ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣದ ಹಣ ಕೇಳಿದ್ದಕ್ಕೆ ಬುಲ್ಡೋಜರ್‌ನಲ್ಲಿ ವ್ಯಾಪಾರಿಯ ಮನೆ ಕೆಡವಿದ ಅಧಿಕಾರಿ ಅಮಾನತು

By BK AshwinFirst Published Aug 4, 2022, 6:51 PM IST
Highlights

ವ್ಯಾಪಾರಿಯೊಬ್ಬರ ಅಂಗಡಿಯಿಂದ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣ ಖರೀದಿಸಿದ ಅಧಿಕಾರಿಯೊಬ್ಬರು, ಅದಕ್ಕೆ ಹಣ ಕೇಳಿದ್ದಕ್ಕೆ ಆ ವ್ಯಾಪಾರಿಯ ಮನೆಗೆ ಬುಲ್ಡೋಜರ್‌ ಕಳಿಸಿ ಅವರ ಮನೆಯ ಭಾಗವನ್ನು ಕೆಡವಿದ್ದಾರೆ ಎಂದು ತಿಳಿದುಬಂದಿದೆ. 

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರ ಬುಲ್ಡೋಜರ್‌ (Bulldozer) ಮಾದರಿಗೆ ಸಾಕಷ್ಟು ಚರ್ಚೆಗೀಡಾಗುತ್ತಿದೆ. ಹಲವರು ಈ ಮಾದರಿಯನ್ನು ಮೆಚ್ಚಿಕೊಂಡಿದ್ದರೆ, ಇನ್ನು ಹಲವರು ಇದನ್ನು ಟೀಕಿಸುತ್ತಿದ್ದಾರೆ. ಈ ಮಧ್ಯೆ, ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣ (Furniture) ಖರೀದಿಸಿ ಹಣ ಕೇಳಿದರೆ ವ್ಯಾಪಾರಿಯೊಬ್ಬರಿಗೆ ಬೆದರಿಸಿ ಅವರ ಮನೆಯ ಭಾಗವನ್ನು ಬುಲ್ಡೋಜರ್‌ ಮೂಲಕ ಕೆಡವಿದ ಆರೋಪ ಸಂಬಂಧ ಉತ್ತರ ಪ್ರದೇಶದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಬಿಲಾರಿ ಘನಶ್ಯಾಮ್‌ ವರ್ಮಾ ಅನ್ನು ಅಮಾನತು ಮಾಡಲಾಗಿದೆ. 

ಪೀಠೋಪಕರಣದ ಹಣ ಕೇಳಿದ್ದಕ್ಕೆ ತನ್ನ ಮನೆಯ ಭಾಗವೊಂದನ್ನು ಬುಲ್ಡೋಜರ್‌ನಲ್ಲಿ ಕೆಡವಲಾಗಿದೆ ಎಂದು ವ್ಯಾಪಾರಿಯೊಬ್ಬರು ಕಳೆದ ತಿಂಗಳು ದೂರು ನೀಡಿದ್ದರು. ನಂತರ ಯುಪಿಯ ಮೊರಾದಾಬಾದ್‌ನ ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ (Sub Divisional Magistrate) ಅನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಬಳಿಕ ಎಸ್‌ಡಿಎಂ ಆಗಿದ್ದ ಬಿಲಾರಿ ಘನಶ್ಯಾಮ್‌ ವರ್ಮಾ ಅವರು ತಪ್ಪಿತಸ್ಥ ಎಂದು ತಿಳಿದುಬಂದ ಬಳಿಕ ಮೊರಾದಾಬಾದ್‌ (Moradabad) ಜಿಲ್ಲಾ ಆಡಳಿತ ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ. 

Latest Videos

ನೋಟಿಸ್ ನೀಡದೇ ಯಾವುದೇ ಧ್ವಂಸ ಕಾರ್ಯ ಮಾಡಬೇಡಿ, ಯೋಗಿ ಸರ್ಕಾರಕ್ಕೆ ಸುಪ್ರೀಂ ಸೂಚನೆ!

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ [Additional Chief Secretary (Home)] ಅವನೀಶ್‌ ಅವಸ್ಥಿ ಈ ಬೆಳವಣಿಗೆಯನ್ನು ಸ್ಪಷ್ಟಪಡಿಸಿದ್ದಾರೆ.  ಅಧಿಕಾರಿಯನ್ನು ಅಮಾನತು ಮಾಡಿರುವುದು ನಮ್ಮ ರಾಜ್ಯ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ ಎಂದು ಅವಸ್ಥಿ ಹೇಳಿದ್ದಾರೆ. 

ಜುಲೈ 11 ರಂದು ವ್ಯಾಪಾರಿ ಈ ಸಂಬಂಧ ದೂರು ನೀಡಿದ್ದರು ಎಂದೂ ತಿಳಿದುಬಂದಿದೆ.. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ವಿರುದ್ಧ ಜುಲೈ 11 ರಂದು ಪೀಠೋಪಕರಣದ ವ್ಯಾಪಾರಿಯೊಬ್ಬರು ನನಗೆ ದೂರು ನೀಡಿದ್ದರು. ನಂತರ, ನಾನು ಈ ವಿಚಾರವನ್ನು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ (Additional District Magistrate) ಮಟ್ಟದ ಅಧಿಕಾರಿಗೆ ತನಿಖೆ ನಡೆಸಲು ನಿರ್ದೇಶಿಸಿದ್ದೆ ಎಂದು ವಿಭಾಗೀಯ ಕಮೀಷನರ್‌ (Divisional Commissioner) ಆಂಜನೇಯ ಕುಮಾರ್‌ ಸಿಂಗ್ ಹೇಳಿದ್ದಾರೆ. ಅಲ್ಲದೆ, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ (ಎಕ್ಸಿಕ್ಯುಟಿವ್‌) ಈ ತನಿಖೆ ನಡೆಸಿದ್ದರು ಎಂದೂ ಅವರು ಮಾಹಿತಿ ನೀಡಿದ್ದಾರೆ. 

ಉತ್ತರಪ್ರದೇಶದಲ್ಲಿ ಬ್ಯಾನ್ ಆಗುತ್ತಾ ಬುಲ್ಡೋಜರ್? ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ!

ಇನ್ನು, ಕಮೀಷನರ್‌ ತನಿಖೆಗೆ ಆದೇಶಿಸಿದ ಎರಡು ದಿನಗಳ ಬಳಿಕ ವರ್ಮಾ ಅವರನ್ನು ಅವರ ಹುದ್ದೆಯಿಂದ ಕಿತ್ತೊಗೆಯಲಾಗಿತ್ತು. ಮೊರಾದಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate) ಶೈಲೇಂದ್ರ ಕುಮಾರ್ ಸಿಂಗ್ ಎಸ್‌ಡಿಎಂ ವರ್ಮಾ ಅವರನ್ನು ವಜಾ ಮಾಡಿದ್ದು, ಮತ್ತು ಜಿಲ್ಲಾ ಕೇಂದ್ರಕ್ಕೆ ಅವರನ್ನು ಕಳಿಸಲಾಗಿತ್ತು ಎಂದೂ ಹೇಳಲಾಗಿದೆ.  ಬಿಲಾರಿ ಘನಶ್ಯಾಮ್‌ ವರ್ಮಾ ತನ್ನ ಅಂಗಡಿಯಲ್ಲಿ 2.67 ಲಕ್ಷ ರೂ. ಮೌಲ್ಯದ ಪೀಠೋಪಕರಣ ಖರೀದಿಸಿದ್ದರು. ಆದರೆ, ಪೀಠೋಪಕರಣಕ್ಕೆ ಹಣ ಕೇಳಿದ್ದಕ್ಕೆ ಮಾತ್ರ ತನ್ನ ಮನೆಯನ್ನು ಬುಲ್ಡೋಜರ್‌ ಮೂಲಕ ಕೆಡವಲು ಆ ಅಧಿಕಾರಿ ಆದೇಶ ನೀಡಿದ್ದರು ಎಂದು ಜಾಹಿದ್‌ ಅಹ್ಮದ್‌ ಎಂಬ ಪೀಠೋಪಕರಣ ವ್ಯಾಪಾರಿ ಕಮೀಷನರ್‌ಗೆ ದೂರು ನೀಡಿದ್ದರು. 

ಉಗ್ರರು, ರೌಡಿಗಳು ಹಾಗೂ ಇತರ ಆರೋಪಿಗಳ ವಿರುದ್ಧ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಅಂತಹವರ ಅಕ್ರಮ ಮನೆಗಳನ್ನು ಕೆಡವಲು ಬುಲ್ಡೋಜರ್‌ ಮಾದರಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲೂ ಇಂತಹ ಮಾದರಿ ಬೇಕು ಎಂದು ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಸಹ ಯುಪಿಯಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದನ್ನು ನಾವು ನೆನಪಿಸಿಕೊಳ್ಳಬಹುದು.   

click me!