ಚಾರ್‌ಧಾಮ್‌ ಯಾತ್ರೆಗೆ ಷರತ್ತಿನ ಅನುಮತಿ

By Kannadaprabha NewsFirst Published Sep 17, 2021, 8:07 AM IST
Highlights
  • ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಚಾರ್‌ಧಾಮ್‌ ಯಾತ್ರೆ
  • ಚಾರ್‌ಧಾಮ್‌ ಯಾತ್ರೆಗೆ ಷರತ್ತುಬದ್ಧ ಅನುಮತಿ ನೀಡಿ ಉತ್ತರಾಖಂಡ ಹೈಕೋರ್ಟ್‌

ನವದೆಹಲಿ (ಸೆ.17): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಚಾರ್‌ಧಾಮ್‌ ಯಾತ್ರೆಗೆ ಷರತ್ತುಬದ್ಧ ಅನುಮತಿ ನೀಡಿ ಉತ್ತರಾಖಂಡ ಹೈಕೋರ್ಟ್‌ ಗುರುವಾರ ಆದೇಶ ಹೊರಡಿಸಿದೆ. 

ಯಾತ್ರಾರ್ಥಿಗಳು ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು. ಯಾತ್ರಾರ್ಥಿಗಳ ಸಂಖ್ಯೆಗೆ ಮಿತಿ ಇರಬೇಕು, ಕಡ್ಡಾಯವಾಗಿ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರಬೇಕು. 

ಪುಣ್ಯಕ್ಷೇತ್ರ ಯಾತ್ರೆ ಅಂದ್ರೆ ಕಾಶಿ, ರಾಮೇಶ್ವರ ಜೊತೆಗೆ ಚಾರ್ ಧಾಮ್‌; ಇಲ್ಲಿಗೂ ಭೇಟಿ ಕೊಡಿ!

ಲಸಿಕೆ ಪ್ರಮಾಣಪತ್ರ ಕಡ್ಡಾಯ. ಕೇದಾರನಾಥಕ್ಕೆ ನಿತ್ಯ ಗರಿಷ್ಠ 800 ಮಂದಿ, ಬದರೀನಾಥಕ್ಕೆ ಗರಿಷ್ಠ 1200, ಗಂಗೋತ್ರಿಗೆ 600, ಯಮುನೋತ್ರಿಗೆ 400 ಮಂದಿ ಮಾತ್ರ ಭೇಟಿ ನೀಡಬಹುದು ಎಂದು ನಿಬಂಧನೆ ವಿಧಿಸಿದೆ. ಚಾರ್‌ಧಾಮ್‌ ಯಾತ್ರೆಗೆ ಅವಕಾಶ ನೀಡಿದ್ದ ರಾಜ್ಯ ಸಚಿವ ಸಂಪುಟ ತೀರ್ಮಾನಕ್ಕೆ ಜು.28ರಂದು ಹೈಕೋರ್ಟ್‌ ತಡೆ ನೀಡಿತ್ತು.

click me!