'ಲವ್ ಜಿಹಾದ್' ಬಲವಂತದ ಮತಾಂತರ; ಯೋಗಿ ಸರ್ಕಾರ ಸುಗ್ರಿವಾಜ್ಞೆ.. ಜೈಲು+ದಂಡ!

By Suvarna NewsFirst Published Nov 24, 2020, 11:26 PM IST
Highlights

ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು/ ಸುಗ್ರೀವಾಜ್ಞೆ ಹೊರಡಿಸಿದ ಉತ್ತರ ಪ್ರದೇಶ ಸರ್ಕಾರ/  ಬಲವಂತದ ಮತಾಂತರಕ್ಕೆ ಜೈಲು ಶಿಕ್ಷೆ ಮತ್ತು ದಂಡ/ ಉತ್ತರ ಪ್ರದೇಶ ಸರ್ಕಾರದ ದಿಟ್ಟ ಹೆಜ್ಜೆ

ಲಕ್ನೋ(ನ. 24)  ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಮೊಟ್ಟ ಮೊದಲು ಹೇಳಿದ್ದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅದನ್ನು ಪೂರ್ಣ ಮಾಡಿದೆ. ವಿವಾಹಕ್ಕಾಗಿ ಧಾರ್ಮಿಕ ಮತಾಂತರವಾಗುವುದರ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿದೆ 

ಅನ್ಯಧರ್ಮೀಯರನ್ನು ಪ್ರೇಮಿಸಿ ವಿವಾಹವಾಗುವುದಕ್ಕೆ ಧಾರ್ಮಿಕ ಮತಾಂತರವಾಗುವುದನ್ನು ಬಿಜೆಪಿ ನಾಯಕರು ಲವ್ ಜಿಹಾದ್ ಎಂದು ಹೇಳುತ್ತಿದ್ದು, ಅದನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಿದೆ.

ಸಂಗಾತಿ ಜತೆ ಬಾಳಲು ಎಲ್ಲರೂ ಸ್ವತಂತ್ರ ಎಂದ ಕೋರ್ಟ್

ಲವ್ ಜಿಹಾದ್ ಎಂಬ ಪದವನ್ನು ಬಳಕೆ ಮಾಡದಿದ್ದರೂ ಮದುವೆಯಾಗುವುದಕ್ಕೆ ಮತಾಂತರ ಎಂಬ ಅರ್ಥವನ್ನು ಉಲ್ಲೇಖಮಾಡಲಾಗಿದೆ. 

ಬಲವಂತದ ಮತಾಂತರ ಮಾಡಿದರೆ 1 ರಿಂದ  5 ವರ್ಷ ಜೈಲು,  15  ಸಾವಿರ ದಂಡ ವಿಧಿಸಬಹುದಾಗಿದೆ.  ಅಪ್ರಾಪ್ತರು ಮತ್ತು ಎಸ್ಸಿ ಹಾಗೂ ಎಸ್ ಟಿ ಸಮುದಾಯದವರನ್ನು ಮತಾಂತರ ಮಾಡಲು ಯತ್ನಿಸಿದರೆ  3-10 ವರ್ಷ ಜೈಲು ಮತ್ತು 25,000 ದಂಡ ವಿಧಿಸಬಹುದಾಗಿದೆ.

ಒಂದು ವೇಳೆ ಸಮುದಾಯವನ್ನೇ ಮತಾಂತರ ಮಾಡಲು ಮುಂದಾದರೆ   3-10 ವರ್ಷ ಜೈಲು ಮತ್ತು50,000 ದಂಡ ವಿಧಿಸಬಹುದಾಗಿದೆ.  ಒಬ್ಬ ವ್ಯಕ್ತಿ ಮತಾಂತರಗೊಂಡು ಮದುವೆಯಾಗಲು ಬಯಸಿದರೆ ಆತ ಸಂಬಂಧಿಸಿದ ಅಧೀಕಾರಿಯ ಅನುಮತಿಯನ್ನು ಮದುವೆಗೂ ಎರಡೂ ತಿಂಗಳು ಮುನ್ನ ಪಡೆದುಕೊಳ್ಳಬೇಕಾಗುವುದು.

ಮಧ್ಯಪ್ರದೇಶ ಮತ್ತು ಹರ್ಯಾಣದ ನಂತರ ಉತ್ತರ ಪ್ರದೇಶ ಸರ್ಕಾರ ಇಂಥ ಹೆಜ್ಜೆ ಇಟ್ಟಿದೆ.  ಕರ್ನಾಟಕದಲ್ಲಿಯೂ ಲವ್ ಜಿಹಾದ್ ವಿರುದ್ಧ ಕಾನೂನು ತರುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಪರ ಮತ್ತು ವಿರೋಧದ ಪ್ರತಿಕ್ರಿಗಳು ವ್ಯಕ್ತವಾಗುತ್ತಿವೆ. 

click me!