
ನವದೆಹಲಿ(ಆ.03): ಜಗತ್‌ಪ್ರಸಿದ್ಧ ಉಡುಪಿ ಅಡುಗೆ ಮತ್ತೆ ದೇಶದ ರಾಜಧಾನಿ ನವದೆಹಲಿಯಲ್ಲಿ ಅದೂ ದೇಶದ ಶಕ್ತಿ ಕೇಂದ್ರ ಸಂಸತ್ತಿನಲ್ಲಿ ಘಮಘಮಿಸಿದೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಬಾಳೆ ಎಲೆಯಲ್ಲಿ ಬಡಿಸಿದ ಉಡುಪಿ ಸಾರು ಪತ್ರೊಡೆ, ಸುಕುರುಂಡೆ, ಹಲಸಿನ ಹಣ್ಣಿನ ಗಟ್ಟಿ, ತಿಮರೆ ಚಟ್ನಿ ಮೊದಲಾದವುಗಳು ಮತ್ತು ಅಡುಗೆ ಮತ್ತು ಆಂಧ್ರ ತಮಿಳುನಾಡಿನ ಕೆಲವು ಖಾದ್ಯಗಳನ್ನೊಳಗೊಂಡ ಈ ಶುಚಿ ರುಚಿಯಾದ ಭೋಜನವನ್ನು ಸವಿದು ಟ್ವೀಟ್ ಮಾಡಿರುವುದು ವಿಶೇಷವಾಗಿದೆ.
ಇಂದು(ಗುರುವಾರ) ಸಂಸತ್ ಭವನದ ಒಳಾಂಗಣದಲ್ಲಿ ನಡೆದ ಎನ್‌ಡಿಎ ಸಂಸದರ ಸಭೆಯ ನಂತರ ಏರ್ಪಡಿಸಲಾಗಿದ್ದ ಭೋಜನಕೂಟಕ್ಕೆ ಉಡುಪಿಯ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ಆಹ್ವಾನದ ಮೇರೆಗೆ ದೆಹಲಿಗೆ ತೆರಳಿ ಉಡುಪಿ ಅಡುಗೆಯನ್ನು ಸಿದ್ಧಪಡಿಸಿ ಮೋದಿ ಮತ್ತು ಎಲ್ಲ ನಾಯಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೈಕ್ ಕಂಡಲ್ಲಿ ಮಾತಾಡುವ ಮೋದಿ ಮಣಿಪುರ ಬಗ್ಗೆ ಮೌನ: ಉಗ್ರಪ್ಪ ಕಿಡಿ
ಭೋಜನ ಸಿದ್ಧಪಡಿಸಿದ ಬಳಿಕ ಸ್ವತಃ ಸುಬ್ರಹ್ಮಣ್ಯ ಅವರೇ ಮೋದಿ ಸೇರಿದಂತೆ ಎಲ್ಲರಿಗೂ ಊಟ ಬಡಿಸುವಲ್ಲೂ ಕೈ ಜೋಡಿಸಿ ಸಂತಸ ಪಟ್ಟಿದ್ದಾರೆ. ಸಚಿವರಾದ ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಸುಬ್ಬಣ್ಣನ ಅಡುಗೆಯ ಸವಿಯುಂಡು ಪ್ರಶಂಸಿದ್ದಾರೆ. ಸುವ್ರಹ್ಮಣ್ಯರ ಜೊತೆ ಸಹಾಯಕರಾಗಿರಾಜಶೇಖರ್ ತೆರಳಿದ್ದರು .
ಇತ್ತೀಚೆಗೆ ಸುಬ್ರಹ್ಮಣ್ಯ ಆಚಾರ್ಯರು ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲೂ ಉಡುಪಿ ಅಡುಗೆ ಸಿದ್ಧಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ