ಉತ್ತರಾಖಂಡ ಸಚಿವ ಸತ್ಪಾಲ್ ಮಹಾರಾಜ್, ಪತ್ನಿ, ಪುತ್ರಗೆ ಸೋಂಕು| ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ 22 ಮಂದಿಗೆ ಕೊರೋನಾ
ಡೆಹ್ರಾಡೂನ್(ಜೂ.01): ಉತ್ತರಾಖಂಡದ ಸಚಿವ ಸತ್ಪಾಲ್ ಮಹಾರಾಜ್, ಅವರ ಪತ್ನಿ ಅಮೃತಾ ರಾವತ್ ಹಾಗೂ ಪುತ್ರನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರಲ್ಲದೆ, ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ 22 ಮಂದಿಗೆ ಕೊರೋನಾ ತಗುಲಿದೆ.
ಇದೇ ವೇಳೆ, ಶುಕ್ರವಾರವಷ್ಟೇ ಮಹಾರಾಜ್ ಅವರು ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಮುಖ್ಯಮಂತ್ರಿ ಹಾಗೂ ಇಡೀ ಸಂಪುಟದ ಸಚಿವರಿಗೆ ಕೊರೋನಾ ಭೀತಿ ಆರಂಭವಾಗಿದೆ. ಮಾಜಿ ಸಚಿವೆಯಾಗಿರುವ ಅಮೃತಾ ರಾವತ್ ಅವರಿಗೆ ಮೊದಲು ಕೊರೋನಾ ದೃಢಪಟ್ಟಿತ್ತು.
ಚೀನಾಕ್ಕೆ ಸೆಡ್ಡು ಹೊಡೆದ ಉತ್ತರ ಕನ್ನಡದ ಶ್ರೀರಾಮ್ ಭಟ್
ಅವರನ್ನು ಹೃಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸತ್ಪಾಲ್ ಹಾಗೂ ಕುಟುಂಬದ ಸದಸ್ಯರು, ಸಿಬ್ಬಂದಿ ಸೇರಿ 22 ಮಂದಿಯನ್ನು ಪರೀಕ್ಷಿಸಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈಗ ಇವರಿಗೆಲ್ಲ ಸೋಂಕು ದೃಢಪಟ್ಟಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.