50ರ ಅಂಕಲ್‌ನ ಪ್ರೀತಿ ಫಜೀತಿ, ಡೇಟ್‌ಗೆ ಕರೆದೊಯ್ದು ಕಿಡ್ನಾಪ್ ಮಾಡಿ 3 ಲಕ್ಷ ರೂಗೆ ಬೇಡಿಕೆ ಇಟ್ಟ ಗೆಳತಿ!

By Chethan Kumar  |  First Published Nov 10, 2024, 3:08 PM IST

ಮಕ್ಕಳು, ಕುಟುಂಬ ಎಲ್ಲವೂ ಕೊರತೆಯಿಲ್ಲದೆ ಸಾಗುತ್ತಿತ್ತು. ಇದರ ನಡುವೆ 50ರ ಅಂಕಲ್‌ಗೆ ಪ್ರೀತಿಯೊಂದು ಶರುವಾಗಿದೆ. ಈ ಅಂಕಲ್‌ನ ಗೆಳತಿ ಡೇಟ್‌ಗೆ ಕರೆದಿದ್ದಾಳೆ. ಇಷ್ಟೇ ನೋಡಿ ಅಂಕಲ್ ಮನೆಗೆ ವಾಪಸ್ ಬಂದಿಲ್ಲ. ಪ್ರಿಯಕರನನ್ನೆ ಕಿಡ್ನಾಪ್ ಮಾಡಿ ಗೆಳತಿ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ವಿಚಿತ್ರ ಘಟನೆ ನಡೆದಿದೆ.


ಲಖನೌ(ನ.10)  ಪ್ರೀತಿ ಯಾವಾಗ, ಹೇಗೆ ಹುಟ್ಟುತ್ತೆ ಅನ್ನೋದು ಹೇಳೋಕೆ ಆಗಲ್ಲ. ಇದಕ್ಕೆ ಪ್ರೀತಿ ಕುರುಡು ಅಂತಾರೆ. ಆದರೆ ಇಷ್ಟೊಂದು ಕುರುಡಾದರೆ ಸಂಕಷ್ಟ ತಪ್ಪಿದ್ದಲ್ಲ. ಇಲ್ಲೊಬ್ಬ ಅಂಕಲ್‌ಗೆ 50ರ ಹರೆಯದಲ್ಲಿ ಪ್ರೀತಿ ಶುರುವಾಗಿದೆ. ಫೋನ್ ಮೂಲಕ ಶುರುವಾದ ಪ್ರೀತಿ ಗಾಢವಾಗಿದೆ. ಇದಕ್ಕಿದ್ದಂತೆ ಗೆಳತಿಯಿಂದ ಕರೆ ಬಂದಿದೆ. ಅದು ಕೂಡ ಡೇಟಿಂಗ್ ಆಫರ್. ರೋಗಿ ಬಯಸಿದ್ದು ಹಾಲು, ವೈದ್ಯರು ಹೇಳಿದ್ದೂ ಹಾಲು ಅನ್ನೋ ಹಾಗಾಗಿದೆ ನಮ್ಮ ಅಂಕಲ್ ಕತೆ. ಗೆಳತಿ ಕಾಲ್ ಬಂದಿದ್ದೆ ತಡ ಗೆಳತಿ ಹೇಳಿದ ಸ್ಥಳದಲ್ಲಿ 10-20 ನಿಮಿಷ ಮೊದಲೇ ತಲುಪಿದ್ದ ಅಂಕಲ್ ಬಳಿಕ ಪತ್ತೆ ಇಲ್ಲ. ಡೇಟ್‌ಗೆ ಬಂದ ಪ್ರಿಯಕರನನ್ನೇ ಗೆಳತಿ ಕಿಡ್ನಾಪ್ ಮಾಡಿದ್ದಾಳೆ. ಬಳಿಕ 3 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ ಘಟನೆ ಉತ್ತರ ಪ್ರದೇಶದ ಲಲಿತಪುರದಲ್ಲಿ ನಡೆದಿದೆ.

ಲಲಿತಪುರ ನಿವಾಸಿ ಲಲ್ಲು ಚೌಬೆಗೆ ಸಂಸಾರ, ಮಕ್ಕಳು ಎಲ್ಲವೂ ಇದೆ. ಸಂಸರಾ ಹೆಚ್ಚಿನ ಸಮಸ್ಸೆಗಳಿಲ್ಲದೆ ಸಾಗುತ್ತಿತ್ತು. ತನ್ನ ಕೆಲಸ, ಕುಟುಂಬ ನಿರ್ವಹಣೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಸಾಗಿತ್ತು. ಇದರ ನಡುವೆ ಲಲ್ಲು ಚೌಬೆಗೆ ಕರೆಯೊಂದು ಬಂದಿದೆ. ಅದು ಯುವತಿಯ ಧ್ವನಿ. ಈ ಧ್ವನಿಗೆ ಮಾರು ಹೋದ ಲಲ್ಲು ಚೌಬೆ, ಮತ್ತೆ ಮತ್ತೆ ಈ ಧ್ವನಿ ಕೇಳಿಸಬೇಕು ಎನಿಸಿದೆ. ಅತ್ತ ಯುವತಿ ರಾಂಗ್ ನಂಬರ್ ಎಂದು ಕರೆ ಮಾಡಿ ಬಳಿಕ ಡೈಲಿ ನಂಬರ್ ಆಗಿ ಬಗಲಾಗಿತ್ತು.

Tap to resize

Latest Videos

7 ವರ್ಷವಿದ್ದಾಗ ಕಿಡ್ನಾಪ್, 17 ವರ್ಷದ ಬಳಿಕ ವಕೀಲನಾಗಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿ!

50ರ ಹರೆಯದ ಅಂಕಲ್ ಲಲ್ಲುಗೆ ಯುವತಿ ಜೊತೆ ಪ್ರೀತ ಶುರುವಾಗಿದೆ. ಮನೆಯವರಿಗೆ ಗೊತ್ತಿಲ್ಲ. 50ರ ಹರೆಯದ ಲಲ್ಲು 18ರ ಹರೆಯದ ಹುಡುಗನಾಗಿದ್ದ. ಫೋನ್ ಹಿಡಿದು ಕುಂತರೆ ಲೋಕದ ಪರಿವೇ ಇರುತ್ತಿರಲಿಲ್ಲ. ಫೋನ್ ಮೂಲಕವೇ ಪ್ರೀತಿ ಗಾಢವಾಗಿತ್ತು. ಹೀಗೆ ಪ್ರೀತಿ ಶುರುವಾದ ಪ್ರೀತಿಯಲ್ಲಿ ಲಲ್ಲುಗೆ ಬಯಕೆಗಳು ಹೆಚ್ಚಾಗತೊಡಗಿತು. ಭೇಟಿಯಾಗಬೇಕು ಅನ್ನೋ ಆಸೆ ಹೆಚ್ಚಾಯಿತು. ಆಸೆ ಹೆಚ್ಚಾಗುತ್ತಿದ್ದಂತೆ ಅತ್ತ ಗೆಳತಿ ಕರೆ ಮಾಡಿ ಡೇಟಿಂಗ್ ಆಫರ್ ಇಟ್ಟಿದ್ದಾಳೆ.

ಭೇಟಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾಳೆ. ಅರೇ ಇದೇ ಕ್ಷಣಕ್ಕಾಗಿ ಕಾಯುತ್ತಿದ್ದ ಲಲ್ಲು ಚೌಬೆಗೆ ಇನ್ನೇನು ಬೇಕು ಹೇಳಿ? ನೀ ಕರೆಯೋದು ಹೆಚ್ಚಾ, ನಾ ಬರುವುದು ಹೆಚ್ಚಾ ಎಂದು ಈಗಲೇ ಬಂದು ಬಿಡುತ್ತೇನೆ ಎಂದಿದ್ದಾರೆ. ಎಲ್ಲಿ ಭೇಟಿ ಅನ್ನೋದನ್ನು ಯುವತಿ ಹೇಳಿದ್ದಾಳೆ. ಯುವತಿ ಹೇಳಿದ ಸಮಯಕ್ಕಿಂತ 10 ರಿಂದ 20 ನಿಮಿಷ ಮುಂಚಿತವಾಗಿ ಲಲ್ಲು ಚೌಬೆ ಸ್ಥಳಕ್ಕೆ ಆಗಮಿಸಿದ್ದಾರೆ. ತನ್ನ ಫೋನ್ ಗೆಳತಿಗೆ ಕಾಯುತ್ತಾ ನಿಂತಿದ್ದಾರೆ. ಇದರ ನಡುವೆ ಯುವತಿಯ ಒಂದೆರೆಡು ಕರೆ ಬಂದಿದೆ. ಇಷ್ಟೇ ನೋಡಿ, ಬಳಿಕ ಲಲ್ಲು ಚೌಬೆ ಫೋನ್ ಸ್ವಿಚ್ ಆಫ್. ಲಲ್ಲು ಚೌಬೆ ಎಲ್ಲಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲದಾಯಿತು.

ಮೂವರು ಸೇರಿ ಲಲ್ಲು ಚೌಬೆಯನ್ನು ಕಿಡ್ನಾಪ್ ಮಾಡಿ ಝಾನ್ಸಿಗೆ ಕರೆ ತಂದಿದ್ದರು. ಬಳಿಕ ಮರುದಿನ ಲಲ್ಲು ಚೌಬೆಯಿಂದ ನಂಬರ್ ಪಡೆದು ಪುತ್ರನಿಗೆ ಕಿಡ್ನಾಪರ್ಸ್ ಕರೆ ಮಾಡಿದ್ದಾರೆ. 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಲಲ್ಲು ಚೌಬೆ ಪುತ್ರ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಪೊಲೀಸ್ ಪೇದೆ ಲಲ್ಲು ಚೌಬೆ ಪುತ್ರನಾಗಿ ನಟಿಸಿ 1 ಲಕ್ಷ ರೂಪಾಯಿ ಹಿಡಿದು ಕಿಡ್ನಾಪರ್ಸ್ ಭೇಟಿಯಾಗಲು ಹೊರಟಿದ್ದಾರೆ. ಇತ್ತ ಪೊಲೀಸ್ ತಂಡವೂ ಹಿಂಬಾಲಿಸಿತು.

1 ಲಕ್ಷ ರೂಪಾಯಿಯನ್ನು ಪೊಲೀಸ್ ಪೇದೆ ಅಪಹರಣಕಾರರಿಗೆ ಪಾವತಿಸಿದ್ದಾರೆ. ಇನ್ನುಳಿದ 2 ಲಕ್ಷ ರೂಪಾಯಿ ತಂದೆಯನ್ನು ಬಿಡುಗಡೆ ಮಾಡಿ ನನ್ನ ಕೈಗೆ ಒಪ್ಪಿಸಿದ ಬಳಿಕ ಪಾವತಿಸುವುದಾಗಿ ಹೇಳಿದ್ದಾರೆ. ಹಣ ಎಣಿಸಿದ ಅಪಹರಣಕಾರರು ಮಗನಾಗಿ ನಟಿಸಿದ ಪೊಲೀಸ್ ಪೇದೆಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಪೇದೆಯನ್ನು ಇಡೀ ತಂಡ ಹಿಂಬಾಲಿಸಿದೆ. ಝಾನ್ಸಿ ಬಳಿ ಬಂದು ಲಲ್ಲು ಚೌಬೆಯನ್ನು ಕೂಡಿ ಹಾಕಿದ್ದ ಸಣ್ಣ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪೊಲೀಸರು ಏಕಾಏಕಿ ದಾಳಿ ಮಾಡಿ ಅಪಹರಣಕಾರರಾದ ಕಿರಣ್(35), ಅಖಿಲೇಶ್ ಅಹಿರ್ವಾರ್(30), ಸತೀಶ್ ಸಿಂಗ್ ಬುಂಡೇಲಾ(27) ಹಾಗೂ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಈ ನಾಲ್ವರಿಗೆ ಇದೇ ಕೆಲಸ, ಟಾರ್ಗೆಟ್ ಮಾಡಿ ಯುವತಿ ಮೂಲಕ ಕರೆ ಮಾಡಿಸಿ ಬಳಿಕ ಕಿಡ್ನಾಪ್ ಮಾಡುವುದು ಇವರ ಖಯಾಲಿಯಾಗಿದೆ. ಹಲವರಿಗೆ ಈ ರೀತಿ ಹಣ ವಸೂಲಿ ಮಾಡಿರುವುದು ಬೆಳೆಕಿಗೆ ಬಂದಿದೆ.

ಮಗಳನ್ನು ಓಡಿಸಿಕೊಂಡು ಹೋದ ಅಂತ ಹುಡುಗಿ ಕಡೆಯವರಿಂದ ಹುಡುಗನ ಅಮ್ಮನ ಕಿಡ್ನ್ಯಾಪ್
 

click me!