ಸುರಂಗದೊಳಗಿ ಕಾರ್ಮಿಕ ರಕ್ಷಣೆಗೆ ಇನ್ನೂ 4 ದಿನ, ಅಂತಿಮ ಹಂತದಲ್ಲಿ ಮುರಿದು ಬಿದ್ದ ಮಶಿನ್!

By Suvarna NewsFirst Published Nov 26, 2023, 11:46 PM IST
Highlights

ಸುರಂಗದೊಳಗಿನಿಂದ ಮಣ್ಣು ಬಿದ್ದ ಜಾಗವನ್ನು ಕೊರೆಯುತ್ತಾ ಕಾರ್ಮಿಕರ ರಕ್ಷಣೆ ಮುಂದಾಗಿದ್ದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಕಾರ್ಯಾಚರಣೆಯಲ್ಲಿ ಯಂತ್ರಗಳೇ ತುಂಡಾಗಿದೆ. ಇದೀಗ ಭೂಮಿ ಮೇಲಿಂದ ರಂಧ್ರ ಕೊರೆಯುವ ಕಾರ್ಯಾಚರಣೆ ಆರಂಭಿಸಲಾಗಿದೆ. ಹೀಗಾಗಿ ಇನ್ನೂ 4 ದಿನ ಅವಶ್ಯಕತೆ ಇದೆ.
 

ಉತ್ತರಕಾಶಿ(ನ.26) ಉತ್ತರಖಂಡದ ಸಿಲ್‌ಕ್ಯಾರಾ ಹೆದ್ದಾರಿ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಕಾರ್ಮಿಕ ರಕ್ಷಣೆ ದಿನದಿಂದ ದಿನಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಆರಂಭಿಕ ಹಂತದಲ್ಲಿ ಸುಲಭವಾಗಿ  ಹೊರತೆಗಯುವ ಲಕ್ಷಣಗಳು ಕಾಣಿಸಿತ್ತು. ಆದರೆ ಒಂದೊಂದೇ ದಿನ ಕಳೆದಂತೆ ಕಾರ್ಮಿಕರ ರಕ್ಷಣೆಯಲ್ಲಿ ಹಿನ್ನಡೆ ಹೆಚ್ಚಾಗುತ್ತಿದೆ. ಸುರಂದಗೊಳಗೆ ಭಾರಿ ಗಾತ್ರ ಯಂತ್ರಗಳ ಕೊಂಡೊಯ್ದು ಕುಸಿದು ಬಿದ್ದ ಮಣ್ಣು ಕೊರೆಯುವ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ. 10 ರಿಂದ 12 ಮೀಟರ್ ಕಾರ್ಯಾಚರಣೆ ಬಾಕಿ ಇರುವ ವೇಳೆ ಯಂತ್ರಗಳ ಬ್ಲೇಡ್ ತುಂಡಾಗಿದೆ. ಸಂಪೂರ್ಣ ಯಂತ್ರವೇ ಹಾಳಾಗಿದೆ. ಹೀಗಾಗಿ ಈ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದೀಗ ಮೇಲಿನಿಂದ ಕಳಕ್ಕೆ ಭೂಮಿಯನ್ನು ಕೊರೆಯುವ ಕಾರ್ಯ ಆರಂಭಗೊಂಡಿದೆ. ಈ ಮೂಲಕ ಕಾರ್ಮಿಕರ ರಕ್ಷಣೆಗೆ 4 ರಿಂದ 5 ದಿನದ ಅವಶ್ಯಕತೆ ಇದೆ.

ಸುರಂಗದ ಮೇಲಿನಿಂದ ಕಾರ್ಮಿಕರ ಇರುವ ಸ್ಥಳಕ್ಕೆ ರಂಧ್ರ ಕೊರೆಯುವ ಕಾರ್ಯ ಆರಂಭಿಸಲಾಗಿದೆ. 86 ಮೀಟರ್ ಆಳಕ್ಕೆ ರಂಧ್ರ ಕೊರೆಯಬೇಕಿದೆ. ಮೊದಲ ದಿನ ಸುಮಾರು 20 ಮೀಟರ್ ಆಳ ರಂಧ್ರ ಕೊರೆಯಲಾಗಿದೆ. ಮಣ್ಣಿನ ಮೇಲ್ಬಾಗವಾಗಿರುವ ಕಾರಣ ಮೊದಲ ದಿನ 20 ಮೀಟರ್‌ನಷ್ಟು ಕೊರೆಯಲಾಗಿದೆ. ಆದರೆ 40 ಮೀಟರ್ ಬಳಿಕ ಈ ವೇಗದಲ್ಲಿ ಕಾರ್ಯಾಚರಣೆ ಸಾಗುವುದಿಲ್ಲ. ಸೂಕ್ಷ್ಮತೆ, ಕುಸಿತ, ಸೇರಿದಂತೆ ಹಲವು ಸವಾಲುಗಳು ಎದುರಾಗುವ ಕಾರಣ ಕಾರ್ಯಾಚರಣೆ ವಿಳಂಬವಾಗಲಿದೆ. ಸದ್ಯದ ವೇಗದಲ್ಲಿ ಕಾರ್ಯಾಚರಣೆ ಮುಂದುವರಿದರೆ 4 ರಿಂದ 5 ದಿನ ಕಾರ್ಮಿಕರ ರಕ್ಷಣೆಗೆ ತಗುಲುವ ಸಾಧ್ಯತೆ ಇದೆ.

ಅಂತಿಮ ಹಂತದಲ್ಲಿ ಮತ್ತೆ ಎದುರಾದ ವಿಘ್ನ, ಸುರಂಗದ ಕಾರ್ಮಿಕರ ರಕ್ಷಣಾ ಕಾರ್ಯ ಮತ್ತೆ ಸ್ಥಗಿತ!

ಭಾರತೀಯ ಸೇನೆ ಮೇಲಿನಿಂದ ರಂಧ್ರ ಕೊರೆಯುವ ಕಾರ್ಯದಲ್ಲಿ ನಿರತವಾಗಿದೆ. ಒಂದು ವಾರದಲ್ಲಿ ಕಾರ್ಮಿಕರ ರಕ್ಷಣೆ ಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ರಂಧ್ರ ಕೊರೆಯುವ ವೇಳೆ ಮತ್ತೆ ಸವಾಲು ಎದುರಾದರೇ ಕಾರ್ಯಾಚರಣೆ ವಿಳಂಬವಾಗಲಿದೆ. 

ದಿಢೀರ್ ಮಣ್ಣು ಕುಸಿದಿಂದ ಸಿಲುಕಿದ್ದ ಕಾರ್ಮಿಕರ ರಕ್ಷಣೆಗೆ ಅಮರಿಕದ ಅಗರ್ ಮಶಿನ್ ತರಲಾಗಿತ್ತು. ಸುರಂಗದೊಳಗಿನಿಂದ 56 ಮೀಟರ್ ರಂಧ್ರ ಕೊರೆಯುವ ಕಾರ್ಯ ಆರಂಭಿಸಲಾಗಿತ್ತು. ಆ ಪೈಕಿ 45 ಮೀಟರ್‌ವರೆಗೆ ಅಗೆದು ರಕ್ಷಣಾ ಪೈಪ್‌ ಅಳವಡಿಸಲಾಗಿತ್ತು. ಪೂರ್ತಿ ಕೊರೆದಾದ ಮೇಲೆ ರಕ್ಷಣಾ ಪೈಪ್‌ನೊಳಗೆ ಸ್ಟ್ರೆಚರ್‌ ಮೇಲೆ ಕಾರ್ಮಿಕರನ್ನು ಮಲಗಿಸಿ ಹೊರಗೆಳೆಯುವ ಯೋಜನೆ ರೂಪಿಸಲಾಗಿತ್ತು. ಆದರೆ ಈ ಕಾರ್ಯಾಚರಣೆ ಕೈಬಿಡಲಾಗಿದೆ.

ಸುರಂಗದಲ್ಲಿ ಸಿಲುಕಿರುವ 41 ಜನರ ನೆರವಿಗೆ ಪೈಪ್‌: ಘನಾಹಾರ ಪೂರೈಕೆ, ರಕ್ಷಣಾ ಕಾರ್ಯಕ್ಕೆ ಮೊದಲ ಯಶಸ್ಸು

ಇತ್ತ ಕಾರ್ಮಿಕರ ರಕ್ಷಣೆಗೆ ಸ್ಥಳೀಯರು ಗ್ರಾಮ ದೇವತೆಯ ಪೂಜೆಯಲ್ಲಿ ತೊಡಗಿದ್ದಾರೆ. 41 ಕಾರ್ಮಿಕರ ಸುರಕ್ಷಿತವಾಗಿ ಹೊರಬರುವಂತೆ ಸ್ಥಳೀಯರು ಗ್ರಾಮ ದೇವರ ಮೊರೆ ಹೋಗಿದ್ದಾರೆ. ಇದಕ್ಕಾಗಿ ವಿಶೇಷ ಪೂಜೆ ದೈನಂದಿನ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಸ್ಥಳೀಯ ರಾಜೇಶ್‌ ರಾವತ್,‘ ಇಲ್ಲಿನ ಮೂಲ ದೇವ ಬಾಬಾ ಭೂಕನಾಗ್‌ನನ್ನು ದಿನಂಪ್ರತಿ ಪ್ರಾರ್ಥಿಸುತ್ತಿದ್ದೇವೆ. ಇದರಿಂದಾಗಿ ಕಾರ್ಮಿಕರು ಸುರಕ್ಷಿತವಾಗಿ ಹೊರಬರುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ’ ಎಂದರು.
 

click me!