
ಉತ್ತರ ಪ್ರದೇಶ(ಸೆ.19): ಶ್ರೀಮಂತರಿಗೆ, ಗಣ್ಯರಿಗೆ ಒಂದು ನಿಯಮ, ಬಡವರಿಗೆ ಒಂದು ನಿಯಮ ಅನ್ನೋ ಹಳೇ ನಾಣ್ಣುಡಿ ಅದೆಷ್ಟೋ ಭಾರಿ ಸತ್ಯ ಆಗಿದೆ. ಇದೀಗ ಇಂತದ್ದೆ ಒಂದು ಘಟನೆ ಉತ್ತರ ಪ್ರದೇಶದ ಕನ್ನೌಜ್ ಪೊಲೀಸ್ ಠಾಣಾ ವಾಪ್ತಿಯಲ್ಲಿ ನಡೆದಿದೆ. ಕೊರೋನಾ ಕಾರಣ ಮನೆಯಲ್ಲಿ ಬಂಧಿಯಾಗಿ ತುತ್ತು ಅನ್ನಕ್ಕೂ ಪರದಾಡಿದ ವಿಶೇಷ ಚೇತನ ವ್ಯಕ್ತಿ ಅನ್‌ಲಾಕ್ ಪ್ರಕಿಯೆಯಿಂದ ಮತ್ತೆ ತನ್ನ ಇ ರಿಕ್ಷಾ ಸೇವೆ ಆರಂಭಿಸಿದ್ದ. ಆದರೆ ಈತನ ಮೇಲೆ ಪೊಲೀಸಪ್ಪ ಕ್ರೌರ್ಯ ಮೆರೆದಿದ್ದಾನೆ.
ಬರ್ತಡೆ ಪಾರ್ಟಿ; ಬ್ಯುಟಿಷಿಯನ್ ಮೇಲೆ ಗೆಳೆಯರಿಂದಲೇ ಗ್ಯಾಂಗ್‌ರೇಪ್!
ರಸ್ತೆ ಬದಿಯಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡ ಅನ್ನೋ ಕಾರಣಕ್ಕೆ ಪೊಲೀಸಪ್ಪ, ವಿಶೇಷ ಚೇತನ ವ್ಯಕ್ತಿಯನ್ನು ಪ್ರಶ್ನಿಸಿದ್ದಾನೆ. ಮೊದಲೇ ಆದಾಯ ಇಲ್ಲದೆ ಕೊರಗಿದ್ದ ವಿಶೇಷ ಚೇತನ ವ್ಯಕ್ತಿ, ಪೊಲೀಸರ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇಷ್ಟೇ ನೋಡಿ, ದರ ದರನೇ ಪೊಲೀಸ್ ಠಾಣೆಗೆ ಎಳೆದು ತಂದ ಪೊಲೀಸಪ್ಪ, ವಿಶೇಷ ಚೇತನ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾನೆ. ಇಷ್ಟೇ ಅಲ್ಲ ವ್ಯಕ್ತಿಯನ್ನು ನೆಲಕ್ಕೆ ಉರುಳಿಸಿದ್ದಾನೆ.
ಮಹಿಳೆಯರೆ ಎಚ್ಚರ, ಖಾಸಗಿ ಬಸ್ ನಲ್ಲಿಯೇ ಕಾಮಾಂಧನಿಂದ ರೇಪ್...
ನಿಯಮದ ಪ್ರಕಾರ ರಸ್ತೆ ಬದಿಗಳಿಂದ ಪ್ರಯಾಣಿಕರನ್ನು ಹತ್ತಿಸುವಂತಿಲ್ಲ. ಆದರೆ ಈ ನಿಯಮ ಬಡವರಿಗೆ ಬಿಟ್ಟು ಇನ್ಯಾರಿಗೂ ಅನ್ವಯವಾಗಲ್ಲ. ಇದೊಂದೆ ಅಲ್ಲ ಇಂತಹ ಅನೇಕ ನಿಯಮಗಳ ಇದೇ ರೀತಿ ಇದೆ. ಕಾಲು ಬಾರದ ವಿಶೇಷ ಚೇತನ ವ್ಯಕ್ತಿ ಗೌರವಯುತವಾಗಿ ಜೀವನ ನಡೆಸುತ್ತಿದ್ದ. ಕೊರೋನಾ ಸಂಕಷ್ಟದಲ್ಲೂ ಮತ್ತೆ ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದ. ಆದರೆ ಪೊಲೀಸಪ್ಪನ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದ್ದಾನೆ.
ಈ ಪೊಲೀಸನ ಕ್ರೌರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇಷ್ಟೇ ಅಲ್ಲ ಉತ್ತರ ಪ್ರದೇಶದ ಜನ ಪೊಲೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಎಚ್ಚೆತ್ತ ಪೊಲೀಸ್ ಇಲಾಖೆ ಹಲ್ಲೆ ಮಾಡಿದ ಪೊಲೀಸ್‌ನನ್ನು ಅಮಾನತು ಮಾಡಿದೆ. ಇಷ್ಟೇ ಅಲ್ಲ ಘಟನೆ ಕುರಿತು ತನಿಖೆಗೆ ಆದೇಶಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ