Asianet Suvarna News Asianet Suvarna News

ಅಕ್ರಮ ಸಂಬಂಧದ ಭಯಾನಕ ಅಂತ್ಯ - ಬೆರಳು ಕತ್ತರಿಸಿ, ಮೂಳೆ ಮುರಿದು, ಕಣ್ಣು ಕಿತ್ತು ಮರ್ಮಾಂಗವನ್ನೇ ಕಟ್ ಮಾಡಿದ್ರು!

ಇಮಾಮ್ ಖಾನ್ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಅದೇ ಗ್ರಾಮದ ಲಾಲಿ ಹೆಸರಿನ ಜೊತೆ ಅಕ್ರಮ ಸಂಬಂಧ ಹೊಂದಿದ್ದನು.

horrific-incident-married man-brutal-murder-over-alleged-illicit-relationship with widow mrq
Author
First Published Aug 8, 2024, 3:53 PM IST | Last Updated Aug 8, 2024, 3:53 PM IST

ಜೈಪುರ: ರಾಜಸ್ಥಾನದ ಬಾರ್‌ಮೇರ್ ಜಿಲ್ಲೆಯ ಪ್ರೀತಿ ಭಯಾನಕವಾಗಿ ಅಂತ್ಯವಾಗಿದೆ. ಎರಡು ಮಕ್ಕಳ ತಂದೆ 44 ವರ್ಷದ ವ್ಯಕ್ತಿಯನ್ನು ಭಯಂಕರವಾಗಿ ಕೊಲೆ ಮಾಡಲಾಗಿದೆ. ಈ ವ್ಯಕ್ತಿಯ ಬೆರಳುಗಳನ್ನು ಕತ್ತರಿಸಲಾಗಿದೆ. ನಂತರ ಮೂಳೆಯನ್ನು ಮುರಿದು, ಕಣ್ಣುಗಳನ್ನು ಕಿತ್ತಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು ವ್ಯಕ್ತಿಯ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕಟ್ ಮಾಡುವ ಮೂಲಕ ವಿಕೃತಿ ಮರೆದಿದ್ದಾರೆ. ಮೃತ ವ್ಯಕ್ತಿ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಮಹಿಳೆಯ ಸಂಬಂಧಿಕರು ಕೊಲೆ ಮಾಡಿದ್ದು ಎಂಬ ಆರೋಪಗಳು ಕೇಳಿ ಬಂದಿದ್ದು, ಘಟನೆ ಸಂಬಂಧ ಪೊಲೀಸರು ನಾಲ್ಕು ಜನರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 

ಮೃತ ವ್ಯಕ್ತಿಯನ್ನು ಬಿರಂಪುರ ಗ್ರಾಮದ ನಿವಾಸಿ ಇಮಾಮ್ ಖಾನ್ ಎಂದು ಗುರುತಿಸಲಾಗಿದೆ. ಇಮಾಮ್ ಖಾನ್ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಅದೇ ಗ್ರಾಮದ ಲಾಲಿ ಹೆಸರಿನ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಲಾಲಿ ಗಂಡ ಮೃತನಾಗಿದ್ದು, ಅತ್ತೆ-ಮಾವನ ಜೊತೆಯಲ್ಲಿಯೇ ವಾಸವಾಗಿದ್ದಳು. ಸೊಸೆ ಲಾಲಿ ಅಕ್ರಮ ಸಂಬಂಧ ಹೊಂದಿರುವ ವಿಷಯ ಕುಟುಂಬಸ್ಥರಿಗೆ ಗೊತ್ತಾಗಿತ್ತು. ಹಲವು ಬಾರಿ ಇಮಾಮ್ ಖಾನ್ ಜೊತೆ ಮಾತನಾಡಿ ತಮ್ಮ ಸೊಸೆಯಿಂದ ದೂರ ಇರುವಂತೆ ಹೇಳಿದ್ದರು. ಹಾಗೆ ಲಾಲಿಗೂ ಎಚ್ಚರಿಕೆ ನೀಡಿದ್ದರು. 

ಕುಟುಂಬಸ್ಥರು ಎಚ್ಚರಿಕೆ ನೀಡಿದ್ರೂ ಇಮಾಮ್ ಖಾನ್ ಮತ್ತು ಲಾಲಿ ನಡುವಿನ ಸಂಬಂಧ ಮುಂದುವರಿದಿತ್ತು. ಇದೇ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ಜಗಳ ಸಹ ನಡೆದಿತ್ತು. ನಿನ್ನೆ ರಾತ್ರಿ ಲಾಲಿಯನ್ನು ಭೇಟಿಯಾಗಲು ಇಮಾಮ್ ಬಂದಿದ್ದನು. ಈ ವಿಷಯ ಲಾಲಿ ಕುಟುಂಬಸ್ಥರಿಗೆ ಗೊತ್ತಾಗಿದೆ. ಕುಟುಂಬದ ನಾಲ್ವರು ಮನೆ ಬಾಗಿಲು ಮುರಿದು ಇಮಾಮ್ ಮತ್ತು ಲಾಲಿಯಿದ್ದ ಕೋಣೆಗೆ ನುಗ್ಗಿದ್ದಾರೆ.

ಸರಸ ಸಲ್ಲಾಪದಲ್ಲಿದ್ದಾಗಲೇ ಸಿಕ್ಕಿ ಬಿದ್ದ ಮಹಿಳೆ; ಮಕ್ಕಳ ಮುಂದೆ ಕಟ್ಟಿ ಹಾಕಿ ಥಳಿಸಿದ್ರು!

ಬಾಗಿಲು ಮುರಿದು ಒಳಗೆ ನುಗ್ಗಿದಾಗ ಇಮಾಮ್ ಮತ್ತು ಲಾಲಿ ಇಬ್ಬರು ಸಲುಗೆಯಿಂದಿರೋದು ಕಂಡು ಬಂದಿದೆ. ಇಬ್ಬರ ಅನಾಚಾರ ಕಂಡು ಕೋಪಗೊಂಡ ಲಾಲಿ ಕುಟುಂಬಸ್ಥರು, ಇಮಾಮ್ ಖಾನ್ ಬಾಯಿಗೆ ಬಟ್ಟೆ ತುರುಕಿ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. 

ಇಮಾಮ್ ಕೈಯಲ್ಲಿನ ಎಲ್ಲಾ ಬೆರಳುಗಳನ್ನು ಕಟ್ ಮಾಡಿದ್ದಾರೆ. ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದರಿಂದ ಮೂಳೆಗಳು ಸಹ ಮುರಿದಿವೆ. ನಂತರ ಕಣ್ಣುಗಳನ್ನು ಕಿತ್ತು ಹಾಕಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಇದರಿಂದ ಇಮಾಮ್  ಖಾನ್ ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಇಂದು ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಇಮಾಮ್ ಖಾನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಮಾಮ್ ಖಾನ್ ಕೊಲೆಯಿಂದಾಗಿ ಗ್ರಾಮದಲ್ಲಿ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪ್ರಿಯಕರನಿಗೆ ಮೂತ್ರ ಕುಡಿಸಿ ಕೊಂದ್ಳು... ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳತಿ ಇಷ್ಟು ಕ್ರೂರಿ ಆಗಿದ್ದೇಕೆ? 

Latest Videos
Follow Us:
Download App:
  • android
  • ios