
ನವದೆಹಲಿ(ನ.25): ಕೊರೋನಾ ಲಸಿಕೆಯ ಪ್ರಭಾವದ ಅವಧಿ ಕುರಿತು ಪ್ರಶ್ನೆಗಳು ಎದ್ದಿರುವ ಹೊತ್ತಲ್ಲೇ, ಲಸಿಕೆಗಳು ಮಾನವನ ದೇಹಕ್ಕೆ 9 ತಿಂಗಳಿನಿಂದ 1 ವರ್ಷದ ವರೆಗೆ ಸೋಂಕಿನಿಂದ ರಕ್ಷಣೆ ನೀಡಲಿವೆ ಎಂದು ದಿಲ್ಲಿ ಏಮ್ಸ್ ಆಸ್ಪತ್ರೆ ಮುಖ್ಯಸ್ಥ ಡಾ| ರಣದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ವಿತರಣೆಗೆ ರಾಜ್ಯದಲ್ಲಿ 29500 ಕೇಂದ್ರ, 10 ಸಾವಿರ ಸಿಬ್ಬಂದಿ!
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಕೊರೋನಾ ಲಸಿಕೆಯು ಭಾರೀ ಪ್ರಮಾಣದ ಜನರನ್ನು ಈ ವೈರಸ್‌ನಿಂದ ರಕ್ಷಣೆ ಮಾಡಲಿದೆ. ತನ್ಮೂಲಕ ಕೊರೋನಾ ಹಬ್ಬುವ ಸರಪಳಿಗೆ ಬ್ರೇಕ್ ಹಾಕಲು ಅನುಕೂಲವಾಗಲಿದೆ. ಆದರೆ ಕೊರೋನಾ ವೈರಸ್ ಅನ್ನು ಮಾತ್ರ ಸಂಪೂರ್ಣವಾಗಿ ಮಟ್ಟಹಾಕಲಾಗದು ಎಂದಿದ್ದಾರೆ.
ಮೊದಲಿಗೆ 1 ಕೋಟಿ ಆರೋಗ್ಯ ಸಿಬ್ಬಂದಿಗೆ ಕೊರೋನಾ ಲಸಿಕೆ!
ಅಲ್ಲದೇ ಮುಂದಿನ ಕೆಲ ವರ್ಷಗಳ ಕಾಲ ಈ ವೈರಸ್ ಜೀವಂತವಾಗಿರಲಿದೆ. 2023ರ ಹೊತ್ತಿಗೆ ಕೊರೋನಾ ವೈರಸ್ ಸಾಮರ್ಥ್ಯ ತೀರಾ ಕನಿಷ್ಠಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ