ಅಧಿಕಾರಕ್ಕಾಗಿ ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ... ಬೊಮ್ಮಾಯಿಗೆ ಸ್ವಾಮಿ ಠಕ್ಕರ್!

By Suvarna News  |  First Published Sep 16, 2021, 11:19 PM IST

* ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಗೆ ಸ್ವಾಮಿ ಠಕ್ಕರ್
* ನಾನು ಯಾವಾಗಲೂ ಜನತಾದಳದ ಸದಸ್ಯ ಆಗಿರಲಿಲ್ಲ
* ಅಧಿಕಾರಕ್ಕಾಗಿ ಯಾರ ಹಿಂದೆ ಬಿದ್ದವನೂ ಅಲ್ಲ
* ಸ್ವಾಮಿ  ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ


ನವದೆಹಲಿ(ಸೆ. 16)  ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಅತ್ತ ಕಡೆಯಿಂದ ಸ್ವಾಮಿ ಸರಿಯಾದ ರೀತಿಯಲ್ಲೇ ಠಕ್ಕರ್ ಕೊಟ್ಟಿದ್ದಾರೆ.

ಬೆಲೆ ಏರಿಕೆ ಚರ್ಚೆ ವೇಳೆ ವಿಧಾನಸಭೆಯಲ್ಲಿ  ವಿಪಕ್ಷ ನಾಯಕ ಸಿದ್ದರಾಮಯ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಗಳನ್ನು ಉಲ್ಲೇಖ ಮಾಡಿದ್ದರು. ನಿಮ್ಮ ಪಕ್ಷದವರೇ ಹೀಗೆ ಹೇಳುತ್ತಿದ್ದಾರಲ್ಲ ಎಂದು ಬಿಜೆಇಯನ್ನು ಝಾಡಿಸಿದ್ದರು. ಇದಕ್ಕೆ ಉತ್ತರಿಸುವ ವೇಳೆ ಬೊಮ್ಮಾಯಿ ಸ್ವಾಮಿ ಒಬ್ಬರು ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಆದರೆ ಆರ್ಥಿಕ ತಜ್ಞರಾಗಿ ಜೀನಿಯಸ್ ಎಂದಿದ್ದರು.

Tap to resize

Latest Videos

ಈಗ ಇದೇ ವಿಚಾರಕ್ಕೆ ಠಕ್ಕರ್ ಕೊಟ್ಟಿರುವ ಸ್ವಾಮಿ, ನಾನು ಸುಮ್ಮನೆ ಆರು ಸಾರಿ ಸಂಸದನಾಗಿ ಆಯ್ಕೆಯಾಗಲಿಲ್ಲ. ಅದರಲ್ಲಿಯೂ ಮೂರು ಸಾರಿ ಲೋಕಸಭೆಯಿಂದ ಆರಿಸಿ ಬಂದಿದ್ದೆ.  ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ ನಾನು ಅಧಿಕಾರಕ್ಕಾಗಿ ಯಾರ ಹಿಂದೆಯೂ ಬೀಳಲಿಲ್ಲ, ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ ಎಂದಿದ್ದಾರೆ.

ದೇವಾಲಯ ಧ್ವಂಸ; ಮೌನ ಮುರಿದ ಬಸವರಾಜ ಬೊಮ್ಮಾಯಿ

ಮತ್ತೆ ಮುಂದುವರಿದ ಸ್ವಾಮಿ, ನಾನು ಯಾವ ಕಾಲದಲ್ಲಿಯೂ ಜನತಾದಳದ ಸದಸ್ಯನಾಗಿರಲಿಲ್ಲ. ಜನತಾ ಪಾರ್ಟಿಯು ಅಧ್ಯಕ್ಷನಾಗಿದ್ದ ಸಂದರ್ಭ(1989-2013)  ಅದನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿದೆ ಎಂದು ಠಕ್ಕರ್ ಕೊಟ್ಟಿರುವುದು ಬಿಜೆಪಿಯ ಒಳಗೆ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. 

ಸುಬ್ರಮಣಿಯನ್ ಸ್ವಾಮಿ ರಾಜಕಾರಣದಲ್ಲಿ ಚತುರ ಎಂದೇ ಹೆಸರು ಗಳಿಸಿಕೊಂಡವರು. ಬಿಜೆಪಿಯಲ್ಲಿ ಇದ್ದರೂ ಅನೇಕ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿರುವುದು ಉಂಟು.   ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಬಿಎಸ್ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದರು. 

 

click me!