ರಾಜೀವ್‌ಗಾಂಧಿ ವಿವಿಯಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾದ ಸಂದರ್ಭ ಇಡೀ ವಿಶ್ವದಲ್ಲಿ ಕೊರೋನಾ ಮಹಾಮಾರಿಯಂತೆ ವ್ಯಾಪಿಸಿಕೊಂಡಿತ್ತು. ಸಾಲು ಸಾಲು ಸಾವುಗಳು ಸಂಭವಿಸುತ್ತಿದ್ದವು. ಆದರೆ, ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ವೈದ್ಯಕೀಯ ತಜ್ಞರು ತೋರಿದ ಕಾಳಜಿ, ಆರೈಕೆ ಮತ್ತು ಮುಂಜಾಗ್ರತಾ ಕ್ರಮಗಳು ಭಾರತಕ್ಕೆ ಮುನ್ನುಡಿ ಬರೆದವು ಎಂದರೆ ಅತಿಶಯೋಕ್ತಿಯಲ್ಲ.
ಕೊರೋನಾ ಅಂದಾಕ್ಷಣ ಕಣ್ಣೆದುರಿಗೆ ಬಂದು ನಿಲ್ಲೋದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ. ರಾಜ್ಯದಲ್ಲಿ ಕೋವಿಡ್ ವೈರಸ್‌ನ ಸಾವಿನ ಬಲೆಗೆ ಹೆಚ್ಚುಬಲಿ ಆಗದಂತೆ ನಿಯಂತ್ರಣ ಸಾಧಿಸುವಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಪಾತ್ರ ಬಹಳ ದೊಡ್ಡದು.
ಭಾರತೀಯ ವೈದ್ಯಕೀಯ ಚಿಕಿತ್ಸೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ದಾಪುಗಾಲಿಟ್ಟ ಪ್ರತಿಷ್ಠಿತ ಸಂಸ್ಥೆಗಳ ಪೈಕಿ ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಂತಹ ಪ್ರತಿಷ್ಠಿತ ವೈದ್ಯಕೀಯ ಚಿಕಿತ್ಸಾ ಮತ್ತು ಸಂಶೋಧನಾ ಸಂಸ್ಥೆ 25 ವರ್ಷಗಳನ್ನು ದಾಟಿ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುವ ಹೊಸ್ತಿಲಲ್ಲಿದೆ.
undefined
ಅವಿಸ್ಮರಣೀಯ ಮಹೋತ್ಸವ
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ 25 ವರ್ಷ ತುಂಬಿದ ಈ ಸಂದರ್ಭ 2 ಕಾರಣಕ್ಕೆ ಮಹತ್ವ ಪಡೆದುಕೊಳ್ಳುತ್ತದೆ. ಒಂದು, ಕಳೆದ 25 ವರ್ಷಗಳಲ್ಲಿ ಆರೋಗ್ಯ ವಿವಿಯು ವೈದ್ಯಕೀಯ ಕ್ಷೇತ್ರವನ್ನು ವಿಸ್ತರಿಸಿದ, ವಿಶ್ಲೇಷಿಸಿದ ಮತ್ತು ವಿಷಮ ಸ್ಥಿತಿಗಳಿಂದ ಪಾರುಮಾಡಿದ ಕಾಲಘಟ್ಟ. ಮತ್ತೊಂದು ಕಳೆದ ಮೂರು ತಿಂಗಳಲ್ಲಿ ಮಹಾಮಾರಿ ಕೊರೋನಾ ವಿರುದ್ಧ ಹೋರಾಟಕ್ಕೆ ನಿಂತ ಕಾಲಘಟ್ಟ. ಈ ಕಾರಣಕ್ಕೆ 25 ವರ್ಷಗಳ ಬೆಳ್ಳಿ ಮಹೋತ್ಸವ ಅಥವಾ ಸಂಸ್ಥಾಪನಾ ದಿನಾಚರಣೆ ಜೂನ್-1 ರಂದು ನಡೆಯುತ್ತಿರುವುದು ಅರ್ಥಗರ್ಭಿತ, ಅವಿಸ್ಮರಣೀಯ ಮತ್ತು ಐತಿಹಾಸಿಕವೂ ಹೌದು.
ಬೆಂಗಳೂರು ದೇಶಕ್ಕೇ ಮಾದರಿ ಇದಕ್ಕೆ ಡಾ. ಕೆ. ಸುಧಾಕರ್ ಕಾರಣ!
ಆತ್ಮಸ್ಥೈರ್ಯ ತುಂಬಿದ್ದು ಈ ವಿವಿ
ರಾಜೀವ್‌ಗಾಂಧಿ ವಿವಿಯಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾದ ಸಂದರ್ಭ ಇಡೀ ವಿಶ್ವದಲ್ಲಿ ಕೊರೋನಾ ಮಹಾಮಾರಿಯಂತೆ ವ್ಯಾಪಿಸಿಕೊಂಡಿತ್ತು. ಸಾಲು ಸಾಲು ಸಾವುಗಳು ಸಂಭವಿಸುತ್ತಿದ್ದವು. ಆದರೆ, ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ವೈದ್ಯಕೀಯ ತಜ್ಞರು ತೋರಿದ ಕಾಳಜಿ, ಆರೈಕೆ ಮತ್ತು ಮುಂಜಾಗ್ರತಾ ಕ್ರಮಗಳು ಭಾರತಕ್ಕೆ ಮುನ್ನುಡಿ ಬರೆದವು ಎಂದರೆ ಅತಿಶಯೋಕ್ತಿಯಲ್ಲ. ದೆಹಲಿ, ಪುಣೆ, ಚೆನ್ನೈ, ಹೈದರಾಬಾದ್‌ನಂತಹ ನಗರಗಳಲ್ಲಿ ಇರುವ ಪ್ರತಿಷ್ಠಿತ ಸಂಸ್ಥೆಗಳೇ ಈ ಸಾಂಕ್ರಾಮಿಕ ವೈರಸ್‌ನತ್ತ ಆತಂಕಕಾರಿ ಕಣ್ಣುಗಳಿಂದ ನೋಡುತ್ತಿರುವ ಹೊತ್ತಿನಲ್ಲಿ, ರಾಜ್ಯಮಟ್ಟದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯೊಂದು ಅತ್ಯಂತ ಯಶಸ್ಸಿನ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದ್ದು ಕಡಿಮೆ ಸಾಧನೆಯಲ್ಲ.
ಅಮೆರಿಕದಿಂದ ಹಿಡಿದು ನಿಕೋಬಾರ್ ದ್ವೀಪದವರೆಗೂ ಜಗತ್ತಿನ ಅಷ್ಟೂರಾಷ್ಟ್ರಗಳನ್ನು ಕೊರೋನಾ ಜಾಡ್ಯ ವ್ಯಾಪಿಸಿದೆ. ಇಂತಹ ಹೊತ್ತಲ್ಲಿ 137ಕೋಟಿ ಜನಸಂಖ್ಯೆಯ ರಾಷ್ಟ್ರ ಭಾರತಕ್ಕೆ ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮಸ್ಥೈರ್ಯ ತುಂಬಿದ್ದು ರಾಜೀವ್ ಗಾಂಧಿ ಆರೋಗ್ಯ ವಿವಿಯಂತಹ ವೈದ್ಯಕೀಯ ಸಂಸ್ಥೆಗಳು. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕೊರೋನಾ ಆಕ್ರಮಿಸಿಕೊಳ್ಳುವ ವೇಗ ಮತ್ತು ಡೆಡ್ಲಿ ವೈರಸ್‌ಗೆ ಬಲಿಯಾಗುವವರ ಪ್ರಮಾಣ ಇಡೀ ದೇಶದಲ್ಲೇ ಕಡಿಮೆಯಿದೆ ಎಂದರೆ ಅದಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ಹಾಕಿಕೊಟ್ಟಬುನಾದಿ ಮತ್ತು ಇತರೆ ಆಸ್ಪತ್ರೆಗಳಲ್ಲಿ ಮೆಡಿಕಲ್ ವಾರಿಯರ್ಸ್ ಕೈಗೊಂಡ ಸೇವಾ ಮನೋಭಾವವೇ ಕಾರಣ.
ಕೊರೋನಾ ಎಫೆಕ್ಟ್: ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರ್ಕಾರ, ದೇಶದಲ್ಲಿಯೇ ಮೊದಲ ಪ್ರಯತ್ನ
ಬೆಳ್ಳಿ ಮಹೋತ್ಸವ ಸಂಭ್ರಮ
ಕರ್ನಾಟಕದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಹುಟ್ಟುಪಡೆದಿದ್ದೇ ಒಂದು ವಿಶಿಷ್ಠ ಸಂದರ್ಭ. 1991ರಲ್ಲಿ ಯುವ ಪ್ರಧಾನಿ ರಾಜೀವ್ ಗಾಂಧಿ ಅಕಾಲಿಕ ದುರ್ಮರಣಕ್ಕೆ ಒಳಗಾಗಿದ್ದರು. ಅವರ ಸ್ಮರಣಾರ್ಥವಾಗಿ 1994ರಲ್ಲಿ ಕರ್ನಾಟಕ ರಾಜ್ಯ ಕಾಯ್ದೆ ಅಡಿಯಲ್ಲಿ ಕರ್ನಾಟಕದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತ್ತು.
1994 ರಲ್ಲಿ ರಾಜೀವ್ ಗಾಂಧಿ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಎಂಬ ಹೆಸರಿನಲ್ಲಿ ಈ ವಿವಿ ಕಾರ್ಯಾರಂಭ ಮಾಡಿತ್ತು. ವಿವಿಯ ಪ್ರಥಮ ಉಪಕುಲಪತಿ ಡಾ.ಎಸ್.ಕಾಂತ ಅವರ ನೇತೃತ್ವದಲ್ಲಿ ಜೂನ್-1 ರಂದು ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರತಿವರ್ಷ ಸಂಸ್ಥಾಪನಾ ದಿನಾಚರಣೆ ನಡೆಸಲಾಗುತ್ತಿದೆ. ಇಂದಿಗೆ (ಜೂ-1-1996) ಈ ಆಸ್ಪತ್ರೆ ಉದ್ಘಾಟನೆಯಾಗಿ 25ವರ್ಷ ತುಂಬಿದೆ.
ಪ್ರಧಾನಿ ಮೋದಿಯಿಂದ ಉದ್ಘಾಟನೆ
ಈ 25 ವರ್ಷಗಳ ವಿವಿಯ ಹಾದಿಯಲ್ಲಿ ಹಲವು ವೈದ್ಯಕೀಯ ಶಿಕ್ಷಣ ಸಚಿವರ, ಅಧಿಕಾರಿಗಳ, ಸಂಶೋಧಕರ, ಬೋಧಕ-ಬೋಧಕೇತರ, ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮವಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿಯ ಒಂದೊಂದು ಕಲ್ಲೂ ಒಂದೊಂದು ಸಾಧನೆಗಳನ್ನು ಹೇಳುತ್ತವೆ. ಈ ಬೆಳ್ಳಿ ಮಹೋತ್ಸವವನ್ನು ಪ್ರಧಾನಾ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜೂನ್ 1 ರಂದು ಉದ್ಘಾಟಿಸುತ್ತಿರುವುದು ನಮ್ಮಲ್ಲೆರ ಸೌಭಾಗ್ಯ. ಕಳೆದ 25ವರ್ಷಗಳಲ್ಲಿ ಆಧುನಿಕ ಸಂಶೋಧನೆಗಳ ಮೂಲಕ ಇಡೀ ದೇಶದಲ್ಲಿಯೇ ಅತ್ಯಾಧುನಿಕ ಉಪಕರಣಗಳುಳ್ಳ ಸಂಶೋಧನಾ ವಿಶ್ವವಿದ್ಯಾಲಯ ಎಂದೇ ರಾಜೀವ್ ಗಾಂಧಿ ವಿವಿ ಹೆಸರಾಗಿದೆ.
ಕೋರೋನಾ ಕಂಟ್ರೋಲ್: ಬೆಂಗಳೂರು ಯಶಸ್ಸಿಗೆ 15 ಸೂತ್ರ..!
ದೇಶದ ಅತಿ ದೊಡ್ಡ ಆರೋಗ್ಯ ವಿವಿ
ದೇಶದಲ್ಲಿ 700ಕ್ಕೂ ಹೆಚ್ಚು ಆರೋಗ್ಯ ವಿಜ್ಞಾನ ಸಂಸ್ಥೆಗಳು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟು ಸಂಯೋಜಿತವಾಗಿವೆ. ಇದರಿಂದ ಈ ವಿಶ್ವವಿದ್ಯಾನಿಲಯ ದೇಶದ ಅತಿದೊಡ್ಡ ಆರೋಗ್ಯ ವಿವಿ ಎಂದೇ ಖ್ಯಾತಿಗಳಿಸಿದೆ.
ಆಧುನಿಕ ಔಷಧಿ ಮತ್ತು ಸಾಂಪ್ರದಾಯಿಕ ಔಷಧ ಕ್ಷೇತ್ರದ ಆರೋಗ್ಯ ವಿಜ್ಞಾನ ಬೋಧನೆ ಮತ್ತು ಸಂಶೋಧನೆ ಮಾಡುತ್ತಾ ಸಾಗಿರುವ ವಿವಿಯು ಜ್ಞಾನಧಾರೆಯನ್ನೇ ಹರಿಸುತ್ತಿದೆ. ಮಾನವ ಆರೋಗ್ಯ ಶಿಸ್ತು, ಸುಧಾರಿತ ಸಂಶೋಧನೆಯಲ್ಲಿ ಹೊಸ ಹೊಸ ದಾರಿಗಳನ್ನು ಈ ವಿವಿ ಕಂಡುಕೊಂಡಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ 700ಕ್ಕೂ ಹೆಚ್ಚು ಆರೋಗ್ಯ ವಿಜ್ಞಾನ ಸಂಸ್ಥೆಗಳು ಮಾನ್ಯತೆ ಪಡೆದಿವೆ.
ಪ್ರತಿವರ್ಷ 65 ಸಾವಿರ ವಿದ್ಯಾರ್ಥಿಗಳು ಆರೋಗ್ಯ ವಿಜ್ಞಾನದ ವಿವಿಧ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ಅಡಿಯಲ್ಲಿ 2,50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಮೆಡಿಕಲ… ಸೂಪರ್ ಸ್ಪೆಷಾಲಿಟಿಯ 52 ಕಾಲೇಜುಗಳಿದ್ದು, 6200 ವಿದ್ಯಾರ್ಥಿಗಳಿದ್ದಾರೆ. 43 ಉನ್ನತ ಶಿಕ್ಷಣ ಕಾಲೇಜುಗಳಲ್ಲಿ 2506 ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
ದಂತ ವೈದ್ಯಕೀಯ ಶಿಕ್ಷಣದಲ್ಲಿ ರಾಜೀವ್ ಗಾಂಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಸಾಧನೆ ಗಮರ್ನಾಹವಾದುದು. 38 ದಂತ ವೈದ್ಯಕೀಯ ಕಾಲೇಜುಗಳಲ್ಲಿ 2780 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೇಅಲ್ಲ, ದಂತ ವೈದ್ಯಕೀಯ ಉನ್ನತ ಶಿಕ್ಷಣದಲ್ಲಿ ಗಮನಾರ್ಹ ಸಾಧನೆಯನ್ನು ವಿವಿ ಅಡಿಯಲ್ಲಿ ಬರುವ ಸಂಸ್ಥೆಗಳು ಮಾಡಿವೆ. 30 ಉನ್ನತ ದಂತ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ 913 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪದವಿ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿವಿಯು ತನ್ನ ಪರೀಕ್ಷಾ ಪದ್ಧತಿಯಿಂದಲೇ ಇಡೀ ದೇಶಕ್ಕೆ ಮಾದರಿ ಎನ್ನಿಸಿದೆ.
ಪಾರದರ್ಶಕ ಪರೀಕ್ಷೆ
ವೈದ್ಯಕೀಯ ಪದವಿ ಶಿಕ್ಷಣ ಮತ್ತು ಸ್ನಾತಕೋತ್ತರ ಉನ್ನತ ವೈದ್ಯಕೀಯ ಶಿಕ್ಷಣ ಪದವಿ ಪರೀಕ್ಷೆಗಳನ್ನು ಗುಣಮಟ್ಟದ ದೃಷ್ಠಿಯಿಂದ ಆನ್‌ಲೈನ್ ಮೂಲಕ ಪರಿಚಯಿಸಿದ ದೇಶದ ಮೊದಲ ವಿವಿ ಎನ್ನಿಸಿಕೊಂಡಿದೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ. ಪರೀಕ್ಷೆಗೆ ಕೂರುವ 30 ನಿಮಿಷಗಳಿಗೆ ಮುನ್ನ ವಿದ್ಯಾರ್ಥಿಗೆ ಆನ್‌ಲೈನ… ಮೂಲಕ ಪ್ರಶ್ನೆ ಪತ್ರಿಕೆ ಕೈ ಸೇರುತ್ತದೆ. ಅಷ್ಟೇ ಅಲ್ಲ ಡಿಜಿಟಲ… ಮೌಲ್ಯಮಾಪನ ಮಾಡುವ ಮೂಲಕ ಅತ್ಯಂತ ಪಾರದರ್ಶಕತೆಯನ್ನು ವಿವಿ ಕಾಪಾಡಿಕೊಂಡಿದೆ.
ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡುವುದರಿಂದ ಹಿಡಿದು, ಉತ್ತರಿಸಿದ ಪ್ರತಿಗಳನ್ನು ಪ್ಯಾಕ್ ಮಾಡುವ ಕೊನೆಯ ಹಂತದವರೆಗೆ ವಿಡಿಯೋಗ್ರಾಫ್ ಮಾಡಲಾಗುತ್ತದೆ. ಇದರಿಂದ ಪರೀಕ್ಷೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ಪಾರದರ್ಶಕತೆಗೆ ಮೊತ್ತೊಂದು ಸಾಕ್ಷಿ.
ಪದವಿ ಪಡೆದ ವಿದ್ಯಾರ್ಥಿಗಳು ಅವರಿಗೆ ಬೇಕಾದ ದಾಖಲೆಗಳನ್ನು ಸುಲಭವಾಗಿ ದೊರಕುವಂತೆ ಮಾಡಲು ಆನ್‌ಲೈನ್ ವ್ಯವಸ್ಥೆ ಮಾಡಿರುವುದು ಮತ್ತೊಂದು ಪಾರದರ್ಶಕ ವಿಧಾನ. ಹಾಗೆಯೇ ಆರ್‌ಜೆಯುಎಚ್‌ಎಸ್ ಮಾಹಿತಿ ತಂತ್ರಜ್ಞಾನ ಅಳವಡಿಕೆ ಮತ್ತು ಬಳಕೆಯಲ್ಲಿ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ವಿಶ್ವವಿದ್ಯಾನಿಲಯ ನೀಡುವ ಯಾವುದೇ ಸೇವೆಗಳಿಗೆ ಸಂಸ್ಥೆ ಅಥವಾ ವಿದ್ಯಾರ್ಥಿ ಇ-ಪಾವತಿ’ಮಾಡಬಹುದು.
ಜೀವರ ರಕ್ಷಾ ಕಾರ್ಯಕ್ರಮ
ಕೋವಿಡ್-19 ಸೇರಿದಂತೆ ಎಲ್ಲಾ ರೀತಿಯ ಮಾರಕ ಕಾಯಿಲೆಗಳ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಜೀವ ರಕ್ಷಾ ಕಾರ್ಯಕ್ರಮದ ಮೂಲಕ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಇದರಿಂದ ತುರ್ತುಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಆರೋಗ್ಯಸೇವೆಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ.
ರಾಜೀವ್‌ಗಾಂಧಿ ಆರೋಗ್ಯ ವಿವಿ 2015ರಲ್ಲಿ ಸಂಶೋಧನಾ ವಿಭಾಗ ಪ್ರಾರಂಭಿಸಿತು. ಬೋಧನೆ ಆಧಾರಿತ ಸಂಶೋಧನೆಗಳನ್ನು ಎಲ್ಲಾ ಬೋಧನಾ ವಿಭಾಗಕ್ಕೂ ವಿಸ್ತರಿಸಲಾಗಿದೆ. ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅನುದಾನ ಪಡೆದ 2 ವರ್ಷಗಳಲ್ಲೇ ವಿದ್ಯಾರ್ಥಿ ಗುಣಮಟ್ಟದ ಸಂಶೋಧನೆ ಮುಗಿಸಿ ಪೇಟೆಂಟ್‌ಗೆ ಅರ್ಜಿಸಲ್ಲಿಸುತ್ತಿರುವುದು ಆರೋಗ್ಯ ವಿವಿಯ ಹೆಗ್ಗಳಿಕೆಯಲ್ಲಿ ಒಂದು. ಐಐಎಸ್ಸಿ, ಎನ್‌ಸಿಬಿಎಸ್, ಸಿಎಚ್‌ಜಿ ಮತ್ತು ಜೆಎನ್‌ಸಿಎಎಸ್‌ಆರ್ ಚಟುವಟಿಕೆಗಳ ಅಧ್ಯಾಪಕರನ್ನು ಒಳಗೊಂಡು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸಹ ಸಂಶೋಧನಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ದೇಶದ ಅತ್ಯುತ್ತಮ ಆರೋಗ್ಯ ವಿವಿಯಲ್ಲಿ ಒಂದುಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾನವೀಯತೆ ಮೆರೆದ ಸಚಿವ ಡಾ.ಕೆ. ಸುಧಾಕರ್
ಪದವಿ ಪೂರ್ವ ಸಂಶೋಧನೆಗಳು
ಸಂಶೋಧನೆಗಳಿಂದಲೇ ವೈದ್ಯಕೀಯ ಜಗತ್ತು ಹೊಸತನ್ನು ಕಂಡುಕೊಳ್ಳಲು ಸಾಧ್ಯ. ಹೀಗಾಗಿ ಸಂಶೋಧನೆಗಳಿಗೆ ಹೆಚ್ಚು ಒತ್ತು ಕೊಡುತ್ತಿರುವ ಆರೋಗ್ಯ ವಿವಿಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಒಂದು ಹೆಜ್ಜೆ ಮುಂದೆ ಇದೆ. ಸಂಶೋಧನಾ ಸಂಸ್ಕೃತಿಯನ್ನು ಪದವಿ ಪೂರ್ವ ದಿನಗಳಲ್ಲಿ ತರುವ ಉದ್ದೇಶದಿಂದ ಪದವಿಪೂರ್ವ ಸಂಶೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಈ ವಿದ್ಯಾರ್ಥಿಗೆ ಐಸಿಎಂಆರ್ ಮಾದರಿಯಲ್ಲೇ ಅನುದಾನ ನೀಡಲಾಗುತ್ತಿದೆ. ಈ ಚಟುವಟಿಕೆಯಿಂದ ಸಂಶೋಧನೆಗಳಲ್ಲಿ ಗುಣಮಟ್ಟಕಾಯ್ದುಕೊಳ್ಳಲು ಸಾಧ್ಯವಾಗಿದೆ. ಈ ಕಾರಣದಿಂದಲೇ ಅಂತಾರಾಷ್ಟ್ರೀಯ ವಿವಿಗಳು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಶಿಕ್ಷಣ ಸಹಭಾಗಿಗಳಾಗಿವೆ. ಇಂಗ್ಲೆಂಡ್, ಮಾಸ್ಟ್ರಿಚ್ ಮತ್ತು ನೆದರ್ಲೆಂಡ್ ವಿವಿಗಳು ಒಡಂಬಡಿಕೆಗೆ ಪ್ರವೇಶಿಸುವ ಪ್ರಕ್ರಿಯೆ ನಡೆಯುತ್ತಿರುವುದು ನಿಜಕ್ಕೂ ರಾಜ್ಯಕ್ಕೆ ಹೆಮ್ಮೆ.
25ನೇ ವರ್ಷದ ಸಂಭ್ರಮವನ್ನು ಸಾಕ್ಷಿಯಾಗಿಸಲು ಬೆಂಗಳೂರು ಹೊರವಲಯದ ಭೀಮನಕುಪ್ಪೆಯ 50 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸಂಶೋಧನಾ ತರಬೇತಿ ಸಂಸ್ಥೆ, ಸಾರ್ವಜನಿಕ ಆರೋಗ್ಯ ಸಂಸ್ಥೆ, ಆಡಳಿತ ಸಿಬ್ಬಂದಿ ತರಬೇತಿ ಸಂಸ್ಥೆ, ಕಲೆ ಮತ್ತು ಕ್ರೀಡಾ ಸಂಕೀರ್ಣ ಮತ್ತು ಸಭಾಂಗಣ ನಿರ್ಮಾಣಕ್ಕೆ ಸ್ವತಃ ಪ್ರಧಾನ ಮಂತ್ರಿಗಳಿಂದಲೇ ಹಸಿರು ನಿಶಾನೆ ತೋರಿಸಲು ರಾಜೀವ್ ಗಾಂಧಿ ವಿವಿ ಮನವಿ ಮಾಡಿಕೊಂಡಿದೆ.
ಇದಿಷ್ಟೇ ಅಲ್ಲದೇ, ಜೂನ್ 1ರಿಂದ 2021ರ ಮೇ 31ರ ವರೆಗೆ ಇಡೀ ವರ್ಷ ‘ವಿಜ್ಞಾನ ಸಂಭ್ರಮ’ ಶೀರ್ಷಿಕೆ ಅಡಿ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಸಮ್ಮೇಳನ, ಚರ್ಚಾ ಸ್ಪರ್ಧೆ ಕ್ರೀಡಾ ಚಟುವಟಿಕೆ, ಎನ್‌ಎಸ್‌ಎಸ್ ಶಿಬಿರ, ಆರೋಗ್ಯ ಅರಿವು ಶಿಬಿರ, ಆರೋಗ್ಯ ಶಿಕ್ಷಣ ಕಾರ್ಯಕ್ರಮ ಹೀಗೆ ನಾನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಒಟ್ಟಾರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಶೋಧನಾ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ಸಂಸ್ಥೆ ಎನ್ನಿಸಿಕೊಂಡಿದ್ದು, ಬೆಳ್ಳಿ ಮಹೋತ್ಸವ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವನಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯವೇ ಸರಿ.
- ಡಾ.ಕೆ.ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವರು