ಭಾರತದ ನೌಕಾದಳಕ್ಕೆ F-18 ಫೈಟರ್ಸ್ ಜೆಟ್ ನೀಡಲು ಮುಂದಾದ ಅಮೆರಿಕ

By Suvarna NewsFirst Published Oct 28, 2020, 2:52 PM IST
Highlights

F-18 ಫೈಟರ್ ಜೆಟ್ ಹಾಗೂ ಕಾಂಬೇಟ್ ಜೆಟ್ ಒದಗಿಸಲು ಮುಂದಾದ ಅಮೆರಿಕ | ಖರೀದಿ ಬಗ್ಗೆ ಭಾರತ ಆಸಕ್ತಿ

ನವದೆಹಲಿ(ಅ.28): ಭಾರತದ ಜೊತೆಗಿನ ಸಂಬಂಧ ಮತ್ತಷ್ಟು ಆಪ್ತವಾಗಿಸುವ ನಿಟ್ಟಿನಲ್ಲಿ ಮುಂದುವರಿಯುತ್ತಿರುವ ಅಮೆರಿಕ ಭಾರತದ ನೌಕಾ ದಳಕ್ಕೆ ನೆರವಾಗಲು ಮುಂದಾಗಿದೆ. F-18 ಫೈಟರ್ ಜೆಟ್ ಹಾಗೂ ಕಾಂಬೇಟ್ ಜೆಟ್ ಒದಗಿಸಲು ಮುಂದಾಗಿದೆ.

ಕೆಲವು ವರ್ಷಗಳ ಹಿಂದೆ ಭಾರತದ ನೌಕಾಪಡೆಯು ತನ್ನ ನೌಕೆಗಳಿಂದ ಕಾರ್ಯಾಚರಣೆಗಾಗಿ 57 ನೌಕಾ ಯುದ್ಧ ವಿಮಾನಗಳನ್ನುಖರೀದಿಸುವ ಬಗ್ಗೆ ಆಸಕ್ತಿ ತೋರಿಸಿತ್ತು. ಪ್ರಸ್ತುತ ಐಎನ್ಎಸ್ ವಿಕ್ರಮಾದಿತ್ಯ ಮತ್ತು ನಿರ್ಮಾಣ ಹಂತದಲ್ಲಿರುವ ಸ್ಥಳೀಯ ವಿಮಾನವಾಹಕ ನೌಕೆ ಸೇರಿದಂತೆ ಇನ್ನಷ್ಟು ಫೈಟರ್ ಜೆಟ್ ಹೊಂದುವ ಆಸಕ್ತಿ ತೋರಿಸಿತ್ತು.

Fact Check: ಬಿಹಾರದಲ್ಲಿ ಪ್ರಚಾರದ ವೇಳೆ ಗೋ ಬ್ಯಾಕ್‌ ಮೋದಿ ಘೋಷಣೆ!

ಉಭಯ ರಾಷ್ಟ್ರಗಳ ರಕ್ಷಣಾ ಮುಖ್ಯಸ್ಥರ 2+2 ಸಭೆಯಲ್ಲಿ ಅಮೆರಿಕ ಈಗ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. ಅಮೆರಿಕ ಸರ್ಕಾರ ತಮ್ಮ ಫೈಟರ್ ಜೆಟ್ ನೀಡಲು ಮುಂದಾಗಿದೆ. 

ಎಫ್‌-18 ಫೈಟರ್ ಜೆಟ್ ಜೊತೆ, ಇನ್ನೂ ಹೆಸರಿಡದ ಸಮುದ್ರ ರಕ್ಷಕ ಏರ್‌ಕ್ರಾಫ್ಟ್ ಮಾರಾಟಕ್ಕೆ ಸಿದ್ಧವಾಗಿದೆ ಅಮೆರಿಕ. ಅಮರಿಕ ನೀಡಲು ಪ್ರಸ್ತಾಪ ಮಾಡಿರುವ ಫೈಟರ್ ಜೆಟ್‌ಗಳು ಆಧುನಿಕವಾಗಿದೆ ಎಂದು ಹೇಳಲಾಗಿದೆ. 

click me!