ಕೋವಿಡ್ ಸ್ಫೋಟ, ಚೀನಾ ಸೇರಿ 7 ರಾಷ್ಟ್ರಗಳ ಪ್ರಯಾಣದಿಂದ ದೂರವಿರಿ!

By Suvarna NewsFirst Published Dec 28, 2022, 3:46 PM IST
Highlights

ಕೋವಿಡ್ ಸ್ಫೋಟ ಇದೀಗ ಮತ್ತೆ ಲಾಕ್‌ಡೌನ್ ಭೀತಿ ತಂದಿದೆ. ಭಾರತದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಹೆಚ್ಚಳ ಆತಂಕ ಹೆಚ್ಚಿಸಿದೆ. ಇದರಿಂದ 7 ರಾಷ್ಟ್ರಗಳ ಪ್ರಯಾಣಕ್ಕೆ ಸ್ವಯಂ ನಿರ್ಬಂಧ ವಿಧಿಸಿದರೆ ಒಳಿತು.

ನವದೆಹಲಿ(ಡಿ.28): ಕೋವಿಡ್ 19 ಮತ್ತೆ ಬಂದಿದೆ. ಕಳೆದೊಂದು ವರ್ಷದಿಂದ ಕೋವಿಡ್ ಭೀತಿಯಿಂದ ಜನರು ಹೊರಬಂದಿದ್ದಾರೆ. ಈಗಷ್ಟೇ ಆರ್ಥಿಕತೆ ಚೇತರಿಕೆ ಕಾಣಲು ಆರಂಭಿಸಿದೆ. ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಚೀನಾದಲ್ಲಿ ಮತ್ತೊಂದು ಬಾರಿ ಕೋವಿಡ್ ಸ್ಫೋಟಗೊಂಡು ಆತಂಕ ಹೆಚ್ಚಿಸಿದೆ. ಭಾರತದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ ಚೀನಾ ಸೇರಿದಂತೆ ವಿದೇಶಗಳಲ್ಲಿನ ಕೋವಿಡ್ ಅಲೆ, ಭಾರತಕ್ಕೂ ತಟ್ಟವು ಭೀತಿ ಎದುರಾಗಿದೆ. ಇದಕ್ಕಾಗಿ ಈಗಾಗಲೇ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಮಾರ್ಗಸೂಚಿಗಳು ಮತ್ತೆ ಜಾರಿಗೆ ಬಂದಿದೆ. ಇದರ ನಡುವೆ ಕೋವಿಡ್ ಸ್ಫೋಟಗೊಂಡಿರುವ 7 ರಾಷ್ಟ್ರಗಳ ಪ್ರಯಾಣಕ್ಕೆ ಸ್ವಯಂ ನಿರ್ಬಂಧ ವಿಧಿಸುವುದೇ ಉತ್ತಮ ನಿರ್ಧಾರವಾಗಿದೆ.

ಚೀನಾ, ಜಪಾನ್, ಸೌತ್ ಕೊರಿಯಾ, ಅಮೆರಿಕ, ಫ್ರಾನ್ಸ್ , ಜರ್ಮನಿ ಹಾಗೂ ಬ್ರೆಜಿಲ್ ದೇಶಗಳಲ್ಲಿ ಕೋವಿಡ್(Covid 19) ಪರಿಸ್ಥಿತಿ ಕೈಮೀರಿದೆ. ಚೀನಾದಲ್ಲಿ 5 ಲಕ್ಷ ಪ್ರಕರಣಗಳು ಪ್ರತಿ ದಿನ ದಾಖಲಾಗುತ್ತಿದೆ. ಪ್ರತಿ ದಿನದ ಸಾವಿನ ಸಂಖ್ಯೆಯೂ ಲಕ್ಷದ ಸನಿಹದಲ್ಲಿದೆ. ಪ್ರಕರಣ ಸಂಖ್ಯೆ ಗಣನೀಯ ಏರಿಕೆ ಇತರ ದೇಶಗಳಿಗೆ ಎಚ್ಚರಿಕೆ ಕರೆ ಗಂಟೆ ನೀಡಿದೆ. 

ತರಕಾರಿ ಖರೀದಿಸಲು ವಿಚಿತ್ರ ವೇಷದಲ್ಲಿ ಬಂದ ಚೀನಾ ದಂಪತಿ... ವಿಡಿಯೋ ವೈರಲ್

ಚೀನಾ ಮಾತ್ರವಲ್ಲ, ಜಪಾನ್ ದೇಶದಲ್ಲೂ ಕೋವಿಡ್(Japan Covid cases) ಸ್ಫೋಟಗೊಂಡಿದೆ. ಕಳೆದೆರಡು ಕೋವಿಡ್ ಅಲೆಯಲ್ಲಿ ಅತೀ ಹೆಚ್ಚು ಪ್ರಕರಣ ಹಾಗೂ ಸಾವು ನೋವು ಸಂಭವಿಸಿದ ದೇಶಗಳ ಪೈಕಿ ಜಪಾನ್ 2ನೇ ಸ್ಥಾನದಲ್ಲಿದೆ. ಸದ್ಯ ಜಪಾನ್‌ನಲ್ಲಿ ಪ್ರತಿ ದಿನದ ಸಾವಿನ ಸಂಖ್ಯೆ 415ಕ್ಕೆ ಏರಿಕೆಯಾಗಿದೆ. ಕಳೆದ ಏಳು ದಿನಗಳಿಂದ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಎರಡನೇ ಅಲೆ ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತಿದೆ.  

ಸೌತ್ ಕೊರಿಯಾದಲ್ಲಿ ಪ್ರತಿ ದಿನ 68,000 ಕೋವಿಡ್ ಪ್ರಕರಣಗಳು ದಾಖಲಾಗುತ್ತಿದೆ. ಕೊರಿಯಾದಲ್ಲೂ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದೆ. ಈಗಾಗಲೆ ಆಸ್ಪತ್ರೆ ಬೆಡ್‌ಗಳು ಭರ್ತಿಯಾಗುತ್ತಿದೆ. ಜನರ ಆತಂಕ ಹೆಚ್ಚಾಗುತ್ತಿದೆ. ಮತ್ತೊಮ್ಮೆ ಕಠಿಣ ನಿಯಮ ಜಾರಿಗೆ ಸೌತ್ ಕೊರಿಯಾ ಮುಂದಾಗಿದೆ.

ಕೋವಿಡ್ ವೈರಸ್ ಅತೀ ಹೆಚ್ಚು ಬಾಧಿಸಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇದೀಗ ಕೋವಿಡ್ ಒಮಿಕ್ರಾನ್ XBB ವೇರಿಯೆಂಟ್ ಕೂಡ ಪತ್ತೆಯಾಗಿದೆ. ಕಳೆದ ವಾರ ಅಮೆರಿಕದಲ್ಲಿ 11.2% ರಷ್ಟು ಕೋವಿಡ್ ಪ್ರಕರಣ ದಾಖಲಾಗಿತ್ತು. ಈ ವಾರ 18.3%ಕ್ಕೆ ಏರಿಕೆಯಾಗಿದೆ.

ಹೆಚ್ಚುತ್ತಿರುವ ದಿಢೀರ್ ಸಾವುಗಳು; ನಿಜವಾಯ್ತು ಕೋಡಿ ಶ್ರೀ ಭವಿಷ್ಯ!

ಕಳೆದ 28ದಿನಗಳಲ್ಲಿ ಫ್ರಾನ್ಸ್‌ನಲ್ಲಿ 28 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದೆ. ಪ್ರತಿ ವಾರ ಫ್ರಾನ್ಸ್‌ನಲ್ಲಿ 3,41,136 ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ಇನ್ನು ಜರ್ಮನಿಯಲ್ಲಿ ಪ್ರತಿ ದಿನ 40,000 ಕೋವಿಡ್ ಪ್ರಕರಣ ದಾಖಲಾಗುತ್ತಿದೆ.  ಬ್ರೆಜಿಲ್ ದೇಶದಲ್ಲಿ ವಾರದ ಕೋವಿಡ್ ಪ್ರಕರಣ ಸಂಖ್ಯೆ 3,37,810 ಕ್ಕೆ ಏರಿಕೆಯಾಗಿದೆ.

ಈ ಎಳು ದೇಶಗಳ ಪ್ರಯಾಣ ಸದ್ಯ ಅಪಾಯಕಾರಿಯಾಗಿದೆ. ಈ ದೇಶಗಳಲ್ಲಿ ಒಂದೊಂದೆ ಕೋವಿಡ್ ನಿಯಮಗಳು ಜಾರಿಯಾಗುತ್ತಿದೆ. ಸದ್ಯ ವಿದೇಶಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ ಶೀಘ್ರದಲ್ಲೇ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಹೀಗಾಗಿ ಈ ದೇಶಗಳ ಪ್ರಯಾಣ ಕೋವಿಡ್ ಆತಂಕದ ಜೊತೆ ನಿಗದಿತ ಸಮಯದಲ್ಲಿ ಹಿಂತಿರುಗುವ ಸಾಧ್ಯತೆಗೂ ಅಡ್ಡಿಯಾಗಲಿದೆ.
 

click me!