ನಾಡು ಕಂಡ ಅಪರೂಪದ ಸಮಾಜ ಸುಧಾರಕಿ, ತೆರೆಮೆರೆ ಸಾಧಕಿ ಪ್ರಮಿಳಾ ತಾಯಿ ಮೇಧೆ ನಿಧನ: ದೇಹ ದಾನ

Published : Jul 31, 2025, 05:00 PM IST
Pramila Tai Medhe

ಸಾರಾಂಶ

ಜೀವನದ ಉದ್ದಕ್ಕೂ ಸಮಾಜದ ಉದ್ಧಾರಕ್ಕಾಗಿ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿ ತೆರೆಮರೆಯಲ್ಲಿಯೇ ಉಳಿದ ರಾಷ್ಟ್ರ ಸೇವಿಕಾ ಸಮಿತಿಯ ಮಾಜಿ ಪ್ರಮುಖ ಸಂಚಾಲಿಕಾ ಪ್ರಮಿಳಾ ತಾಯಿ ಮೇಧೆ ನಿಧನರಾಗಿದ್ದಾರೆ. ಅವರ ಬಗ್ಗೆ ಒಂದಿಷ್ಟು ಮಾಹಿತಿ... 

ಕೆಲವರ ಜೀವನವೇ ಹಾಗೆ, ಎಲೆ ಮರೆಯ ಕಾಯಿಯಂತೆ. ಇತರರ ಕಲ್ಯಾಣಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ ಅಥವಾ ದೇಶಕ್ಕಾಗಿ ಜೀವನ ಮುಡುಪಾಗಿ ಇಡುವ ಸಾಧಕರು ಎಷ್ಟೋ ಮಂದಿ ಇದ್ದರೂ ಅವರು ಸಾರ್ವಜನಿಕರಿಗೆ ತಿಳಿದೇ ಇರುವುದಿಲ್ಲ. ತೆರೆಯ ಮರೆಯಲ್ಲಿ ಇದ್ದುಕೊಂಡೇ ಅವರು ಬದುಕು ಸಾಗಿಸುತ್ತಿರುತ್ತಾರೆ. ಅವರ ಬಗ್ಗೆ ಏನಾದರೂ ತಿಳಿದುಕೊಳ್ಳಬೇಕು ಎಂದು ಗೂಗಲ್​ನಲ್ಲಿ ಹುಡುಕಿದರೆ, ಸಿಗುವುದು ಅವರದ್ದೇ ಹೆಸರಿನಲ್ಲಿ ಇರುವ ಚಿತ್ರನಟ- ನಟಿಯರ ಇಲ್ಲವೇ ರಾಜಕಾರಣಿಗಳ ಅಥವಾ ಕಾಂಟ್ರವರ್ಸಿ ಮಾಡಿಕೊಂಡವರ ಸುದೀರ್ಘ ಮಾಹಿತಿಯೇ ಹೊರತು ಈ ಸಾಧಕರ ಬಗ್ಗೆ ತಿಳಿಯುವುದೇ ಇಲ್ಲ!

ಅಂಥ ಮಹನೀಯರಲ್ಲಿ ಒಬ್ಬರಾದವರು ರಾಷ್ಟ್ರ ಸೇವಿಕಾ ಸಮಿತಿಯ ಮಾಜಿ ಪ್ರಮುಖ ಸಂಚಾಲಿಕಾ ಆಗಿದ್ದ ಪ್ರಮೀಳಾ ತಾಯಿ ಮೇಧೆ. ಅವರು ಇಂದು ತಮ್ಮ 97 ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಿಧನರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮಹಿಳಾ ವಿಭಾಗದ ಧೀಮಂತ ನಾಯಕಿಯಾಗಿದ್ದ ಅವರು, ರಾಷ್ಟ್ರ ನಿರ್ಮಾಣ ಮತ್ತು ಸೇವೆಗೆ ಅವಿಶ್ರಾಂತ ಸಮರ್ಪಣೆಗೆ ಹೆಸರುವಾಸಿಯಾಗಿದ್ದರು. ತಮ್ಮ ಜೀವನದ ಉದ್ದಕ್ಕೂ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡಿದವರು ಪ್ರಮಿಳಾ ತಾಯಿ. ಐದು ದಶಕಗಳ ಕಾಲ ತಮ್ಮ ಜೀವನವನ್ನು ದೇಶಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ ಮೀಸಲು ಇರಿಸಿದವರು ಇವರು.

ಪ್ರಮೀಳಾ ತಾಯಿ ಮೇಧೆ ಅವರು, ತಮ್ಮ ಸಾವಿನಲ್ಲಿಯೂ ಅವರು ಸಾರ್ಥಕತೆ ಮೆರೆದಿದ್ದಾರೆ. ದೇಹವನ್ನು ದಾನವನ್ನು ಮಾಡಿದ್ದಾರೆ. ಅವರ ಆಸೆಯಂತೆಯೇ ದೇಹದಾನ ಮಾಡಲಾಗಿದೆ. ಇನ್ನು, ರಾಷ್ಟ್ರ ಸೇವಿಕಾ ಸಮಿತಿ ಕುರಿತು ಹೇಳುವುದಾದರೆ, ಇದು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಅತಿದೊಡ್ಡ ಹಿಂದೂ ಸಂಘಟನೆಯಾಗಿದೆ. ಭಾರತದಾದ್ಯಂತ ಮಹಿಳೆಯರನ್ನು ಉನ್ನತೀಕರಿಸಲು ಮತ್ತು ಸಬಲೀಕರಣಗೊಳಿಸಲು ಕೆಲಸ ಮಾಡುತ್ತದೆ. ಪ್ರಸ್ತುತ ಇದು ಆರ್‌ಎಸ್‌ಎಸ್‌ನ ಅಂಗವಾಗಿದೆ. ಆರ್‌ಎಸ್‌ಎಸ್ ಮಹಿಳೆಯರು ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಮಿತಿಯು ಜನರಲ್ಲಿ ಜವಾಬ್ದಾರಿಯುತ ನಡವಳಿಕೆ ಮತ್ತು ಸಾಮಾಜಿಕ ಅರಿವಿನ ಪ್ರಜ್ಞೆಯನ್ನು ಬೆಳೆಸುತ್ತದೆ. ಭಾರತದ ಎಲ್ಲಾ ಭಾಗಗಳಲ್ಲಿ ವಿವಿಧ ಹಂತಗಳಲ್ಲಿ ವಿವಿಧ ರೀತಿಯ ಶೈಕ್ಷಣಿಕ ಮತ್ತು ಜಾಗೃತಿ ಶಿಬಿರಗಳನ್ನು ನಿಯತಕಾಲಿಕವಾಗಿ ನಡೆಸಲಾಗುತ್ತದೆ. ಧರ್ಮ, ಜಾತಿ, ಮತ, ಪಂಥ, ಲಿಂಗ ಅಥವಾ ಜನಾಂಗೀಯತೆಗೆ ಸಂಬಂಧಿಸಿದಂತೆ, ಸಮಿತಿಯು ಭಾರತದಾದ್ಯಂತ ಬಡವರು ಮತ್ತು ಹಿಂದುಳಿದವರಿಗಾಗಿ 475 ಸೇವಾ ಯೋಜನೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಗೋ ಶಾಲೆಗಳು, ಗ್ರಂಥಾಲಯಗಳು, ಕಂಪ್ಯೂಟರ್ ತರಬೇತಿ ಕೇಂದ್ರಗಳು ಮತ್ತು ಅನಾಥಾಶ್ರಮಗಳು ಸೇರಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ