ಲಕ್ನೋ (ಆ. 30)   ನಿರ್ಭಯಾ ಪ್ರಕರಣದ ರೀತಿಯಲ್ಲೆ ಚಲಿಸುವ ಬಸ್ ನಲ್ಲಿ  ಅತ್ಯಾಚಾರ ಮಾಡಿದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.  ನವದೆಹಲಿಗೆ ವಾಪಸ್ಸಾಗುತ್ತಿದ್ದ ಮಹಿಳೆಯ ಮೇಲೆ ಚಲಿಸುವ ಬಸ್ ನಲ್ಲಿಯೇ ಅತ್ಯಾಚಾರವಾಗಿದೆ.

ಲಕ್ನೋದಿಂದ ಮಹಿಳೆ  ದೆಹಲಿಗೆ ವಾಪಸಾಗುತ್ತಿದ್ದರು.  ಯಮುನಾ ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು ದೂರು ದಾಖಲಾಗಿದೆ. 40 ಪ್ರಯಾಣಿಕರಿದ್ದ ಡಿಲಕ್ಸ್  ಬಸ್ ನಲ್ಲಿ ಚಾಲಕನ ಕ್ಯಾಬಿನ್ ಹಿಂಭಾಗದಲ್ಲೇ ಮಹಿಳೆ ಕುಳಿತಿದ್ದರು. 

ಹಾಸನ; ಭಿಕ್ಷುಕಿ ಮೇಲೆ ಕಲ್ಲು ಎತ್ತಿಹಾಕಿ ಅತ್ಯಾಚಾರ ಮಾಡಿದ!

ಮಥುರಾದ ಮಂತ್ ಟೋಲ್ ಗೇಟ್ ಬಳಿ ಬಸ್ ಆಗಮಿಸುತ್ತಿದ್ದಂತೆ ಮಹಿಳೆಯು ಬಸ್ ನಲ್ಲಿದ್ದ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ ಮಂತ್ ಟೋಲ್ ಗೇಟ್ ಬಳಿಗೆ ಬಸ್ ತೆರಳುತ್ತಿದ್ದಂತೆ ಮಹಿಳೆಯರು 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಸ್ ಕ್ಲೀನರ್ ನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಮಹಿಳೆಯ ಮಾಹಿತಿ ಆಧರಿಸಿ ಬಸ್  ಹಿಡಿದ ಪೊಲೀಸರು ಆರೋಪಿ ಕ್ಲೀನರ್ ರವಿ ಮತ್ತು ಮಹಿಳೆಯನ್ನು ಬಸ್ ನಿಂದ ಇಳಿಸಿಕದ್ದಾರೆ. ಮಹಿಳೆಗೆ ವೈದ್ಯಕೀಯ ತಪಾಸಣೆ ನಡೆಸಿ ಪೊಲೀಸ್ ಭದ್ರತೆಯಲ್ಲಿಯೇ ಅವರ ಮನೆ ತಲುಪಿಸಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಮಂತ್ ಪೊಲೀಸ್ ಠಾಣೆಯಲ್ಲಿ ಬಸ್ ಕ್ಲೀನರ್ ಮತ್ತು ಬಸ್ ಜವಾಬ್ದಾರಿ ಹೊತ್ತವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಪಿಶಾಚಿಯೂ ನಾಚುವಂಥ ಹೀನ ಕೃತ್ಯ! ಕೊಲೆ ಮಾಡಿ ರೇಪ್, ಸಿಸಿಟಿವಿಯಲ್ಲಿ ಸೆರೆ

"