ನವದೆಹಲಿ[ಫೆ.19]: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24, 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಅಹಮದಾಬಾದ್, ಆಗ್ರಾ ಹಾಗೂ ದಿಲ್ಲಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಇದರ ಸಂಭಾವ್ಯ ವೇಳಾಪಟ್ಟಿಮಾಧ್ಯಮಗಳಿಗೆ ಲಭ್ಯವಾಗಿದೆ.
ಸಂಭಾವ್ಯ ಕಾರ್ಯಕ್ರಮ ಪಟ್ಟಿ ಹೀಗಿದೆ:
ಫೆಬ್ರವರಿ 24
- ಮಧ್ಯಾಹ್ನ 12ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಪತ್ನಿ ಸಮೇತ ಟ್ರಂಪ್ ಆಗಮನ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವಾಗತ, ಅಲ್ಲಿ ಅವರಿಗೆ ಗೌರವ ವಂದನೆ ಸಲ್ಲಿಕೆ
- ಅಲ್ಲಿಂದ ಟ್ರಂಪ್, ಮೋದಿ ಅವರು ಕಾರಿನಲ್ಲಿ ಸಾಬರಮತಿ ಆಶ್ರಮಕ್ಕೆ ಹಾಗೂ ನದಿ ತೀರಕ್ಕೆ. 20 ನಿಮಿಷದ ಭೇಟಿ
- ಮಧ್ಯಾಹ್ನ 1.15ಕ್ಕೆ ಮೊಟೇರಾ ಸ್ಟೇಡಿಯಂಗೆ ಆಗಮನ, ‘ನಮಸ್ತೇ ಟ್ರಂಪ್’ ಸಮಾವೇಶದಲ್ಲಿ ಭಾಷಣ
- ಮಧ್ಯಾಹ್ನ 3.30ಕ್ಕೆ ಆಗ್ರಾಗೆ ಪಯಣ
- ಸಂಜೆ 4.30ಕ್ಕೆ ಆಗ್ರಾಗೆ ಆಗಮನ, ಯೋಗಿ ಆದಿತ್ಯನಾಥ್ ಅವರಿಂದ ಸ್ವಾಗತ, ತಾಜ್‌ಮಹಲ್‌ಗೆ ಭೇಟಿ
- ಸಂಜೆ 5.30ಕ್ಕೆ ದಿಲ್ಲಿಗೆ ನಿರ್ಗಮನ
- ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಟ್ರಂಪ್‌ಗೆ ಔತಣ
ಫೆಬ್ರವರಿ 25
- ಬೆಳಗ್ಗೆ 9 ಗಂಟೆಗೆ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಟ್ರಂಪ್‌ಗೆ ಸ್ವಾಗತ, ಬಳಿಕ ರಾಜಘಾಟ್‌ಗೆ ಭೇಟಿ
- ನಂತರ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ, ಮಧ್ಯಾಹ್ನದ ಭೋಜನ
- ತಾಜ್/ಮೌರ್ಯ ಹೋಟೆಲ್‌ನಲ್ಲಿ ಔದ್ಯಮಿಕ ಸಭೆಯಲ್ಲಿ ಭಾಗಿ
- ರಾಷ್ಟ್ರಪತಿ ಭವನದಲ್ಲಿ ಸಂಜೆ ಔತಣಕೂಟ
- ರಾತ್ರಿ 10ಕ್ಕೆ ದಿಲ್ಲಿಯಿಂದ ನಿರ್ಗಮನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ