾಟದಲ್ಲಿ ನಿಮ್ಮಂತೆ ಹಲವು ಮಹಿಳೆಯರು ಮುಂದೆ ಬಂದು ದೇಶಕ್ಕೆ ಶಕ್ತಿ ತುಂಬಿದ್ದಾರೆ. ನೀವು ಸಹ ನಾರಿ ಶಕ್ತಿಗೆ ಉತ್ತಮ ಉದಾಹರಣೆಯಾಗಿದ್ದೀರಿ’ ಎಂದು ಕೊಂಡಾಡಿದರು.
ನನ್ನ ಪೋಷಕರು ನನ್ನನ್ನು ಹುರಿದುಂಬಿಸಿದರು. ಅವರೇ ನನ್ನ ಈ ಕೆಲಸಕ್ಕೆ ಸ್ಫೂರ್ತಿ ಎಂದು ಮೋದಿ ಅವರ ಪ್ರಶ್ನೆಯೊಂದಕ್ಕೆ ಸಿರೀಶಾ ಉತ್ತರಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ