
ಉತ್ತರ ಪ್ರದೇಶ ಭಾರತದ ಅತ್ಯಂತ ದೊಡ್ಡ ಮತ್ತು ರಾಜಕೀಯವಾಗಿ ಅತ್ಯಂತ ಪ್ರಮುಖ ರಾಜ್ಯ. ದೇಶದ ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸುವ ಯುಪಿ ರಾಜಕೀಯದಲ್ಲಿ, ಮುಖ್ಯಮಂತ್ರಿ ಸ್ಥಾನವನ್ನು ಅತ್ಯುನ್ನತ ಅಧಿಕಾರ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ದಶಕಗಳ ಇತಿಹಾಸವಿರುವ ಯುಪಿ ಸಿಎಂ ಕುರ್ಚಿಯಲ್ಲಿ ಅನೇಕ ದಿಗ್ಗಜ ನಾಯಕರು ಕುಳಿತು ಆಡಳಿತ ನಡೆಸಿದ್ದಾರೆ. ಕೆಲವರು ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡರೆ, ಇನ್ನು ಕೆಲವರು ದಾಖಲೆ ಮಟ್ಟದಲ್ಲಿ ಹಲವು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗಾದರೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾದ ದಾಖಲೆ ಯಾರ ಹೆಸರಲ್ಲಿದೆ? ಮಾಯಾವತಿ, ಮುಲಾಯಂ ಸಿಂಗ್ ಮತ್ತು ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಈ ರೇಸ್‌ನಲ್ಲಿ ಎಲ್ಲಿದ್ದಾರೆ ಎಂಬುದರ ಸಮಗ್ರ ವಿವರ ಇಲ್ಲಿದೆ.
ಉತ್ತರ ಪ್ರದೇಶದ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 'ನಾಲ್ಕು ಬಾರಿ' ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ದಾಖಲೆ ಇಬ್ಬರು ನಾಯಕರ ಹೆಸರಲ್ಲಿದೆ ಕಾಂಗ್ರೆಸ್‌ನ ಚಂದ್ರಭಾನು ಗುಪ್ತಾ ಮತ್ತು ಬಿಎಸ್‌ಪಿಯ ಮಾಯಾವತಿ.
ಚಂದ್ರಭಾನು ಗುಪ್ತಾ; ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ಇವರು ಮೊದಲು ಡಿಸೆಂಬರ್ ೧೯೬೦ ರಲ್ಲಿ ಸಿಎಂ ಆದರು. ಆ ನಂತರ 1962, 1967 ಹಾಗೂ 1969ರಲ್ಲಿ ಒಟ್ಟು ನಾಲ್ಕು ಪ್ರತ್ಯೇಕ ಅವಧಿಗಳಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಮಾಯಾವತಿ; ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು 1995ರಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದು, ಯುಪಿಯ ಮೊದಲ ದಲಿತ ಮಹಿಳಾ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತದನಂತರ 1997, 2002 ಮತ್ತು 2007ರಲ್ಲಿ ನಾಲ್ಕನೇ ಬಾರಿಗೆ ಸಿಎಂ ಆದರು. ವಿಶೇಷವೆಂದರೆ 2007ರಿಂದ 2012ರವರೆಗೆ ಇವರು ಸ್ಪಷ್ಟ ಬಹುಮತದೊಂದಿಗೆ ತಮ್ಮ 5 ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಿದ್ದರು.
ನಾಲ್ಕು ಬಾರಿ ಅಧಿಕಾರ ನಡೆಸಿದ ನಾಯಕರ ನಂತರದ ಸ್ಥಾನದಲ್ಲಿ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಹಾಗೂ ಹಿರಿಯ ಕಾಂಗ್ರೆಸ್ಸಿಗ ಎನ್.ಡಿ. ತಿವಾರಿ ಇದ್ದಾರೆ.
ಮುಲಾಯಂ ಸಿಂಗ್ ಯಾದವ್; ಯುಪಿ ರಾಜಕೀಯದ ಚಾಣಕ್ಯ ಎಂದೇ ಬಿರುದು ಪಡೆದಿದ್ದ ಮುಲಾಯಂ ಅವರು 1989ರಲ್ಲಿ ಮೊದಲ ಬಾರಿಗೆ ಸಿಎಂ ಆದರು. ನಂತರ 1993 ಹಾಗೂ 2003 ರಲ್ಲಿ ಮೂರನೇ ಬಾರಿಗೆ ಯುಪಿ ಅಧಿಕಾರ ಹಿಡಿದರು.
ನಾರಾಯಣ್ ದತ್ ತಿವಾರಿ (ಎನ್.ಡಿ. ತಿವಾರಿ); ಇವರು 1976, ಮತ್ತು 1988ರಲ್ಲಿ ಮೂರು ಬಾರಿ ಯುಪಿ ಸಿಎಂ ಆಗಿ ಸೇವೆ ಸಲ್ಲಿಸಿದರು. ಇವರಲ್ಲಿದ್ದ ಮತ್ತೊಂದು ಅಪರೂಪದ ದಾಖಲೆಯೆಂದರೆ, ಇವರು ಉತ್ತರ ಪ್ರದೇಶ ಮತ್ತು ಉತ್ತರಾಖಂಡ—ಎರಡೂ ರಾಜ್ಯಗಳ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಏಕೈಕ ನಾಯಕರಾಗಿದ್ದಾರೆ.
ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 19, 2017ರಂದು ಮೊದಲ ಬಾರಿಗೆ ಯುಪಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ನಂತರ 2022ರ ಚುನಾವಣೆಯಲ್ಲೂ ಬಿಜೆಪಿ ಬೃಹತ್ ಬಹುಮತದೊಂದಿಗೆ ಗೆದ್ದಾಗ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಸಂಖ್ಯೆಯ ಲೆಕ್ಕಾಚಾರದಲ್ಲಿ ಯೋಗಿ ಆದಿತ್ಯನಾಥ್ (೨ ಬಾರಿ) ಅವರು ಚಂದ್ರಭಾನು, ಮಾಯಾವತಿ, ಮುಲಾಯಂ ಹಾಗೂ ಎನ್.ಡಿ. ತಿವಾರಿ ಅವರಿಗಿಂತ ಹಿಂದುಳಿದಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಅವರ ಹೆಸರಲ್ಲಿ ಮತ್ತೊಂದು ಬೃಹತ್ ದಾಖಲೆಯಿದೆ. ಉತ್ತರ ಪ್ರದೇಶದ ರಾಜಕೀಯ ಇತಿಹಾಸದಲ್ಲೇ ಸತತವಾಗಿ ಅತಿ ಹೆಚ್ಚು ಕಾಲ (ದೀರ್ಘಾವಧಿ) ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ನಾಯಕ" ಎಂಬ ಅಭೂತಪೂರ್ವ ದಾಖಲೆ ಯೋಗಿ ಅವರ ಹೆಸರಲ್ಲಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಬಾರಿ (೪ ಬಾರಿ) ಮುಖ್ಯಮಂತ್ರಿಯಾದ ಜಂಟಿ ದಾಖಲೆ ಚಂದ್ರಭಾನು ಗುಪ್ತಾ ಹಾಗೂ ಮಾಯಾವತಿ ಅವರ ಹೆಸರಲ್ಲಿದ್ದರೆ, ಸತತವಾಗಿ ಸುದೀರ್ಘ ಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಯೋಗಿ ಆದಿತ್ಯನಾಥ್ ಅವರದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ