ಗನ್ ಲೋಡ್ ಮಾಡಲಾಗದೇ ತಬ್ಬಿಬ್ಬಾದ ಇನ್ಸ್‌ಪೆಕ್ಟರ್: ವಿಡಿಯೋ ವೈರಲ್

By Anusha KbFirst Published Dec 28, 2022, 5:17 PM IST
Highlights

ಗನ್‌ ಗೆ ಮದ್ದುಗುಂಡು ಲೋಡ್ ಮಾಡುವುದು ಹೇಗೆ ಎಂದು ತಿಳಿಯದೇ ಪೊಲೀಸ್ ಇನ್ಸ್‌ಪೆಕ್ಟರ್ ದಂಗಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಲಕ್ನೋ: ಜನಸಾಮಾನ್ಯರಿಗೆ ಎಲ್ಲರಿಗೂ ಗನ್ ಲೋಡ್ ಮಾಡಲು ಗೊತ್ತಿರುವುದು ಬಹಳ ಅಪರೂಪ, ಮನೆಯಲ್ಲಿ ಪರವಾನಗಿ ಇರುವ ಪಿಸ್ತೂಲ್ ಹೊಂದಿದ್ದರೆ ತಿಳಿದಿರುವ ಸಾಧ್ಯತೆ ಇರುತ್ತದೆ. ಆದರೆ ಎಲ್ಲರಿಗೂ ಗನ್ ಲೋಡ್ ಮಾಡುವ ಬಗ್ಗೆ ತಿಳಿದಿರುವ ಸಾಧ್ಯತೆ ತೀರಾ ಕಡಿಮೆ. ಆದರೆ ಸಮಾಜದ ಭದ್ರತೆಯಲ್ಲಿ ತೊಡಗಿರುವ ಪೊಲೀಸರಿಗೆ ಇದು ತಿಳಿದಿರಲೇಬೇಕು. ಆದರೆ ಉತ್ತರಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಇದೂ ಗೊತ್ತಿಲ್ಲ. ಹೌದು ಮೇಲಾಧಿಕಾರಿಗಳೊಬ್ಬರು ಪರಿಶೀಲನೆಗೆ ಬಂದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಗನ್‌ಗೆ ಮದ್ದುಗುಂಡು ಲೋಡ್ ಮಾಡಲು ಹೇಳಿದ್ದಾರೆ. ಆದರೆ ಗನ್‌ ಗೆ ಮದ್ದುಗುಂಡು ಲೋಡ್ ಮಾಡುವುದು ಹೇಗೆ ಎಂದು ತಿಳಿಯದೇ ಪೊಲೀಸ್ ಇನ್ಸ್‌ಪೆಕ್ಟರ್ ದಂಗಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಗನ್ ಲೋಡ್ ಮಾಡಲು ಬರದೇ ಮೇಲಾಧಿಕಾರಿಗೆ ಇನ್ಸ್‌ಪೆಕ್ಟರ್ ಶಾಕ್ ನೀಡಿದ್ದಾರೆ. ಇತ್ತ ಅವರ ಸುತ್ತಲೂ ಇದ್ದ ಇತರ ಸಿಬ್ಬಂದಿ ಅವರನ್ನು ನೋಡಿ ನಗಾಡಿದ್ದಾರೆ. ಉತ್ತರಪ್ರದೇಶದ ಸಂತ ಕಬೀರ ನಗರದ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಈ ಪೊಲೀಸ್ ಇನ್ಸ್‌ಪೆಕ್ಟರ್, ಬುಲೆಟ್ ಅನ್ನು ಅದರ ತುದಿಯಿಂದ ಹಾಕಿದ್ದಾನೆ. ಅಂದರೆ ಈ ಇನ್ಸ್‌ಪೆಕ್ಟರ್ ಬಿಟ್ರಿಷರ ಕಾಲದ ಫಿರಂಗಿಯಂತೆ ಗನ್‌ನ್ನು ನೋಡಿದ್ದು, ಮೇಲಾಧಿಕಾರಿ ಗನ್ ಲೋಡ್ ಮಾಡಿ ಅಂದಾಗ ಗನ್‌ನ ತುದಿಯಿಂದ ಬುಲೆಟ್ ಹಾಕಿದ್ದಾನೆ. ಇದನ್ನು ನೋಡಿ ಇನ್ಸ್‌ಪೆಕ್ಟರ್ ಸೇರಿದಂತೆ ಸುತ್ತಲಿದ್ದ ಇತರ ಪೊಲೀಸ್ ಸಿಬ್ಬಂದಿ ಕೂಡ ದಂಗಾಗಿದ್ದು, ಮತ್ತೆ ಕೆಲವರು ನಗಲು ಶುರು ಮಾಡಿದ್ದಾರೆ. 

Marriage Rules : ಮದುವೆ ದಿನ ಪೊಲೀಸ್ ಬರಬಾರದು, ಏನಿದೆ ಕಾನೂನು?

ಇನ್ನು ಈ ಬಗ್ಗೆ ಈ ಇನ್ಸ್‌ಪೆಕ್ಟರ್ (Inspector) ಬಳಿ ಹಿರಿಯ ಅಧಿಕಾರಿ ಕೇಳಿದಾಗ ಅವರು, ಯಾರಿಗೂ ಗಾಯವಾಗದ ರೀತಿಯಲ್ಲಿ ಗುಂಡು ಹಾರಿಸುವ ಪ್ರಕ್ರಿಯೆ ಇದು ಎಂದು ಮೇಲಾಧಿಕಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ತನಿಖಾಧಿಕಾರಿ ಹೇಗೆ ಗನ್ ಅನ್‌ಲೋಡ್ ಮಾಡುವುದು ಎಂದು ಕೇಳಿದಾಗ, ಈ ಇನ್ಸ್‌ಪೆಕ್ಟರ್ ಗನ್‌ ಅನ್ನು ತಲಕೆಳಗಾಗಿ ಹಿಡಿದಿದ್ದಾರೆ. ಈ ವೇಳೆ ಗನ್ ತುದಿಯಿಂದ ಈತ ಹಾಕಿದ ಒಂದೊಂದೇ ಬುಲೆಟ್ ಹೊರ ಬಂದಿದೆ. 

ಸಂತ ಕಬೀರ್ ನಗರದ (Sant Kabir Nagar) ಪೊಲೀಸ್ ಠಾಣೆಯೊಂದಕ್ಕೆ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಆರ್‌ಕೆ ಭಾರದ್ವಾಜ್ (RK Bhardwaj) ಅವರು ದಿಢೀರ್ ತಪಾಸಣೆಗೆ ಹೋದಾಗ ಈ ವಿಚಿತ್ರ  ಘಟನೆ ನಡೆದಿದೆ. ಈ ಇನ್ಸ್‌ಪೆಕ್ಟರ್ ಪೆದ್ದುತನಕ್ಕೆ ಈ ಡಿಐಜಿ ಆರ್‌ಕೆ ಭಾರದ್ವಾಜ್ ಅವರಿಗೆ ಜೋರಾಗಿ ನಗೆ ಬಂದರೂ ನಗೆಯನ್ನು ಕಂಟ್ರೋಲ್ ಮಾಡಿಕೊಂಡು ಅವರನ್ನು ವಿಚಾರಿಸಿದ್ದಾರೆ. ಆದರೆ ಅವರ ಜೊತೆ ಇದ್ದ ಇತರ ಅಧಿಕಾರಿಗಳು ಮೇಲಾಧಿಕಾರಿ ಮುಂದೆ ನಗಲಾಗದೇ ಮುಸಿ ಮುಸಿ ನಗುವನ್ನು ಕಂಟ್ರೋಲ್ ಮಾಡಿದ್ದಾರೆ. ಇದಾದ ಬಳಿಕ ಈ ಇನ್ಸ್‌ಪೆಕ್ಟರ್‌ಗೆ ಮೇಲಾಧಿಕಾರಿ ಡಿಐಜಿ ಆರ್‌ಕೆ ಭಾರದ್ವಾಜ್ ಅವರು, ಈ ಇನ್ಸ್‌ಪೆಕ್ಟರ್ ಅವರಿಗೆ ತುರ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ತರಬೇತಿ ನೀಡುವಂತೆ ಹೇಳಿದ್ದಾರೆ. ಅಂದಹಾಗೆ ಈ ನಾಡಕೋವಿಯನ್ನು ಗನ್‌ನ ಹಿಡಿ ಭಾಗದಲ್ಲಿ ಬುಲೆಟ್ ಲೋಡ್ ಮಾಡುವ ಜಾಗ ಇದ್ದು, ಅಲ್ಲಿ ಒಪನ್ ಮಾಡಿ ಗನ್ ಲೋಡ್ ಮಾಡಲಾಗುತ್ತದೆ. 

ಆಸ್ಪತ್ರೆಗೆ ಹೋಗ್ತಿದ್ದ ಆಂಬ್ಯುಲೆನ್ಸ್, ಮಾರ್ಗ ಮಧ್ಯದಲ್ಲೇ ಮದ್ಯ ಸೇವಿಸಿ, ರೋಗಿಗೂ ಕುಡಿಸಿದ ಡ್ರೈವರ್!

Viral Video: UP Cop Was Asked To Load A Gun.
OMG😜😜😜 pic.twitter.com/AHek8iGFdC

— pratiksha (@Pratikshashrii)


 

click me!