ನವೀಕೃತ ರಾಜಪಥ, ಸಂಸತ್‌ ಕಟ್ಟಡ 2022ರಲ್ಲೇ ಸಿದ್ಧ

By Kannadaprabha NewsFirst Published Sep 17, 2021, 7:23 AM IST
Highlights
  • ಸೆಂಟ್ರಲ್‌ ವಿಸ್ತಾ ಅವೆನ್ಯೂ ಯೋಜನೆ ಹಿನ್ನೆಲೆಯಲ್ಲಿ ರಾಜಪಥದ ಪುನರ್‌ನಿರ್ಮಾಣ ಕಾಮಗಾರಿ
  • ನವೀಕೃತ ರಾಜಪಥದಲ್ಲೇ 2022ರ ಗಣರಾಜ್ಯೋತ್ಸವ ದಿನ ಆಚರಣೆ

 ನವದೆಹಲಿ (ಸೆ.17):  ಸೆಂಟ್ರಲ್‌ ವಿಸ್ತಾ ಅವೆನ್ಯೂ ಯೋಜನೆ ಹಿನ್ನೆಲೆಯಲ್ಲಿ ರಾಜಪಥದ ಪುನರ್‌ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನವೀಕೃತ ರಾಜಪಥದಲ್ಲೇ 2022ರ ಗಣರಾಜ್ಯೋತ್ಸವ ದಿನ ಆಚರಣೆ ನಡೆಯಲಿದೆ. ಅಂದರೆ ಅಷ್ಟರೊಳಗೆ ಈ ಪ್ರದೇಶದಲ್ಲಿನ ಕಾಮಗಾರಿ ಮುಗಿಯಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಪುರಿ ಹೇಳಿದ್ದಾರೆ.

ರಕ್ಷಣಾ ಸಚಿವಾಲಯದ ಕಟ್ಟಡಗಳ ಉದ್ಘಾಟನೆಯಲ್ಲಿ ಮಾತನಾಡಿದ ಮಾತನಾಡಿದ ಅವರು, ‘ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3 ಕಿ.ಮೀ. ಭಾಗದಲ್ಲಿ ಕಾಮಗಾರಿ ನಡೆದಿದೆ. ಕಾಮಗಾರಿಯು ಇನ್ನು ಎರಡೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ’ ಎಂದು ತಿಳಿಸಿದರು.

ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಗಣರಾಜ್ಯೋತ್ಸವ ಪಥಸಂಚಲನವು ಪ್ರತಿ ವರ್ಷ ನಡೆಯುತ್ತದೆ. ಹೀಗಾಗಿ 2022ರ ಗಣರಾಜ್ಯೋತ್ಸವದ ವೇಳೆ ರಾಜಪಥವು ವಿಶೇಷ ಆಕರ್ಷಣೆಗೆ ಒಳಗಾಗುವುದು ನಿಶ್ಚಿತ.

ಇದೇ ವೇಳೆ ಬಹುನಿರೀಕ್ಷಿತ ಹೊಸ ಸಂಸತ್‌ ಕಟ್ಟಡದ ನಿರ್ಮಾಣವೂ ವೇಗವಾಗಿ ನಡೆಯುತ್ತಿದೆ. 2022ರ ಚಳಿಗಾಲದ ಅಧಿವೇಶನವು ಹೊಸ ಸಂಸತ್‌ ಭವನದಲ್ಲೇ ನಡೆಯಲಿದೆ ಎಂದು ಪುರಿ ಹೇಳಿದ್ದಾರೆ.

click me!