ನಿಂತಲ್ಲೇ ಬೆವರಿದ ಪಾಕಿಸ್ತಾನ, PoK ತೊರೆಯಲು ವಿಶ್ವಸಂಸ್ಥೆಯಲ್ಲಿ ವಾರ್ನಿಂಗ್ ನೀಡಿದ ಭಾರತ!

By Suvarna News  |  First Published Sep 23, 2023, 5:14 PM IST

ಪಾಕ್ ಆಕ್ರಮಿತ ಕಾಶ್ಮೀರ ತೊರೆಯುವಂತೆ ಭಾರತದ ನಾಯಕರು ಕೆಲ ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಆದರೆ ಇದೇ ಮೊದಲ ಭಾರಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಅಧಿಕೃತ ಹೇಳಿಕೆ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರ ತೊರೆಯಲು ಖಡಕ್ ವಾರ್ನಿಂಗ್ ನೀಡಿದೆ. ಇದೀಗ ಪಾಕಿಸ್ತಾನ ನಿಂತಲ್ಲೇ ಬೆವತು ಹೋಗಿದೆ.
 


ನ್ಯೂಯಾರ್ಕ್(ಸೆ.23) ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನ ಮೇಲೆ ಏರ್‌ಸ್ಟ್ರೈಕ್ ಸೇರಿದಂತೆ ಕೆಲ ದಿಟ್ಟ ದಾಳಿ ನಡೆಸಿ ನಡುಕ ಹುಟ್ಟಿಸಿದೆ. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೆಲ ನಾಯಕರು ಪಾಕ್ ಆಕ್ರಮಿತ ಕಾಶ್ಮೀರ ತೊರೆಯುವಂತೆ ಸೂಚನೆ ನೀಡಿದ್ದರು. ಇದೀಗ ಭಾರತ ವಿಶ್ವಸಂಸ್ಥ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಇಷ್ಟೇ ಅಲ್ಲ ಇದೇ ಮೊದಲ ಬಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತೊರೆಯುವಂತೆ ಅಧಿಕೃತ ಹೇಳಿಕೆ ನೀಡಿದೆ. ಗಡಿ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ ತಾನು ಹೇಳಿದ್ದನ್ನು ಮಾಡುತ್ತಿದೆ. ಹೀಗಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕೈತಪ್ಪುವ ಭೀತಿ ಪಾಕಿಸ್ತಾನಕ್ಕೆ ಎದುರಾಗಿದೆ.

ವಿಶ್ವಸಂಸ್ಥೆಯ 78ನೇ ಜನರಲ್ ಅಸೆಂಬ್ಲೆಯಲ್ಲಿ ಪಾಕಿಸ್ತಾನ ಮಧ್ಯಂತರ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಕಾಶ್ಮೀರ ವಿಚಾರ ಕೆದಕಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ವಿಶ್ವಸಂಸ್ಥೆಯ ಭಾರತದ ಸೆಕ್ರೆಟರಿ ಪೀಟಲ್ ಗೆಹ್ಲೋಟ್,ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುವ ಪಾಕಿಸ್ತಾನ, ಭಾರತದ ವಿರುದ್ಧ ಮಾತನಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆ ನಿಲ್ಲಿಸಬೇಕು. ಇಷ್ಟೇ ಅಲ್ಲ ಪಾಕಿಸ್ತಾನ ಅಕ್ರಮಿತ ಕಾಶ್ಮೀರ ಪ್ರದೇಶ ತೊರೆಯಬೇಕು. ಇದು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಪೀಟಲ್ ಗೆಹ್ಲೋಟ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

Tap to resize

Latest Videos

ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪಾಕ್ ಕ್ರಿಕೆಟಿಗ, ಟ್ರೋಲ್ ಮಾಡಿದವರಿಗೆ ಕೊಟ್ಟ ಉತ್ತರ ವೈರಲ್!

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಕೇಂದ್ರಾಡಳಿತ ಪ್ರದೇಶ. ಇದು ಭಾರತದ ಅವಿಭಾಜ್ಯ ಅಂಗ. ಇಲ್ಲಿನ ಅಭಿವೃದ್ಧಿ, ಮೂಲಭೂತ ಸೌಕರ್ಯ ಕಲ್ಪಿಸುವುದು ಭಾರತದ ಆತಂರಿಕ ವಿಚಾರ. ಪಾಕಿಸ್ತಾನ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ಭಾರತ ಹೇಳಿದೆ. ಭಾರತದ ವಿಚಾರದಲ್ಲಿ ಮಾತನಾಡುವ ಪಾಕಿಸ್ತಾನ, 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಆರೋಪಿಗಳು, ಪ್ರಕರಣದ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣ ನಿಲ್ಲಿಸಲು ಕ್ರಮಕೈಗೊಳ್ಳಲಿ. ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಪಾಲನೆ ಅತ್ಯಂತ ಕೆಟ್ಟದಾಗಿದೆ. ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಹಕ್ಕುಗಳ ಪಾಕಿಸ್ತಾನದಲ್ಲಿ ನರಕಕ್ಕೆ ಸಮಾನ ಎಂದು ಭಾರತ ಹೇಳಿದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಮಾತ್ರವಲ್ಲ, ಕ್ರಿಶ್ಟಿಯನ್ನರು ದಾಳಿಗೊಳಗಾಗಿದ್ದಾರೆ. ಆಗಸ್ಟ್ 2023ರಲ್ಲಿ 19 ಚರ್ಚ್‌ಗಳನ್ನು ಧ್ವಂಸ ಮಾಡಲಾಗಿದೆ. 89ಕ್ಕೂ ಹೆಚ್ಚು ಕ್ರಿಶ್ಚಿಯನ್ ಸಮುದಾಯದ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗುತ್ತದೆ. ಅಪಹರಣ ಮಾಡಿ ಚಿತ್ರಹಿಂಸೆ ನೀಡಲಾಗುತ್ತದೆ. ಹಿಂದೂ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಮತಾಂತರ ಮಾಡಿ ಮದುವೆ ಮಾಡಲಾಗುತ್ತದೆ. ಕಳೆದ ಕೆಲ ತಿಂಗಳಲ್ಲಿ 1,000ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅಪಹರಣ, ಮತಾಂತರ ಮಾಡಲಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮಾನ ಹರಾಜು ಹಾಕಿದೆ.

ಸಾಕಾಯ್ತು ಪಾಕಿಸ್ತಾನ ಸಹವಾಸ, ಅಕ್ಟೋಬರ್‌ನಲ್ಲಿ ಅಂಜು ಭಾರತಕ್ಕೆ ವಾಪಸ್!

ಪಾಕಿಸ್ತಾನ ಭಯೋತ್ಪಾದಕರ ಕೇಂದ್ರವಾಗಿದೆ. ಭಯೋತ್ಪಾದಕರ ಮಾತಿಗೆ ತಕ್ಕ ಕುಣಿಯುವ ಪಾಕಿಸ್ತಾನ ಭಾರತದ ಮೇಲೆ ಉಗ್ರರ ಚೂಬಿಡುತ್ತಿದೆ. ಪಾಕಿಸ್ತಾನ ಕ್ರಾಸ್ ಬಾರ್ಡರ್ ಟೆರರಿಸಂ ನಿಲ್ಲಿಸಲಿ ಎಂದು ಭಾರತ ಹೇಳಿದೆ.
 

click me!