TTD: ದೇಶದಲ್ಲಿಯೇ ಮೊದಲು, ತಿರುಮಲ ತಿಮ್ಮಪ್ಪನ ನೋಡಲು ಬರುವ ಭಕ್ತರಿಗೆ ವಿಮೆ ಸೌಲಭ್ಯ

Published : Sep 09, 2026, 04:36 PM IST
tirumala

ಸಾರಾಂಶ

ತಿರುಮಲ ಶ್ರೀವಾರಿ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಟಿಟಿಡಿ ಆಡಳಿತ ಮಂಡಳಿಯು ಹೊಸ ವಿಮಾ ಸೌಲಭ್ಯವನ್ನು ಘೋಷಿಸಿದೆ. ಈ ಯೋಜನೆಯಡಿ, ಅಪಘಾತದಲ್ಲಿ ಮರಣ ಹೊಂದಿದ ಭಕ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಹಾಗೂ ತಿರುಮಲದಲ್ಲಿ ಸಹಜವಾಗಿ ಮರಣ ಹೊಂದಿದವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ವಿಮೆ ನೀಡಲು ನಿರ್ಧರಿಸಲಾಗಿದೆ.

ತಿರುಮಲ ಶ್ರೀವಾರಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಆಡಳಿತ ಮಂಡಳಿ ವಿಮೆ ಸೌಲಭ್ಯವನ್ನು ಘೋಷಣೆ ಮಾಡಿದೆ. ಅಕಸ್ಮಿಕವಾಗಿ ಸಾವು ಸಂಭವಿಸಿದರೆ, ಭಕ್ತರ ಕುಟುಂಬಕ್ಕೆ ನೋಡುವ ವಿಮೆಯನ್ನು 3 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದೆ. ಇದೇ ವೇಳೆ ತಿರುಮಲದಲ್ಲಿ ಸಹಜ ಸಾವು ಸಂಭವಿಸಿ ಸಾವನ್ನಪ್ಪಿದ ಭಕ್ತರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ನೀಡುವ ಗ್ರೂಪ್ ಇನ್‌ಶ್ಯೂರೆನ್ಸ್‌ ಯೋಜನೆಯನ್ನು ಜಾರಿ ಮಾಡಿದೆ.

ಶ್ರೀವಾರಿ ಸನ್ನಿಧಿಯಲ್ಲಿ ಭಕ್ತರಿಗೊಂದು ಅಭೂತಪೂರ್ವ ರಕ್ಷಾಕವಚ!

ಆ ಮೂಲಕ ಶ್ರೀವಾರಿ ದರ್ಶನಕ್ಕೆ ಆಗಮಿಸುವ ಭಕ್ತರ ಭದ್ರತೆ, ಸಂಕ್ಷೇಮಾಕ್ಕೆ ಟಿಟಿಡಿ ಆಡಳಿತ ಮಂಡಲಿ ದೊಡ್ಡ ಪೀಠ ಹಾಕಿದೆ. ಭಕ್ತರ ಅಪಘಾತ ವಿಮೆಯೊಂದಿಗೆ ಸಹಜ ಸಾವಿನ ವಿಮೆಯನ್ನು ಕಲ್ಪಿಸುವ ನಿರ್ಧಾರವನ್ನು ಕೈಗೊಂಡಿದೆ. ತಿರುಮಲ ಅನ್ನಮಯ್ಯ ಭವನದಲ್ಲಿ ಟಿಟಿಡಿ ಚೆರ್ಮನ್ ಬಿಆರ್ ನಾಯುಡು ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಸಮಾವೇಶದಲ್ಲಿ ಸುಮಾರು 50 ಅರ್ಜೆಂಡಾ ಅಂಶಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಭೆಯ ಬಳಿಕ ಟಿಟಿಡಿ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರಗಳ ಕುರಿತ ಅಧ್ಯಕ್ಷ ಬಿಆರ್ ನಾಯುಡು ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ. ಇದೇ ವೇಳೆ ತಿರುಮಲ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ, ನವರಾತ್ರಿ ಬ್ರಹ್ಮೋತ್ಸವಗಳ ಬುಕ್‌ಲೆಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ.

ಭಕ್ತರಿಗೆ ವಿಮೆ ಸೌಲಭ್ಯ

  • ದೇಶದಲ್ಲಿ ಇದೇ ಮೊದಲ ಬಾರಿಗೆ ಎಲ್‌ಐಸಿ ಮೂಲಕ ಶ್ರೀವಾರಿ ಭಕ್ತರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.
  • ಅವಘಡ, ಅಪಘಾತದಲ್ಲಿ ಸಾವು ಸಂಭವಿಸಿದರೆ, ಭಕ್ತನ ಕುಟುಂಬಕ್ಕೆ ನೀಡುವ ವಿಮೆ ಮೊತ್ತವನ್ನು 3 ರಿಂದ 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.
  • ತಿರುಮಲದಲ್ಲಿ ಸಹಜ ಸಾವು ಸಂಭವಿಸಿ ಸಾವನ್ನಪ್ಪಿದ ಭಕ್ತರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಆರ್ಥಿಕ ನೆರವು ಸಿಗಲಿದೆ.
  • ಗ್ರೂಪ್ ಇನ್‌ಶ್ಯೂರೆನ್ಸ್ ಮೂಲಕ ಯೋಜನೆ ಜಾರಿ ಮಾಡಲಾಗಿದೆ. ಇದಕ್ಕಾಗಿ ಬರೋಬ್ಬರಿ 2.12 ಕೋಟಿ ರೂಪಾಯಿಗಳನ್ನು ಎಲ್‌ಐಸಿಗೆ ಪಾವತಿ ಮಾಡಲು ಅನುಮತಿಸಲಾಗಿದೆ.

ಉದ್ಯೋಗಿಗಳ ಸಂಕ್ಷೇಮ ಮತ್ತು ಸೌಲಭ್ಯ

CPS/NPS ಪಿಂಚಣಿ, ಉದ್ಯೋಗಿಗಳ ಕುಟುಂಕ್ಕೆ ಇಎಚ್‌ಎಫ್ ಸೌಲಭ್ಯ ಕಲ್ಪಿಸಿಸುವ ಯೋಜನೆ 2 ಕೋಟಿ ರೂಪಾಯಿ ನೀಡಲು ಅನುಮತಿ.

ಟಿಟಿಡಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 48 ಉದ್ಯೋಗಿಗಳ ಸಂಬಳ ಹೆಚ್ಚಿಸಲು ನಿರ್ಣಯ.

ತಿರುಮದಲ್ಲಿ ಸ್ವಚ್ಛತೆ ಕೈಗೊಳ್ಳುವ ಸಿಬ್ಬಂದಿಗೆ ತಿರುಮಲಕ್ಕೆ ಆಗಮಿಸುವ ಸಾರಿಗೆ ವೆಚ್ಚ ನೀಡಲು ನಿರ್ಣಯ. ಇದಕ್ಕಾಗಿ ಮೂರು ವರ್ಷಕ್ಕೆ 1.60 ಕೋಟಿ ಮಂಜೂರು.

ತಿರುಮದಲ್ಲಿ ಎಫ್ಎಂಎಸ್ ಸೇವೆ ಮಾಡುತ್ತಿರುವ ಕಾರ್ಮಿಕರಿಗೆ ವಾರ್ಷಿಕ ಬ್ರಹ್ಮೋತ್ಸವ ಸಂದರ್ಭ ಲಡ್ಡು, ವಡೆ ನೀಡಲು ನಿರ್ಧಾರ. ಜೊತೆಗೆ ಲಡ್ಡು ತಯಾರಿಕೆಗೆ 400 ಮಂದಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಸರ್ಕಾರಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಕೆ.

ಉಳಿದಂತೆ ತಿರುಮಲ ಅನ್ನಪ್ರಸಾದ ಕೇಂದ್ರ, ಕ್ಯಾಂಟೀನ್, ಹೋಟೆಲ್‌ನಿಂದ ಬರುವ ಆಹಾರ ವ್ಯರ್ಥಗಳಿಂದ ಬಯೋಗ್ಯಾಸ್ ಉತ್ಪಾದನೆ ಮಾಡಲು ನಿರ್ಧಾರ. ಇದಕ್ಕಾಗಿ ಬಯೋಗ್ಯಾಸ್ ಪ್ಲಾಂಟ್ ನಿರ್ವಹಣೆಗೆ 2.80 ರೂಪಾಯಿ ಖಾಸಗಿ ಕಂಪನಿಗೆ ಉಸ್ತುವಾರಿ ನೀಡಲು ಅನುಮತಿ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸ್ತೆ ಅಗಲೀಕರಣಕ್ಕೆ ಒಪ್ಪದ ಉಜ್ಜಯಿನಿಯ ಹನುಮಾನ್; ಗುಡಿ ತೆರವುಗೊಂಡರೂ ಕದಲದ ಆಂಜನೇಯ
4500KM ದೂರದಿಂದ ಭಾರತದ ಕಾಡಿಗೆ ಬಂದಿದ್ದು ಹೇಗೆ ಅಪರೂಪದ ಒರಾಂಗುಟಾನ್? ಅತಿದೊಡ್ಡ ಸಮಸ್ಯೆ ಯಾಕೆ?