ಶಿವಶ್ರೀ ತೇಜಸ್ವಿ ಸೂರ್ಯ ಸೇರಿದಂತೆ ರಾಜ್ಯದ 5 ಕಲಾವಿದರಿಗೆ 'ಉಸ್ತಾದ್‌ಬಿಸ್ಮಿಲ್ಲಾ ಖಾನ್‌' ಯುವ ಪುರಸ್ಕಾರ

Kannadaprabha News   | Kannada Prabha
Published : Jun 13, 2026, 10:14 AM IST
Ustad Bismillah Khan Youth Award to 5 artists from the state, including MP Tejaswi Surya's wife Shivashree

ಸಾರಾಂಶ

ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2024-25ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌, ಐವರು ಯುವ ಕಲಾವಿದರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು ಟಿ.ಎಸ್.ನಾಗಾಭರಣ ಸೇರಿದಂತೆ ಹಲವರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೊತೆಗೆ ಸಂಗೀತ ನೃತ್ಯ ಸೇರಿದಂತೆ ವಿವಿಧ ಕಲೆಯಲ್ಲಿ ಸೇವೆ ಸಲ್ಲಿಸುವ ಯುವ ಕಲಾವಿದರಿಗೆ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್(Ustad Bismillah Khan Youth Award) ಅವರ ಸ್ಮರಣಾರ್ಥ ನೀಡುವ ಪುರಸ್ಕಾರಕ್ಕೆ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌(Sivasri Skandaprasad) ಸೇರಿದಂತೆ ಕರ್ನಾಟಕ ಐವರು ಕಲಾವಿದರು ಆಯ್ಕೆಯಾಗಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಗಾಯನ ವಿಭಾಗದಲ್ಲಿ ರಂಜನಿ ವಾಸುಕಿ, ಸುಗಮ ಸಂಗೀತ ವಿಭಾಗದಲ್ಲಿ ಬೆಂಗಳೂರಿನ ಶಿವಶ್ರೀ ಸ್ಕಂದಾಪ್ರಸಾದ್‌, ಹಿಂದೂಸ್ತಾನಿ ಗಾಯನ ವಿಭಾಗದಲ್ಲಿ ಕಾರ್ಕಳದ ವಿದುಷಿ ಮಹಾಲಕ್ಷ್ಮಿ ಶೆಣೈ, ಮೃದಂಗ ವಾದನದಲ್ಲಿ ಬಿ.ಎಸ್‌.ಪ್ರಶಾಂತ್‌ ಮತ್ತು ನೃತ್ಯ ವಿಭಾಗದಲ್ಲಿ ಕೊಡಗಿನ ಮುಕ್ಕಾಟಿರ ಶಿಲ್ಪಾ ನಂಜಪ್ಪ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹಿರಿಯ ಕಲಾವಿದರಿಗೆ ರಾಷ್ಟ್ರೀಯ ಗೌರವ:

ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್‌ಗೆ ಖ್ಯಾತ ಮೃದಂಗ ವಿದ್ವಾಂಸ ಎ.ವಿ.ಆನಂದ್‌ ಆಯ್ಕೆಯಾಗಿದ್ದಾರೆ. ಹಿರಿಯ ಕಲಾವಿದರ ವಿಭಾಗದಲ್ಲಿ ಕಲಾಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ವಿದುಷಿ ಟಿ.ಎಸ್‌.ಸತ್ಯವತಿ, ಮೃದಂಗ ಕ್ಷೇತ್ರದಲ್ಲಿ ವಿದ್ವಾನ್‌ ಅನೂರ್‌ ಅನಂತಕೃಷ್ಣ ಶರ್ಮ, ರಂಗಭೂಮಿಯಲ್ಲಿ ಟಿ.ಎಸ್.ನಾಗಾಭರಣ, ನೃತ್ಯ ಕಲಾವಿದೆ ವೀಣಾಮೂರ್ತಿ, ವಿಜಯ್‌ ಸೇರಿದಂತೆ ಹಲವು ಗಣ್ಯರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾನೇ ಕಟ್ಟಿದ ಟಿಎಂಸಿ ಕೋಟೆಯಿಂದ ಮಮತಾ ಬ್ಯಾನರ್ಜಿಗೆ ಗೇಟ್‌ಪಾಸ್? 4000 ಇವಿಎಂ ಕಟ್ಟಡಕ್ಕೆ ಬೆಂಕಿ
ಬೆಂಗಳೂರಿನಲ್ಲಿನ ಪ್ರತಿಭಟನೆಗೆ ತಮಿಳಿಗರನ್ನು ಆಹ್ವಾನಿಸಿದ ಕಾಕ್ರೋಚ್ ಜನತಾ ಪಾರ್ಟಿ