ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಅವರ ರಿಯಲ್ ಎಸ್ಟೇಟ್ ಕಂಪನಿ ಭಾರತದಲ್ಲಿ ತನ್ನ ಉದ್ದಿಮೆಯನ್ನು ಭಾರಿ ಪ್ರಮಾಣದಲ್ಲಿ ವಿಸ್ತರಣೆ ಮಾಡಲು ಮುಂದಾಗಿದೆ. ಅದರ ಭಾಗವಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಗೂ ಲಗ್ಗೆ ಇಡಲು ಸಜ್ಜಾಗುತ್ತಿದೆ.
ಮುಂಬೈ (ನ.11): ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಅವರ ರಿಯಲ್ ಎಸ್ಟೇಟ್ ಕಂಪನಿ ಭಾರತದಲ್ಲಿ ತನ್ನ ಉದ್ದಿಮೆಯನ್ನು ಭಾರಿ ಪ್ರಮಾಣದಲ್ಲಿ ವಿಸ್ತರಣೆ ಮಾಡಲು ಮುಂದಾಗಿದೆ. ಅದರ ಭಾಗವಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಗೂ ಲಗ್ಗೆ ಇಡಲು ಸಜ್ಜಾಗುತ್ತಿದೆ.
ಟ್ರಂಪ್ ಆರ್ಗನೈಸೇಷನ್‌ಗೆ ಭಾರತದಲ್ಲಿ ಅನುಮತಿ ಪಡೆದ ಪಾಲುದಾರನಾಗಿರುವ ಟ್ರಿಬೆಕಾ ಡೆವಲಪರ್ಸ್ ಕಂಪನಿಯು ಆರು ಹೊಸ ಯೋಜನೆಗಳನ್ನು ಅಂತಿಮಗೊಳಿಸಿದೆ. ಅದರಲ್ಲಿ ಬೆಂಗಳೂರು, ಪುಣೆ, ಗುರುಗ್ರಾಮ, ನೋಯ್ಡಾ, ಮುಂಬೈ ಹಾಗೂ ಹೈದರಾಬಾದ್ ಇವೆ. ಅಮೆರಿಕದ ಟ್ರಂಪ್ ಬ್ರ್ಯಾಂಡ್‌ನಡಿ 8 ದಶಲಕ್ಷ ಚದರಡಿ ರಿಯಲ್ ಎಸ್ಟೇಟ್ ಅಭಿವೃದ್ಧಿಪಡಿಸುವ ಉದ್ದೇಶವನ್ನು ಕಂಪನಿ ಹೊಂದಿದೆ. ಇದರಿಂದ ಸುಮಾರು 15 ಸಾವಿರ ಕೋಟಿ ರು. ಮಾರಾಟ ಆದಾಯ ಬರುವ ನಿರೀಕ್ಷೆ ಇದೆ.
ಅಘಾಡಿಯಿಂದ ಸ್ತ್ರೀಯರಿಗೆ ₹3000, ಫ್ರೀ ಬಸ್ ಪ್ರಯಾಣ: ಪ್ರಣಾಳಿಕೆ ಬಿಡುಗಡೆ
ಅಮೆರಿಕದಿಂದ ಹೊರಗೆ ಟ್ರಂಪ್ ಬ್ರ್ಯಾಂಡ್ ಭಾರತದಲ್ಲೇ ಅತಿ ಹೆಚ್ಚು ಯೋಜನೆಗಳನ್ನು ಹೊಂದಿದೆ. ಪುಣೆ, ಮುಂಬೈ ಹಾಗೂ ಗುರುಗ್ರಾಮದಲ್ಲಿ ಅದರ ನಾಲ್ಕು ಯೋಜನೆಗಳು ಇವೆ. ಇವುಗಳ ವಿಸ್ತೀರ್ಣ 3 ದಶಲಕ್ಷ ಚದರ ಅಡಿಯಷ್ಟಿದೆ. ಇದೀಗ ಬೆಂಗಳೂರು, ನೋಯ್ಡಾ ಹಾಗೂ ಹೈದರಾಬಾದ್ ಮಾರುಕಟ್ಟೆಗೆ ಆ ಕಂಪನಿ ಪ್ರವೇಶ ಪಡೆಯುತ್ತಿದೆ. ಪುಣೆ, ಮುಂಬೈ ಹಾಗೂ ಗುರುಗ್ರಾಮದಲ್ಲಿ ಮತ್ತೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಟ್ರಿಬೆಕಾ ಡೆವಲಪರ್ಸ್ ಕಂಪನಿಯ ಸಂಸ್ಥಾಪಕ ಕಲ್ಪೇಶ್ ಮೆಹ್ತಾ ಅವರು ತಿಳಿಸಿದ್ದಾರೆ.