ಮಗನನ್ನೇ ಮದುವೆಯಾದ ತಾಯಿ: ಪತಿಯಿಂದ ಪೊಲೀಸರಿಗೆ ದೂರು

By Anusha KbFirst Published May 19, 2022, 2:36 PM IST
Highlights
  • ಮಗನನ್ನೇ ಮದುವೆಯಾದ ವಿಚಿತ್ರ ಪ್ರಕರಣ
  • ಪೊಲೀಸರಿಗೆ ದೂರು ನೀಡಿದ ಎರಡನೇ ಪತಿ
  • ಉತ್ತರಾಖಂಡ್‌ನ ಬಜ್ಪುರ್‌ನಲ್ಲಿ ಘಟನೆ

ಉತ್ತರಾಖಂಡ್‌: ವಿಚಿತ್ರ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನೇ ಮದುವೆಯಾದ ಘಟನೆ ಉತ್ತರಾಖಂಡ್‌ ರಾಜ್ಯದ ಬಜ್ಪುರ್‌ನಲ್ಲಿ ನಡೆದಿದೆ. ಘಟನೆಯಿಂದ ಆಘಾತಗೊಂಡ ಪತಿ ಮಹಿಳೆ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಮಧ್ಯ ವಯಸ್ಸಿನ ಇಂದ್ರಾರಾಜ್ ಎಂಬವರು ತಮ್ಮ ಪತ್ನಿ ವಿರುದ್ಧ ದೂರು ದಾಖಲಿಸಿದ್ದು, ಪತ್ನಿ ಮಗನನ್ನೇ ಮದುವೆಯಾಗಿದ್ದಲ್ಲದೇ ಮನೆಯಲ್ಲಿದ್ದ 20 ಸಾವಿರ ರೂಪಾಯಿಯನ್ನು ಹೊತ್ತೊಯ್ದಿದ್ದಾಳೆ ಎಂದು ಪತಿ ದೂರಿನಲ್ಲಿ ಹೇಳಿದ್ದಾರೆ. ಅಂದಹಾಗೆ ಪತ್ನಿ ಮದುವೆಯಾದ ಪುತ್ರ ಆಕೆಯ ಮೊದಲ ಪತಿಯ ಮಗ ಎಂದು ತಿಳಿದು ಬಂದಿದೆ. 

ಉತ್ತರಾಖಂಡ್‌ನ (Uttarakhand) ಉಧಮ್‌ ಸಿಂಗ್ ನಗರದ (Udham Singh Nagar) ಬಜ್ಪುರ್‌ನಲ್ಲಿ ಈ ಘಟನೆ ನಡೆದಿದೆ. ಇಂದ್ರರಾಮ್‌ ಅವರು ಹನ್ನೊಂದು ವರ್ಷಗಳ ಹಿಂದೆ ಬಬ್ಲಿ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ಇಂದ್ರರಾಮ್‌ನನ್ನು ಮದುವೆಯಾದಾಗ ಆಕೆಯ ಮೊದಲ ಪತಿ ಬಬ್ಲಿಯನ್ನು ತೊರೆದಿದ್ದರು. ಮೊದಲ ಪತಿಯೊಂದಿಗೆ ಬಬ್ಲಿಗೆ ಇಬ್ಬರು ಮಕ್ಕಳಿದ್ದರು. ನಂತರ ಇಂದ್ರರಾಮ್ ಜೊತೆಗಿನ ದಾಂಪತ್ಯದಲ್ಲಿ ಇವರಿಗೆ ಮೂವರು ಮಕ್ಕಳಿದ್ದಾರೆ. 

Chamarajanagar: ತಾಯಿಯ ಜೊತೆಗೆ ಅಕ್ರಮ ಸಂಬಂಧ: ದೊಣ್ಣೆಯಲ್ಲಿ ಹೊಡೆದು ವ್ಯಕ್ತಿಯ ಕೊಲೆ

ಇಂದ್ರಾರಾಮ್‌ (Indraram) ದೂರಿನ ಪ್ರಕಾರ, ಬಬ್ಲಿಯ (Babli) ಮೊದಲ ಪತಿಯ ಮಗ ಇತ್ತೀಚೆಗೆ ಆಗಾಗ ಮನೆಗೆ ಬರಲು ಆರಂಭಿಸಿದ್ದ. ಈಗ ಆತ ಮತ್ತು ನನ್ನ ಪತ್ನಿ ಮದುವೆಯಾಗಿದ್ದು, ಮನೆಯಲ್ಲಿದ್ದ 20,000 ತೆಗೆದುಕೊಂಡು ಪತ್ನಿ ಆತನೊಂದಿಗೆ ಹೊರಟು ಹೋಗಿದ್ದಾಳೆ ಎಂದು ಇಂದ್ರಾರಾಮ್ ದೂರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ (police complaint) ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸುತ್ತಿದ್ದಾರೆ. 

ಅಫೇರ್ ಇರಿಸಿಕೊಂಡಿದ್ದಕ್ಕೆ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹೊಡೆದರು!
ವಿವಾಹೇತರ ಸಂಬಂಧ (Extramarital Affair) ಗಳು ಯಾವಾಗಲೂ ಆರೋಗ್ಯಕರ ಸಂಬಂಧ (Relationship) ವಲ್ಲ. ಅಕ್ರಮ ಸಂಬಂಧ ದೀರ್ಘಕಾಲ ಸುಖ (Happy) , ಶಾಂತಿ ನೀಡಲು ಸಾಧ್ಯವಿಲ್ಲ. ಹಾಗೆ ವಿವಾಹೇತರ ಸಂಬಂಧಗಳ ಅಂತ್ಯ (End) ಬಹುತೇಕ ಬಾರಿ ದುರಂತ (Tragedy) ದಿಂದ ಕೂಡಿರುತ್ತದೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ವಿವಾಹೇತರ ಸಂಬಂಧ ಬೆಳೆಸಿ ಬಾಳು ಹಾಳು ಮಾಡಿಕೊಂಡ ಅನೇಕರು ನಮ್ಮಲ್ಲಿದ್ದಾರೆ. ಮತ್ತೆ ಕೆಲವರು ಜೈಲಿನಲ್ಲಿದ್ರೆ ಇನ್ನು ಕೆಲವರು ಇಹಲೋಕ ತ್ಯಜಿಸಿದ್ದಾರೆ. ಈ ಸಂಬಂಧ ಇಬ್ಬರ ಮಧ್ಯೆ ಮಾತ್ರ ಬದಲಾವಣೆ ತರುವುದಿಲ್ಲ, ಇಡೀ ಸಂಸಾರದ ಮೇಲೆ ಪ್ರಭಾವ ಬೀರುತ್ತದೆ.

ಬಹುತೇಕ ಬಾರಿ ತಂದೆ ತಾಯಿಯ ವಿವಾಹೇತರ ಸಂಬಂಧವನ್ನು ಮಕ್ಕಳು (Children ) ಒಪ್ಪಿಕೊಳ್ಳುವುದಿಲ್ಲ. ಅದು ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಪಾಲಕರ ಮೇಲೆ ದ್ವೇಷ ಹುಟ್ಟಿಸಬಹುದು. ಮಕ್ಕಳು, ಪಾಲಕರನ್ನು ವಾಪಸ್ ಪಡೆಯಲು ಯಾವುದೇ ಕೆಲಸಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇದಕ್ಕೆ ಕೆಲ ದಿನಗಳ ಹಿಂದೆ ಗುಂಟೂರಿನಲ್ಲಿ ನಡೆದ ಘಟನೆ ನಿದರ್ಶನ. ತಾಯಿಯ ಅಕ್ರಮ ಸಂಬಂಧಕ್ಕೆ ಕೋಪಗೊಂಡ ಮಗಳು, ಕ್ರೂರ ಕೃತ್ಯಕ್ಕೆ ಇಳಿದಿದ್ದಾಳೆ. 

ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಮರ್ಮಾಂಗವನ್ನು ಮಗಳು ಕತ್ತರಿಸಿದ್ದಾಳೆ. ಈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿತ್ತು. ರಾಮಚಂದ್ರ, ಮಹಿಳೆ ಮನೆಗೆ ಬಂದಿದ್ದಾನೆ. ಆಕೆ ಜೊತೆ ಕುಳಿತು ಮದ್ಯ ಸೇವನೆ ಮಾಡಿದ್ದಾನೆ. ನಂತ್ರ ಟೆರೇಸ್ ಮೇಲೆ ಹೋಗಿ ಮಲಗಿದ್ದಾನೆ. ಈ ವಿಷ್ಯ ಮಹಿಳೆ ಮಗಳಿಗೆ ತಿಳಿದಿದೆ. ಇದ್ರಿಂದ ಕೋಪಗೊಂಡ ಮಗಳು ಜಗಳ ಶುರು ಮಾಡಿದ್ದಾಳೆ. ಮಗಳ ಜೊತೆ ಆಕೆ ಬಾಯ್ ಫ್ರೆಂಡ್ ಕೂಡ ಜೊತೆಗಿದ್ದ ಎನ್ನಲಾಗಿದೆ. ಇಬ್ಬರೂ ಮಧ್ಯ ರಾತ್ರಿ ರಾಮಚಂದ್ರನ ವಿರುದ್ಧ ಕೂಗಾಟ ಶುರು ಮಾಡಿದ್ದಾರೆ. ಜಗಳ ತಾರಕಕ್ಕೇರಿದೆ. ಕೋಪದಲ್ಲಿದ್ದ ಮಹಿಳೆ ಮಗಳು, ಬಾಯ್ ಫ್ರೆಂಡ್ ಸಹಾಯದಿಂದ ರಾಮಚಂದ್ರನ ಮಾರ್ಮಾಂಗವನ್ನು ಚಾಕುವಿನಿಂದ ಇರಿದಿದ್ದಾಳೆ.
 

click me!