ಕಮಲಾ ಹ್ಯಾರಿಸ್‌ನ್ನು ಫಸ್ಟ್‌ಲೇಡಿ ಎಂದು ಕರೆದ ಅಮೆರಿಕ ಅಧ್ಯಕ್ಷ: ವಿಡಿಯೋ ವೈರಲ್‌

By Suvarna NewsFirst Published Mar 19, 2022, 6:48 PM IST
Highlights
  • ಅಮೆರಿಕಾ ಅಧ್ಯಕ್ಷ ಬಾಯ್ತಪ್ಪಿ ಆಡಿದ ಮಾತು ವೈರಲ್
  • ಕಮಲಾ ಹ್ಯಾರಿಸ್‌ನ್ನು ಫಸ್ಟ್‌ಲೇಡಿ ಎಂದು ಕರೆದ ಅಮೆರಿಕ ಅಧ್ಯಕ್ಷ
  • ಅಧ್ಯಕ್ಷರ ಪತ್ನಿ ಫಸ್ಟ್‌ಲೇಡಿ ಆಗಿರುತ್ತಾರೆ
     

ನ್ಯೂಯಾರ್ಕ್‌(ಮಾ.19): ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಫಸ್ಟ್ ಲೇಡಿ ಎಂದು ಕರೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೋ ಬೈಡೆನ್‌ ಅವರು ಬಾಯ್ತಪ್ಪಿ ಕಮಲಾ ಹ್ಯಾರಿಸ್ ಅವರನ್ನು ಫಸ್ಟ್ ಲೇಡಿ ಎಂದಿದ್ದು, ಈ ತಮಾಷೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವಾಸ್ತವವಾಗಿ ಜೊ ಬೈಡೆನ್‌ ಅವರ ಪತ್ನಿ ಪ್ರಥಮ ಪ್ರಜೆ ಅಥವಾ ಫಸ್ಟ್ ಲೇಡಿ ಆಗಿರುತ್ತಾರೆ. (ಯಾರೂ ಅಮೆರಿಕಾ ಅಧ್ಯಕ್ಷರಾಗಿರುತ್ತಾರೋ ಅವರ ಪತ್ನಿ ಫಸ್ಟ್ ಲೇಡಿ ಆಗಿರುತ್ತಾರೆ)

ಜೋ ಬೈಡನ್ (Joe Biden) ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು 'ಪ್ರಥಮ ಮಹಿಳೆ' ಎಂದು ಬಾಯ್ತಪ್ಪಿ ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿರುವ ಪ್ರೇಕ್ಷಕರು ಜೋರಾಗಿ ನಗಲು ಶುರು ಮಾಡಿದರು. ಬೈಡೆನ್ ಶ್ವೇತಭವನದಲ್ಲಿ (White House) ಸಮಾನ ವೇತನ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಾರ್ಯಕ್ರಮಕ್ಕೆ ಏಕೆ ಹಾಜರಾಗಲಿಲ್ಲ ಎಂಬುದನ್ನು ವಿವರಿಸಲು ಆರಂಭಿಸಿದರು.

Kamala Harris Untold Story: ಕಮಲಾ ಹ್ಯಾರಿಸ್ ಅಸಾಧಾರಣ ಸಾಧನೆ ಚಿತ್ರಣ!

ಈ ವೇಳೆ ಅವರು ವೇದಿಕೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಏಕೆಂದರೆ ಪ್ರಥಮ ಮಹಿಳೆ ಅಥವಾ ಫಸ್ಟ್ ಲೇಡಿ ಅವರ ಪತಿಗೆ ಕೋವಿಡ್ ಆಗಿದೆ ಎಂದರು. ವಾಸ್ತವವಾಗಿ ಫಸ್ಟ್‌ಲೇಡಿ ಪತಿ ಎಂದರೆ ಅದು ಸ್ವತಃ ಜೋ ಬೈಡೆನ್ ಅವರೇ ಆಗುತ್ತಾರೆ. ಇತ್ತ ಜೋ ಬೈಡೆನ್ ಹೀಗೆ ಹೇಳುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿ ಗೊಳ್ಳೆಂದು ನಗಲು ಶುರು ಮಾಡಿದೆ. ಕೂಡಲೇ ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡ ಜೋ ಬೈಡೆನ್‌ ಅವರು ಚೆನ್ನಾಗಿದ್ದಾರೆ, ಸೆಕೆಂಡ್ ಲೇಡಿಯ ಫಸ್ಟ್ ಜಂಟಲ್‌ಮ್ಯಾನ್ ಎಂದು ನಗುತ್ತಾ ಹೇಳಿದರು.

ಬಿಡೆನ್ ಅವರು ಬಾಯ್ತಪ್ಪಿ ಆಡಿದ ಮಾತು ನಗು ಉಕ್ಕಿಸುತ್ತಿದ್ದು, ಈ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು  330 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಬಿಡೆನ್: 'ಪ್ರಥಮ ಮಹಿಳೆಯ ಪತಿಗೆ ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದಾರೆ' ಅದು ಸ್ವತಃ ಬೈಡೆನ್‌ ಆಗಿದ್ದಾರೆ. ನೀವು ಇದನ್ನು ಸರಿದೂಗಿಸಲು ಸಾಧ್ಯವಿಲ್ಲ' ಎಂದು ಬೆನ್ನಿ ಎಂಬುವವರು ಟ್ವೀಟ್ ಮಾಡಿದ್ದಾರೆ. 

BIDEN: “The First Lady's husband has tested positive for COVID”

That would be him.

You can’t make this up.

pic.twitter.com/Yzb3sA9ueb

— Benny (@bennyjohnson)

 

ಇತ್ತ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರ ಪತಿ ಡೌಗ್ ಎಂಹಾಫ್ (Doug Emhoff) ಈ ವಾರದ ಆರಂಭದಲ್ಲಿ ಕೋವಿಡ್ ಪಾಸಿಟಿವ್‌ ಆಗಿತ್ತು. ಡೌಗ್ ಎಂಹಾಫ್ ಅವರು ಈಗ ಆರೋಗ್ಯವಾಗಿದ್ದು, ಲಸಿಕೆ ಹಾಕಿಸಿಕೊಂಡಿರುವುದಕ್ಕೆ ಧನ್ಯವಾದಗಳು. ಅಲ್ಲದೇ ನನಗೆ ಕೋವಿಡ್ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿದ್ದು, ಮತ್ತೆ ಪರೀಕ್ಷೆಗೆ ಒಳಗಾಗಲಿದ್ದೇನೆ. ಹಾಗೆಯೇ ಎಲ್ಲರೂ ಲಸಿಕೆ ಪಡೆದುಕೊಳ್ಳಿ ಹಾಗೂ ಈ ಮೊದಲೇ ಲಸಿಕೆ ಪಡೆದುಕೊಂಡಲಿ ಆರೋಗ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸಿ ಎಂದು ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟ್ವಿಟ್ ಮಾಡಿ ಹೇಳಿಕೊಂಡಿದ್ದರು. 

US President; ಕಮಲಾ ಹ್ಯಾರಿಸ್‌ಗೆ ಅಧಿಕಾರ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!
 

ಭಾರತೀಯ ಮೂಲದ ಕಮಲಾ ಹ್ಯಾರಿಸ್ ಹೆಸರಿನೊಂದಿಗೆ ಹಲವು ಮೊದಲುಗಳು ಸೇರಿಕೊಂಡಿವೆ. 2010ರಲ್ಲಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ -ಅಮೆರಿಕನ್ ಮಹಿಳೆ. 2016ರಲ್ಲಿ ಯುಎಸ್ ಸೆನೆಟ್‌ಗೆ ಆಯ್ಕೆಯಾದ ಇಂಡೋ-ಅಮೆರಿಕನ್ ಮಹಿಳೆ. ಉಪಾಧ್ಯಕ್ಷ ಹುದ್ದೆಗೇರಿದ ಹೋವರ್ಡ್ ವಿಶ್ವವಿದ್ಯಾನಿಲಯ (ಕಪ್ಪು ವರ್ಣೀಯರ ವಿವಿ)ದ ಮೊದಲ ಪದವೀಧರೆ. ಅಮೆರಿಕದಲ್ಲಿ ಉಪಾಧ್ಯಕ್ಷೆಯಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಸಹ ಕಮಲಾರದ್ದು. ಫೋರ್ಬ್-2021ರ Ranking ಪಟ್ಟಿಯಲ್ಲಿ ಎರಡನೇ ಅತ್ಯಂತ ಶಕ್ತಿಶಾಲಿ ಮಹಿಳೆಯಾಗಿ ಹೊರಹೊಮ್ಮಿದ್ದು ಕಡಿಮೆ ಸಾಧನೆಯಲ್ಲ.
 

click me!