ಮುಂಬೈ ಪೊಲೀಸರಿಗೇ ಚಳ್ಳೇಹಣ್ಣು ತಿನ್ನಿಸಿದ್ದ ದುಬೈಗೆ ಹಾರಿದ್ದ ಅಬು ಸಲೇಂ| 1993ರ ತನಿಖೆ ರೋಚಕತೆ ಬಗ್ಗೆ ಆತ್ಮಚರಿತ್ರೆಯಲ್ಲಿ ರಾಕೇಶ್ ಮೆಲುಕು
ಮುಂಬೈ[ಫೆ.19]: 1993ರ ಮುಂಬೈ ಸರಣಿ ಸ್ಫೋಟ ಹಾಗೂ ನಟ ಸಂಜಯ್ ದತ್ ನಿವಾಸದಲ್ಲಿ ಪತ್ತೆಯಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಪ್ರಕರಣದ ಕಿಂಗ್‌ಪಿನ್ ಅಬು ಸಲೇಂ ತನ್ನನ್ನೇ ಹೇಗೆ ವಂಚಿಸಿ ದುಬೈಗೆ ಪರಾರಿಯಾಗಿದ್ದ ಎಂಬ ವಿಚಾರವನ್ನು ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಆತ್ಮಚರಿತ್ರೆಯಲ್ಲಿ ನೆನಪಿಸಿಕೊಂಡಿದ್ದಾರೆ.
‘ನಟ ದತ್ ಮನೆಗೆ ಶಸ್ತ್ರಾಸ್ತ್ರ ಬಂದಿವೆ ಎಂಬ ಮಾಹಿತಿ ಸಿಕ್ಕಿತ್ತು. ಇದರ ವಿಚಾರಣೆ ಆರಂಭಿಸಿದ ಹೊತ್ತಿನಲ್ಲೇ ಶಸ್ತ್ರಾಸ್ತ್ರ ಇಳಿಸಿಕೊಂಡು ಅದನ್ನು ದತ್ ಮನೆಗೆ ತಲುಪಿಸಿದ್ದು ಝೈಬುನ್ನಿಸಾ ಖ್ವಾಜಿ ಎಂಬ ಮಾಹಿತಿ ಬಂದಿತ್ತು. ಈ ಬಗ್ಗೆ ಆಕೆಯನ್ನು ಕರೆಸಿ ವಿಚಾರಿಸಿದಾಗ, ಪ್ರಕರಣಕ್ಕೂ ತನಗೂ ಯಾವುದೇ ನಂಟಿಲ್ಲ. ತಾನು ಜೀವನದಲ್ಲಿ ಏನೇನೆಲ್ಲಾ ನೋವು ಅನುಭವಿಸಿದ್ದೇನೆ ಎಂದು ಆಕೆ ನನ್ನ ಮುಂದೆ ಗೋಳಿಟ್ಟುಕೊಂಡಿದ್ದಳು. ಅದನ್ನು ನೋಡಿ ನನಗೂ ಮನಸ್ಸು ಕರಗಿ ಆಕೆಯನ್ನು ಕಳುಹಿಸಿದ್ದೆ. ಮುಂದೆ ಮನ್ಜೂರ್ ಅಹಮದ್ ಎಂಬಾತನನ್ನು ಕರೆಸಿ ವಿಚಾರಣೆ ನಡೆಸಿದ ವೇಳೆ ಆತ, ಝೈಬುನ್ನಿಸಾ ನೀವು ಅಂದುಕೊಂಡ ಹಾಗಿಲ್ಲ. ಆಕೆಗೆ ಬಹಳ ಮಾಹಿತಿ ಗೊತ್ತು ಎಂದಿದ್ದ’
undefined
ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!
‘ಹೀಗಾಗಿ ಮತ್ತೆ ಆಕೆಯನ್ನು ಕರೆಸಿ ವಿಚಾರಣೆ ಕಪಾಳಕ್ಕೆ ಬಿಗಿಯುತ್ತಲೇ, ಆಕೆ ದತ್ ಮನೆಗೆ ಶಸ್ತ್ರಾಸ್ತ್ರ ಪೂರೈಸಿದ್ದು ಒಪ್ಪಿಕೊಂಡಿದ್ದಳು. ಜೊತೆಗೆ ಇಡೀ ಪ್ರಕರಣದ ಕಿಂಗ್‌ಪಿನ್ ಅಬುಸಲೇಂ ಎಂದು ಬಾಯಿಬಿಟ್ಟಿದ್ದಳು. ಆದರೆ ಆಕೆಯ ಹೇಳಿಕೆ ಆಧರಿಸಿ ಅಬು ಸಲೇಂ ಬೇಟೆಯಾಡುವಷ್ಟರಲ್ಲಿ ಆತ ಪರಾರಿಯಾಗಿದ್ದ. ಏಕೆಂದರೆ ಮೊದಲ ಹಂತದ ವಿಚಾರಣೆಗೆ ಬಂದು ಹೋಗುತ್ತಲೇ ಝೈಬುನ್ನೀಸ್ ಆ ವಿಚಾರವನ್ನು ಅಬುಗೆ ತಿಳಿಸಿದ್ದಳು. ಹೀಗಾಗಿ ಆತ ಮುಂಬೈನಿಂದ ದೆಹಲಿಗೆ ತೆರಳಿ, ಅಲ್ಲಿಂದ ನೇಪಾಳ ಮಾರ್ಗವಾಗಿ ದುಬೈಗೆ ಪರಾರಿಯಾದ’ ಎಂದು ರಾಕೇಶ್ ಮಾರಿಯಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
ಫೆಬ್ರವರಿ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ