
ವಡೋದರ(ಏ.18) ಬಿರು ಬಿಸಿಲಿನಿಂದ ತಾಪಮಾನ ಗಣನೀಯ ಏರಿಕೆ. ಒಂದು ಕ್ಷಣ ಬಿಸಿಲಿಗೆ ಹೋದರೆ ಬಳಲಿ ಬೆಂಡಾಗುವುದು ಖಚಿತ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಿಸಿನಲ್ಲೇ ನಿಂತು ಪೊಲೀಸರು ಕರ್ತವ್ಯ ನಿಭಾಯಿಸುತ್ತಾರೆ. ಇದೀಗ ಬಿರು ಬಿಸಿನಲ್ಲೂ ನಿಂತು ಕರ್ತವ್ಯ ನಿಭಾಯಿಸುವ ಪೊಲೀಸರಿಗೆ ಇದೀಗ ಎಸಿ ಹೆಲ್ಮೆಟ್ ನೀಡಲಾಗಿದೆ. ಎಷ್ಟೇ ಬಿಸಿಲಿನಲ್ಲಿ ನಿಂತರೂ ಈ ಹೆಲ್ಮೆಟ್ ಪೊಲೀಸರ ತಲೆಯನ್ನು ಕೂಲ್ ಕೂಲ್ ಮಾಡಲಿದೆ. ವಡೋದರದಲ್ಲಿ ಬಿಸಿಲಿನ ತಾಪಮಾನ 40 ರಿಂದ 42 ಡಿಗ್ರಿ ದಾಖಲಾಗಿದೆ. ಹೀಗಾಗಿ ಗುಜರಾತ್‌ನ ವಡೋದರ ಟ್ರಾಫಿಕ್ ಪೊಲೀಸರಿಗೆ ಈ ಎಸಿ ಹೆಲ್ಮೆಟ್ ನೀಡಲಾಗಿದೆ.
ಈ ಅತ್ಯಾಧುನಿಕ ಹೆಲ್ಮೆಟ್ ಹಲವು ವಿಶೇಷತೆಗಳನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸತತ 8 ಗಂಟೆಗಳ ಕಾಲ ತಂಪು ನೀಡಲಿದೆ. ಮುಖಕ್ಕೆ ಬಿಸಿಲು ತಾಗದಂತೆ ಶೀಲ್ಡ್, ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಅತ್ಯಂತ ಸೂಕ್ಷ್ಮವಾಗಿ ಈ ಹೆಲ್ಮೆಟ್ ವಿನ್ಯಾಸ ಮಾಡಲಾಗಿದೆ. ಈ ಹೆಲ್ಮೆಟ್ ಧರಿಸುವುದರಿಂದ ಪೊಲೀಸರು ಬಿರು ಬಿಸಿಲಿನಲ್ಲೂ ಕೂಲ್ ಕೂಲ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ.
ಕೂಲ್ ಆಗಿದ್ದ ಬೆಂಗಳೂರಲ್ಲೇ ಬಿರು ಬಿಸಿಲು, ಆರೋಗ್ಯಕ್ಕೆ ಸರಕಾರ ಕೊಟ್ಟ ಸೂಚನೆ ಪಾಲಿಸಿ, ಅಷ್ಟಕ್ಕೂ ಹೇಳಿದ್ದೇನು?
ಗರಿಷ್ಠ ಬಿಸಿಲಿನ ಪ್ರಮಾಣದಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಅಸ್ವಸ್ಥಗೊಳ್ಳುತ್ತಿದ್ದಾರೆ. ಪೊಲೀಸರು ಹಾಗೂ ಬಿರು ಬಿಸಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಈ ಹೆಲ್ಮೆಟ್ ಅಭಿವೃದ್ಧಿಪಡಿಸಲಾಗಿದೆ. ಸದ್ಯ ವಡೋದರ ಪೊಲೀಸರಿಗೆ ನೀಡಲಾಗಿರುವ ಈ ಎಸೆ ಹೆಲ್ಮೆಟ್ ಪ್ರಯೋಗಾತ್ಮಕವಾಗಿ ನೀಡಲಾಗಿದೆ.
ಇದೀಗ ವಡೋದರ ಪೊಲೀಸರು ಈ ಎಸಿ ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರೆ. ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಇದೆ ಎಸಿ ಹೆಲ್ಮೆಟ್ ಹಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೆಲ್ಮೆಟ್‌ನಿಂದ ಪೊಲೀಸರು ಬಿಸಿಲಿನಲ್ಲೂ ಕೂಲ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎನ್ನುತ್ತಿದ್ದಾರೆ. ಪ್ರಾಯೋಗಿಕ ಹಂತದಲ್ಲಿರುವ ಈ ಹೆಲ್ಮೆಟ್‌ನ್ನು ವಡೋದರ ಟ್ರಾಫಿಕ್ ಪೊಲೀಸರು ಬಳಸಿ ಮೆಚ್ಚುಗೆ ಸೂಚಿಸಿದ್ದಾರೆ.
ಪೊಲೀಸರ ಎಸಿ ಹೆಲ್ಮೆಟ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಭಾರಿ ಚರ್ಚೆಯಾಗುತ್ತಿದೆ. ಬಿಸಿಲಿನ ಬೇಗೆ ತಡೆಯಲು ಇದು ಅತ್ಯುತ್ತಮ ಹೆಲ್ಮೆಟ್. ಈ ಹೆಲ್ಮೆಟ್ ಪೊಲೀಸರು ಹಾಗೂ ಬಿಸಿಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನೆರವಾಗಲಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಹೆಲ್ಮೆಟ್ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಹಲವರು ಸುರಕ್ಷತೆ ಕುರಿತು ಗಮನ ಸೆಳೆದಿದ್ದಾರೆ. ಚಾರ್ಜಿಂಗ್, ಬ್ಯಾಟರಿ, ಎಸಿ ಮೋಟಾರ್, ಹೀಗೆ ಎಲೆಕ್ಟ್ರಾನಿಕ್ ವಸ್ತುಗಳು ಜೊತೆಗೆ ಬಿರು ಬಿಸಿಲಿನ ಕಾರಣ ಬ್ಯಾಟರಿ ಸ್ಫೋಟ, ಶಾರ್ಟ್ ಸರ್ಕ್ಯೂಟ್ ಸೇರಿದಂತೆ ಇತರ ಯಾವುದೇ ಅನಾಹುತಗಳಿಂದ ಸುರಕ್ಷತೆ ನೀಡುವಂತೆ ಖಾತ್ರಿಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬೇಸಿಗೆ ಸಾಕಪ್ಪಾ ಸಾಕು; ಬ್ರೇನ್ ಸ್ಟ್ರೋಕ್ ಬಗ್ಗೆ ಹುಷಾರಾಗಿರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ