* ಇಸ್ಲಾಂ ಸ್ವೀಕರಿಸಿದ್ದ 18 ಜನ ಹಿಂದು ಧರ್ಮಕ್ಕೆ ವಾಪಸ್
* ಉತ್ತರ ಪ್ರದೇಶದ ದೇವಾಲಯದಲ್ಲಿ ಪೂಜೆ
* ಹದಿನೈದು ವರ್ಷಗಳ ಹಿಂದೆ ಇಸ್ಲಾಂ ಸ್ವೀಕಾರ ಮಾಡಿದ್ದರು
ನವದೆಹಲಿ ( ಆ. 10) ಉತ್ತರ ಪ್ರದೇಶದಲ್ಲಿ ಮೂರು ಕುಟುಂಬಗಳು ಹಿಂದು ಧರ್ಮಕ್ಕೆ ವಾಪಸ್ ಆಗಿದೆ. ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಸೋಮವಾರ ಮೂರು ಮುಸ್ಲಿಂ ಕುಟುಂಬಗಳು ಹಿಂದು ಧರ್ಮಕ್ಕೆ ಮರಳಿವೆ.
ಕಂಡ್ಲಾ ಪಟ್ಟಣದ ಸೂರಜ್ ಕುಂಡ್ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ಇಸ್ಲಾಂ ಸ್ವೀಕರಿಸಿದ್ದ 18 ಜನರು ಹಿಂದು ಧರ್ಮಕ್ಕೆ ವಾಪಸ್ ಆದರು. 7 ಮಹಿಳೆಯರು, 4 ಪುರುಷರು ಮತ್ತು 4 ಮಕ್ಕಳು ಸೇರಿ ಎಲ್ಲರೂ ತವರಿಗೆ ಮರಳಿದರು. 15 ವರ್ಷಗಳ ಹಿಂದೆ, ಈ ಜನರು ಒತ್ತಡದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎನ್ನಲಾಗಿದೆ.
ಹಬ್ಬಗಳ ಮಾಸ ಶ್ರಾವಣ ಮಾಸಕ್ಕೆ ಯಾಕೆ ಇಷ್ಟು ಮಹತ್ವ?
ಹಿಂದು ಧರ್ಮ ಸ್ವೀಕಾರ ಮಾಡಿದ ನಂತರ ಇಸ್ಲಾಂ ಮೂಲಕ ಇಟ್ಟುಕೊಂಡಿದ್ದ ಹೆಸರನ್ನು ಬದಲಾಯಿಸಿ ಹಿಂದು ಧರ್ಮದ ಹೆಸರು ಇಟ್ಟುಕೊಂಡರು. ದೇವಾಲಯದ ಅರ್ಚಕ ಯಶ್‌ವೀರ್ ಮಹಾರಾಜರು ಮಂತ್ರ ಬೋಧಿಸಿದರು.
ಕೆಲವು ಸಂದರ್ಭದಲ್ಲಿ ಗೊತ್ತಿಲ್ಲದೆ ತಪ್ಪು ಹೆಜ್ಜೆ ಇಟ್ಟುಬಿಡುತ್ತೇವೆ. ಗಾಯತ್ರಿ ಮಂತ್ರದಲ್ಲಿ ಜಗತ್ತನ್ನು ಗೆಲ್ಲುವ ಶಕ್ತಿ ಇದೆ. ಈಗ ಎಲ್ಲವೂ ಸರಿಯಾಗಿದ್ದು ಸನ್ಮಾರ್ಗದಲ್ಲಿ ಮುಂದೆ ಹೆಜ್ಜೆ ಇಡಬೇಕು ಎಂದು ಅರ್ಚಕರು ತಿಳಿಸಿದರು.
ಸನಾತನ ಧರ್ಮವನ್ನು ಮತ್ತೆ ಸ್ವೀಕಾರ ಮಾಡಿದ್ದು ಎಲ್ಲರಿಗೂ ಒಂದು ಸಂದೇಶ ನೀಡಿದ್ದೇವೆ. ಇನ್ನು ಮುಂದೆ ಈ ಬಗೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹಿಂದೂ ಧರ್ಮಕ್ಕೆ ವಾಪಸಾದವರೊಬ್ಬರು ತಿಳಿಸಿದರು.