ಪತ್ನಿಯ ವಿರುದ್ಧ ನಕಲಿ ದೂರು: ಐಪಿಎಸ್‌ ಅಧಿಕಾರಿ ವಿರುದ್ಧ ಗಂಭೀರ ಆರೋಪ!

By Suvarna NewsFirst Published Sep 19, 2020, 4:33 PM IST
Highlights

ಐಪಿಎಸ್‌ ಅಧಿಕಾರಿ ವಿರುದ್ಧ ಗಂಭೀರ ಆರೋಪ| ಜಲಿಬಲ್ಲಿರುವ ಅಪರಾಧಿ ವಿರುದ್ಧ ವಾಟ್ಸಾಪ್ ಚಾಟ್| ತನ್ನ ಪತ್ನಿ ಎನ್ನುತ್ತಿರುವ ಮಹಿಳೆ ವಿರುದ್ಧ ನಕಲಿ ದೂರು

ನವದೆಹಲಿ(ಸೆ.19): SIT ಹಾಗೂ ವಿಜಿಲೆನ್ಸ್‌ ತನ್ನ ತನಿಖೆಯಲ್ಲಿ ಐಪಿಎಸ್‌ ಅಧಿಕಾರಿ ಡಾ. ಅಜಯ್‌ ಪಾಲ್‌ ಶರ್ಮಾ ವಿರುದ್ಧ ಗಂಭೀರ ಆರೋಪ ಮಾಡಿದೆ. ತಾನು ಶರ್ಮಾರ ಪತ್ನಿ ಎಂದು ಹೇಳಿಕೊಂಡ ಮಹಿಳೆವಿರುದ್ಧ ಬುಲಂದರ್‌ಶಾ ಹಾಗೂ ರಾಮ್‌ಪುರದಲ್ಲಿ ನಕಲಿ ಪ್ರಕರಣ ದಾಖಲಿಸಿದ್ದಾರೆಂದು ಎಸ್‌ಐಟಿ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ಇಷ್ಟೇ ಅಲ್ಲದೇ ಅವರು ಜೈಲಿನೊಳಗಿರುವ ಅಪರಾಧಿ ಅನಿಲ್ ಭಾಟೀ ಜೊತೆ ವಾಟ್ಸಾಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಸಾಲದೆಂಬಂತೆ ಮೀರತ್ ಹಾಗೂ ಮತ್ತೊಂದು ಜಿಲ್ಲೆಗೆ ತನ್ನನ್ನು ವರ್ಗಾವಣೆಗೊಳಿಸಲು ಪತ್ರಕರ್ತರು ಹಾಘೂ ಅವರ ಸಹಚರರೊಡನೆ 80 ಲಕ್ಷ ರೂಪಾಯಿ ನೀಡುವ ಬಗ್ಗೆ ವ್ಯವಹಾರದ ಮಾತುಗಳನ್ನೂ ಆಡಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಎಸ್‌ ಅಜಯ್‌ ಪಾಲ್ ವಾಟ್ಸಾಪ್ ಹಾಗೂ ಕಾಲ್ ರೆಕಾರ್ಡಿಂಗ್‌ನ್ನು ಎಸ್‌ಐಟಿ ತನ್ನ ತನಿಖೆಯಲ್ಲಿ ಸಾಕ್ಷಿಯಾಗಿ ನೀಡಿದೆ. ಇದಾದ ಬಳಿಕವೇ ವಿಜಿಲೆನ್ಸ್‌ ಕೂಡಾ ಅವರ ವಿರುದ್ಧ ತನಿಖೆ ನಡೆಸಿದೆ. ನೊಯ್ಡಾದ ಮಾಜಿ ಎಸ್‌ಎಸ್‌ಪಿ ವೈಭವ್ ಕೃಷ್ಣ ತನಗಿಷ್ವಾದ ಸ್ಥಳಕ್ಕೆ ಪೋಸ್ಟಿಂಗ್ ಮಾಡುವ ವಿಚಾರ ಎತ್ತಿದ್ದರು. ಅಜಯ್‌ ಪಾಳ್ ಇದೇ ಪ್ರಕರಣದ ಆರೋಪಯಾಗಿದ್ದಾರೆ.

ಒಂಭತ್ತು ರೆಕಾರ್ಡಿಂಗ್

ಎಸ್‌ಐಟಿ ಹಾಗೂ ವಿಜಿಲೆನ್ಸ್‌ ಐಪಿಎಸ್‌ ಅಧಿಕಾರಿ ಅಜಯ್‌ ಪಾಲ್ ಶರ್ಮಾ ಸಂಬಂಧ ಒಂಭತ್ತು ರೆಕಾರ್ಡಿಂಗ್ ಒಗ್ಗೂಡಿಸಿದೆ. ಇದರಲ್ಲಿ ಐದು ಆಡಿಯೋದಲ್ಲಿ ಬೇಕಾದ ಕಡೆ ಪೋಸ್ಟಿಂಗ್ ಮಾಡುವ ವಿಚಾರವಿದೆ ಎನ್ನಲಾಗಿದೆ.

ಆದರೆ ಈ ಸಂಬಂಧ ಪ್ರತಿಕ್ರಿಯಿಸಿರುವ ಐಪಿಎಸ್ ಅಧಿಕಾರಿ ತನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ವೈಯುಕ್ತಿಕ ದ್ವೇಷದಿಂದ ಈ ಆರೋಪಗಳನ್ನು ಮಾಡುತ್ತಿದ್ದಾರೆಂದ ದೂರಿದ್ದಾರೆ.

click me!