ಗಂಡು ಮಗುವೆಂದು ಊರೆಲ್ಲಾ ಸಿಹಿ ಹಂಚಿದ ಮೇಲೆ ಹೆಣ್ಣು ಮಗು ಕೊಟ್ಟ ಆಸ್ಪತ್ರೆ

By Anusha KbFirst Published Jun 23, 2023, 1:47 PM IST
Highlights

ದಂಪತಿಗೆ ಮೊದಲಿಗೆ ಗಂಡು ಮಗುವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಬಳಿಕ ಹೆಣ್ಣು ಮಗುವನ್ನು ತಂದು ಕೈ ಗಿಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮಗು ಬದಲಿಸಿದ್ದಾರೆ ಎಂದು ಆರೋಪಿಸಿದ್ದಲ್ಲದೇ ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಲಕ್ನೋ: ಆಸ್ಪತ್ರೆಗಳಲ್ಲಿ ವೈದ್ಯರು ಅಥವಾ ಇತರ ಸಿಬ್ಬಂದಿ  ಎಡವಟ್ಟು ಮಾಡಿದರೆ ಅದರಿಂದ ಆಗುವ ಅನಾಹುತಗಳು ಒಂದೆರಡಲ್ಲ, ಆಸ್ಪತ್ರೆಗೆಗಳಲ್ಲಿ ಮಗು ಬದಲಾಗುವುದು ಹೆಣ್ಣು ಮಗು ಎಂದು ಹೇಳಿದ ಬಳಿಕ ಗಂಡು ಮಗು ಕೊಡುವುದು, ಗಂಡು ಮಗು ಎಂದು ಹೇಳಿ ಹೆಣ್ಣು ಮಗು ಕೊಡುವುದು ಯಾರದೋ ಮಕ್ಕಳನ್ನು ಇನ್ಯಾರಿಗೋ ಕೊಡುವುದು ಹೀಗೆ ಈ  ರೀತಿಯ ಹಲವು ಅವಾಂತರಗಳು ಆಸ್ಪತ್ರೆಯಲ್ಲಿ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ದಂಪತಿಗೆ ಮೊದಲಿಗೆ ಗಂಡು ಮಗುವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಬಳಿಕ ಹೆಣ್ಣು ಮಗುವನ್ನು ತಂದು ಕೈ ಗಿಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮಗು ಬದಲಿಸಿದ್ದಾರೆ ಎಂದು ಆರೋಪಿಸಿದ್ದಲ್ಲದೇ ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಡಿಎನ್‌ಎ ಪರೀಕ್ಷೆ ಆಗುವವವರೆಗೂ ಹೆಣ್ಣು ಮಗುವನ್ನು ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಬಸ್ತಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿಈ ಅವಾಂತರ ನಡೆದಿದೆ. 

ದೇವೇಂದ್ರಕುಮಾರ್ ಎಂಬುವವರು ತಮ್ಮ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್ತಿ ಮೆಡಿಕಲ್ ಕಾಲೇಜಿಗೆ ಸೇರಿದ ಒಪಿಇಸಿ ಆಸ್ಪತ್ರೆಗೆ ಪತ್ನಿಯನ್ನು ದಾಖಲಿಸಿದ್ದರು.  ಬಳಿಕ ತಪಾಸಣೆ ನಡೆಸಿ ಸಿಸೇರಿಯನ್‌ (C-section) ಮೂಲಕ ಮಗುವನ್ನು ಹೊರ ತೆಗೆದಿದ್ದು, ಮಗು ಜನಿಸಿದ ಕೂಡಲೇ ಆಸ್ಪತ್ರೆ ಸಿಬ್ಬಂದಿ ಬಂದು ದೇವೇಂದ್ರ ಕುಮಾರ್‌ಗೆ ಗಂಡು ಮಗು ಆಯ್ತು ಎಂದು ಹೇಳಿದ್ದಾರೆ. ಇದೇ ಖುಷಿಯಲ್ಲೇ ದೇವೇಂದ್ರ (Devendra Kumar) ಬಳಿ ಆಸ್ಪತ್ರೆ ಸಿಬ್ಬಂದಿ ಎಕ್ಸ್ಟ್ರಾ ವಸೂಲಿ ಬಾಜಿಯನ್ನು ಮಾಡಿದ್ದಾರೆ. ಇತ್ತ ಏನಾದರಾಗಲಿ ಗಂಡು ಮಗು ಆಯ್ತಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗೆ ದೇವೇಂದ್ರ ಸಾವಿರ ರೂಪಾಯಿಯನ್ನು ನೀಡಿದ್ದಾನೆ.

Latest Videos

ಕಲಬುರಗಿ ಜಿಲ್ಲಾಸ್ಪತ್ರೆಯ ದಿಟ್ಟ ಹೆಜ್ಜೆ : ಮಗು ಅದಲು ಬದಲು ತಡೆಗೆ 'ಬೇಬಿ ಬ್ಯಾಂಡ್'

ಅಷ್ಟೇ ಯಾಕೆ ಸಿಹಿ ತಿಂಡಿ ತೆಗೆದುಕೊಂಡು ಬಂದು ಇಡೀ ಆಸ್ಪತ್ರೆಗೆ (Hospital) ಹಂಚಿದ್ದಾನೆ. ಅಲ್ಲದೇ ಸಂಬಂಧಿಕರಿಗೆಲ್ಲಾ ಗಂಡು ಮಗು ಆದ ಬಗ್ಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಇದೆಲ್ಲಾ ಆದ ಮೇಲೆ ಆಸ್ಪತ್ರೆ ಸಿಬ್ಬಂದಿ ಮಗು ತಂದು ದೇವೇಂದ್ರ ಅವರ ಕೈಗೆ ನೀಡಿ ಹೋಗಿದ್ದು, ಈ ವೇಳೆ ಮಗುವಿಗೆ ಹೊದಿಸಿದ್ದ ಬಟ್ಟೆ ಎತ್ತಿ ನೋಡಿದಾಗ ಗಂಡು ಮಗು (Baby Boy) ಇರಬೇಕಾದ ಜಾಗದಲ್ಲಿ ಹೆಣ್ಣು ಮಗುವಿಗೆ ಇದರಿಂದ ದೇವೇಂದ್ರ  ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದು, ಆಸ್ಪತ್ರೆ ಸಿಬ್ಬಂದಿ ಮೊದಲಿಗೆ ಗಂಡು ಮಗು ಎಂದು ಹೇಳಿದ್ದಾರೆ ಈಗ ಹೆಣ್ಣು ಮಗು ನೀಡಿದ್ದಾರೆ. ಇವರು ಬೇಕಂತಲೇ ನಮ್ಮ ಮಗುವನ್ನು ಬದಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಸ್ಪತ್ರೆಯ ತಾಯಿ ಮಗುವಿನ ಪುಸ್ತಕದಲ್ಲೂ ಅವರು ಗಂಡು ಮಗು ಎಂದೇ ಬರೆದಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ. 

ಅಲ್ಲದೇ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಡಿಎನ್‌ಎ ಪರೀಕ್ಷೆ (DNA Test) ನಡೆಸುವಂತೆ ಆಗ್ರಹಿಸಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ಎಂದು ಬರೆದಿದ್ದ ದಾಖಲಾತಿಯನ್ನು ವಾಪಸ್ ಪಡೆದು ಹೆಣ್ಣು ಮಗು ಎಂದು ಬರೆದು ನೀಡಿದ್ದಾರೆ. ಅಲ್ಲದೇ  ಡಿಎನ್‌ಎ ಪರೀಕ್ಷೆ ಆಗದ ಹೊರತು ಮಗುವನ್ನು ಕರೆದೊಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು, ಆದರೆ ಮಾರನೇಯ ದಿನ ಡಿಸ್ಚಾರ್ಜ್ ವೇಳೆ ಮಗುವನ್ನು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. 

ತಾಯಿಯಾದ ಸಂಭ್ರಮದಲ್ಲಿ 'ಜೋಶ್' ನಾಯಕಿ; ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪೂರ್ಣಾ

click me!