
ಶಹಜಹಾನ್‌ಪುರ (ಉ.ಪ್ರ): ಇಲ್ಲಿನ ಆರ್‌ಎಸ್‌ಎಸ್ ಕಚೇರಿ ಗೇಟಿಗೆ ವ್ಯಕ್ತಿಯೊಬ್ಬ ಮೂತ್ರ ಮಾಡಿದ್ದನ್ನು ತಡೆದಿದ್ದಕ್ಕಾಗಿ ಉದ್ರಿಕ್ತರ ಗುಂಪೊಂದು ಆರ್‌ಎಸ್‌ಎಸ್ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಗಲಾಟೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ವ್ಯಕ್ತಿ ಮೂತ್ರ ಮಾಡಿದ್ದನ್ನು ಕಂಡ ಆರ್‌ಎಸ್‌ಎಸ್ ಕಾರ್ಯಕರ್ತ, ಇಲ್ಲಿ ಮೂತ್ರ ಮಾಡಬಾರದು ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ವ್ಯಕ್ತಿ ಸುಮಾರು 50 ಜನರೊಂದಿಗೆ ಕಚೇರಿಗೆ ನುಗ್ಗಿ ಕಲ್ಲು ತೂರಾಟ, ಫೈರಿಂಗ್ ನಡೆಸಿದ್ದಾನೆ. ಇದರ ಪರಿಣಾಮ ಮೂವರು ಕಾರ್ಯಕರ್ತರಿಗೆ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಪೊಲೀಸರು 40 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಮೂತ್ರ ಮಾಡಿದವ ಸೇರಿ ಮೂವರನ್ನು ಬಂಧಿಸಿದ್ದಾರೆ. ಮಿಕ್ಕವರಿಗೆ ಬಲೆ ಬೀಸಿದ್ದಾರೆ.
ಉತ್ತರಪ್ರದೇಶದ ಶಹಜಾನ್‌ಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿ ಬಳಿ ಬುಧವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿತ್ತು. ಶಶಾಂಕ್ ಗುಪ್ತಾ ಎಂಬಾತ ಆರ್‌ಎಸ್‌ಎಸ್‌ನ ಕಾಂಪೌಂಡ್‌ಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ನೋಡಿದ ಕೆಲ ಆರ್‌ಎಸ್‌ಎಸ್ ಕಾರ್ಯಕರ್ತರು ಆತನಿಗೆ ಅಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಹೇಳಿದ್ದಾರೆ. ಈ ವೇಳೆ ಆತ ಆರ್‌ಎಸ್ಎಸ್ ಕಾರ್ಯಕರ್ತರಿಗೆ ಅವ್ಯಾಚ್ಯ ಪದಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ನಂತರ ತನ್ನ ಸಹಚರರನ್ನು ಸ್ಥಳಕ್ಕೆ ಕರೆಸಿಕೊಂಡ ಆತ, ಆರ್‌ಎಸ್‌ಎಸ್ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ, ಮೂತ್ರ ಮಾಡ್ಬೇಡ ಎಂದರ ಮೇಲೆ ಹಲ್ಲೆ ಮಾಡಿಸಿದ್ದಾನೆ. ನಂತರ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಆರೆಸ್ಸೆಸ್ಸಗೂ ತಲೆನೋವಾದ ಪುತ್ತಿಲ ಪರಿವಾರ: ಬೇಡಿಕೆ ಕಂಡು ಬಿಜೆಪಿ ಮುಖಂಡರೇ ಹೈರಾಣು!
ಆರೋಪಿಗಳು ನಮ್ಮ ಮೇಲೆ ಕಲ್ಲೆಸಿದ್ದಿದ್ದಲ್ಲದೇ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಮೂವರು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಗಾಯಗಳಾಗಿವೆ ಎಂದು ಆರ್‌ಎಸ್‌ಎಸ್ ಕಚೇರಿಯ ವಕ್ತಾರರೊಬ್ಬರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳಾದ ಶಶಾಂಕ್ ಗುಪ್ತ, ಶಿವಾಂಕ್ ಗುಪ್ತ, ಮುಕೇಶ್ ಗುಪ್ತಾ ಎಂಬುವವರನ್ನು ಬಂಧಿಸಲಾಗಿದೆ. ಶಂಶಾಕ್ ಹಾಗೂ ಶಿವಾಂಕ್ ಸಹೋದರರಾಗಿದ್ದು, ಮುಕೇಶ್ ಇವರಿಬ್ಬರ ತಂದೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ