ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಸೇರಿ ತನ್ನ ಪತಿಯ ಖಾಸಗಿ ಭಾಗಕ್ಕೆ ಕತ್ತರಿ ಹಾಕಿದ ಆಘಾತಕಾರಿ ಘಟನೆ ನಡೆದಿದೆ.
ಗೋರಖ್‌ಪುರ. ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಪತ್ನಿಯೊಬ್ಬಳು ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಸೇರಿ ಪತಿಗೆ ಮುಖ ತೋರಿಸಲಾಗದಂತಹ ಶಿಕ್ಷೆ ನೀಡಿದ್ದಾಳೆ. ಮೂವರು ಸೇರಿ ಮೊದಲು ಪತಿಯನ್ನು ಹಾಸಿಗೆಯ ಮೇಲೆ ಬೀಳಿಸಿ, ನಂತರ ಒಂದೊಂದಾಗಿ ಅವನ ಎಲ್ಲಾ ಬಟ್ಟೆಗಳನ್ನು ಕಳಚಿದ್ದಾರೆ. ನಂತರ ಅವನ ಗುಪ್ತಾಂಗವನ್ನು ಕತ್ತರಿಸಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದ ಪತಿ ನೋವಿನಿಂದ ಕಿರುಚಲು ಆರಂಭಿಸಿದ್ದಾನೆ. ಆದರೆ ಯಾರೂ ಅವನ ಮಾತನ್ನು ಕೇಳಲು ಸಿದ್ಧರಿರಲಿಲ್ಲ, ಬಳಿಕ ಊರಿನವರು ಆತನನ್ನು ಕಷ್ಟಪಟ್ಟು ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಂದರ ಪತ್ನಿಯನ್ನು ಅನುಮಾನಿಸುತ್ತಿದ್ದ ಪತಿ
ಗೋರಖ್‌ಪುರ ಜಿಲ್ಲೆಯ ಗೋಲಾ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಹೀಗೆ ಪತ್ನಿಯಿಂದ ದಾಳಿಗೊಳಗಾದ ವ್ಯಕ್ತಿಯ ಸುಂದರಿಯಾಗಿದ್ದು,ಮನೆಯಿಂದ ಹೊರಗೆ ಆಕೆಯ ಓಡಾಟ ಹೆಚ್ಚಿತ್ತು. ಆಕೆಯನ್ನು ಎಲ್ಲಿಗೆ ಹೋಗಿದ್ದೆ ಎಂದು ಕೇಳಿದರೂಆಕೆ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಈ ಕಾರಣದಿಂದಾಗಿ ಪತಿ ಆಕೆಯ ಚಾರಿತ್ರ್ಯದ ಮೇಲೆ ಅನುಮಾನ ಪಡಲು ಪ್ರಾರಂಭಿಸಿದ್ದ. ಅವಳು ಹೊರಗೆ ಹೋಗಿ ಬೇರೆಯವರ ಜೊತೆ ತಿರುಗಾಡುತ್ತಿದ್ದಾಳೆ ಎಂದು ಅವನಿಗೆ ಅನಿಸಲು ಪ್ರಾರಂಭಿಸಿತು. ಈ ಕಾರಣದಿಂದಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಇದನ್ನೂ ಓದಿ : ಫಸ್ಟ್‌ನೈಟ್‌ನಲ್ಲಿ ಸರ್ಪ್ರೈಸ್ ಕೊಡಲು ಹೋಗಿ ಕೈ, ಕಣ್ಣು ಕಿವಿ ಕಳ್ಕೊಂಡ ಗಂಡ… ಖಾಸಗಿ ಅಂಗ ಚೆಕ್ ಮಾಡ್ಕೊಂಡ !
ಸ್ನೇಹಿತೆಯರನ್ನು ಕರೆಸಿ ಗುಪ್ತಾಂಗ ಕತ್ತರಿಸಿದರು
ಪತಿ ಅನುಮಾನದಿಂದಾಗಿ ಆಕೆಯ ಮೇಲೆ ನಿರ್ಬಂಧ ಹೇರಲು ಶುರು ಮಾಡಿದ್ದು, ಇದರಿಂದ ಪತ್ನಿಗೆ ಕಿರಿಕಿರಿಯಾಗಿದೆ. ಹೀಗಾಗಿ ಈ ಪತಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿದ ಆಕೆ ತನ್ನ ಇಬ್ಬರು ಸ್ನೇಹಿತೆಯರಿಗೆ ಕರೆ ಮಾಡಿ ಮನೆಗೆ ಕರೆದಳು. ಬಳಿಕ ಪತಿಯನ್ನು ಹಾಸಿಗೆಯ ಮೇಲೆ ಬೀಳಿಸಿ ಮೂವರು ಸೇರಿ ಒಂದೊಂದಾಗಿ ಆತನ ಬಟ್ಟೆ ಬಿಚ್ಚಿದ್ದಾರೆ ಬಳಿಕ ಬ್ಲೇಡ್‌ನಿಂದ ಅವನ ಗುಪ್ತಾಂಗವನ್ನು ಕತ್ತರಿಸಿದ್ದಾರೆ. ಇದರಿಂದ ರಕ್ತಸ್ರಾವವಾಗಿದ್ದು, ಆತ. ನೋವಿನಿಂದ ಕಿರುಚಾಡಿದ್ದು, ಈ ವೇಳೆ ಸ್ಥಳಕ್ಕೆ ಬಂದ ನೆರೆಹೊರೆಯ ಮನೆಯವರು ಆತನನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ., ಅಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಳು ಪತ್ನಿ
ಶುಕ್ರವಾರ ಬೆಳಿಗ್ಗೆ ಪತಿ-ಪತ್ನಿಯರ ನಡುವೆ ಮತ್ತೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಇದಾದ ಬಳಿಕ ಮಹಿಳೆ ತನ್ನ ಸ್ನೇಹಿತೆಯರಿಗೆ ತಾನು ತುಂಬಾ ತೊಂದರೆಗೀಡಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಾನೆ ಎಂದಿದ್ದಾಳೆ.. ಇದಾದ ಬಳಿಕ ಮೂವರು ಸೇರಿ ಪತಿಗೆ ಪಾಠ ಕಲಿಸಲು ಸಂಚು ರೂಪಿಸಿದರು. ನಂತರ ಪತಿ ಮನೆಗೆ ಬಂದಾಗ ಅವನ ಗುಪ್ತಾಂಗವನ್ನು ಕತ್ತರಿಸಲಾಯಿತು. ಈ ಬಗ್ಗೆ ಸಂತ್ರಸ್ತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಅಕ್ರಮ ಸಂಬಂಧದ ಭಯಾನಕ ಅಂತ್ಯ - ಬೆರಳು ಕತ್ತರಿಸಿ, ಮೂಳೆ ಮುರಿದು, ಕಣ್ಣು ಕಿತ್ತು ಮರ್ಮಾಂಗವನ್ನೇ ಕಟ್ ಮಾಡಿದ್ರು!