ನಾಳೆ 37 ವಿದೇಶಗಳಲ್ಲಿ ‘The Kerala story’ ಬಿಡುಗಡೆ!

Published : May 11, 2023, 02:22 AM ISTUpdated : May 11, 2023, 10:57 AM IST
ನಾಳೆ 37 ವಿದೇಶಗಳಲ್ಲಿ ‘The Kerala story’ ಬಿಡುಗಡೆ!

ಸಾರಾಂಶ

ಐಸಿಸ್‌ ಉಗ್ರರ ಕಥಾಹಂದರದ ‘ದ ಕೇರಳ ಸ್ಟೋರಿ’ ಚಿತ್ರವು ಶುಕ್ರವಾರ 37 ವಿವಿಧ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ಶುಕ್ರವಾರ ಭಾರತಾದ್ಯಂತ ತೆರೆಕಂಡಿದ್ದ ಚಿತ್ರವು ಬಿಡುಗಡೆಯಾದ 6 ದಿನಗಳಲ್ಲಿ 56 ಕೋಟಿ ರು. ಗಳಿಕೆ ಮಾಡಿದೆ.

ನವದೆಹಲಿ ಮೇ.೧೧): ಐಸಿಸ್‌ ಉಗ್ರರ ಕಥಾಹಂದರದ ‘ದ ಕೇರಳ ಸ್ಟೋರಿ’ ಚಿತ್ರವು ಶುಕ್ರವಾರ 37 ವಿವಿಧ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ಶುಕ್ರವಾರ ಭಾರತಾದ್ಯಂತ ತೆರೆಕಂಡಿದ್ದ ಚಿತ್ರವು ಬಿಡುಗಡೆಯಾದ 6 ದಿನಗಳಲ್ಲಿ 56 ಕೋಟಿ ರು. ಗಳಿಕೆ ಮಾಡಿದೆ.

ಈ ಕುರಿತು ಟ್ವೀಟ್‌ ಮಡಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟಿ ಅದಾ ಶರ್ಮಾ(Adah Sharma) ‘ನಮ್ಮ ಸಿನಿಮಾ ವೀಕ್ಷಿಸಿ ಅದನ್ನು ಟ್ರೆಂಡ್‌ ಮಾಡುತ್ತಿರುವ ಹಾಗೂ ನನ್ನ ನಟನೆಯನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು. ಇದೇ 12ರಂದು ‘ದ ಕೇರಳ ಸ್ಟೋರಿ’ (The Kerala story) 37 ವಿವಿಧ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಚೆನ್ನೈ ಪೊಲೀಸರಿಂದ ಕೇರಳ ಸ್ಟೋರಿ ವಿಶೇಷ ಸ್ಕ್ರೀನಿಂಗ್‌ಗೆ ತಡೆ, ಸೆನ್ಸಾರ್‌ ಬೋರ್ಡ್‌ ಕಿಡಿ!

ನಿರ್ದೇಶಕ ಸುದೀಪ್ತೋ ಸೇನ್‌ ನಿರ್ದೇಶಿಸಿ ವಿಫುಲ್‌ ಶಾ ನಿರ್ಮಿಸಿರುವ ಚಿತ್ರವು ಕೇರಳದ 32,000 ಹಿಂದೂ ಯುವತಿಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಿಸಿ ಸಿರಿಯಾ, ಅಷ್ಘಾನಿಸ್ತಾನದಂತಹ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿ ಐಸಿಸ್‌ಗೆ ಸೇರಿಸಲಾಗಿದೆ. ಅವರನ್ನು ಆತ್ಮಾಹುತಿ ಬಾಂಬ್‌ ದಾಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಕಥಾ ಹೊಂದರವನ್ನು ಹೊಂದಿದೆ.

ಇದು ಭಾರತದಾದ್ಯಂತ ತೀವ್ರ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದ್ದು,(massive controversy ) ಈಗಾಗಲೇ ಕೆಲ ರಾಜ್ಯಗಳಲ್ಲಿ ಸಿನಿಮಾ ಬ್ಯಾನ್‌ ಮಾಡಲಾಗಿದ್ದು ಕೆಲವೆಡೆ ತೆರಿಗೆ ಮುಕ್ತವಾಗಿಸಲಾಗಿದೆ. 

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯದ ವಾಸನೆ: ವ್ಯಾಂಕೋವರ್‌ನಿಂದ ದೆಹಲಿಗೆ ವಿಮಾನ ಹಾರಿಸುವ ಮೊದಲು ಏರ್ ಇಂಡಿಯಾ ಪೈಲಟ್‌ನ ಬಂಧನ
ಬಡವನಿರಬಹುದು ಆದರೆ ಬಿಕಾರಿ ಅಲ್ಲ: ಸ್ವಾಭಿಮಾನಿ ವೃದ್ಧನ ವೀಡಿಯೋ ಭಾರಿ ವೈರಲ್