
ಪಾಟ್ನಾ(ಅ.28): ಬಿಹಾರದಲ್ಲಿ 71 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆದರೀಗ ಅದಕ್ಕೂ ಮುನ್ನ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಮಾಡಿ, ಬಿಹಾರ ಜನರ ಬಳಿ ಮತ ನಿಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಾದ ಬಳಿಕ ಬಿಜೆಪಿ ಅವರ ವಿರುದ್ಧ ಕಿಡಿ ಕಾರಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರಿದೆ.
'ಈ ಬಾರಿ ನ್ಯಾಯ, ಉದ್ಯೋಗ, ರೈತರು ಹಾಗೂ ಕಾರ್ಮಿಕರಿಗೆ. ನಿಮ್ಮ ಮತ ಕೇವಲ ಮಹಾ ಘಟಬಂಧನಕ್ಕೆ ನೀಡಿ. ಬಿಹಾರದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸುವ ನಿಮಗೆಲ್ಲರಿಗೂ ಶುಭವಾಗಲಿ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಬಿಜೆಪಿಯು ರಾಹುಲ್ ಗಾಂಧಿ ಮಾಡಿದ ಈ ದೂರಿನ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ. ಮತದಾನದ ವೇಳೆ ಪಕ್ಷವೊಂದಕ್ಕೆ ಮತ ಹಾಕಿ ಎನ್ನುವುದು ಚುನಾವಣಾ ಸಂಹಿತೆಯನ್ನು ಉಲ್ಲಂಘಿಸಿದಂತೆ.
71 ಕ್ಷೇತ್ರಗಳಲ್ಲಿ ಮತದಾನ
ಬಿಹಾರದಲ್ಲಿ ಅಕ್ಟೋಬರ್ 28ರಂದು 16 ಜಿಲ್ಲೆಗಳ 11 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಒಂದು ಸಾವಿರದ 66 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇವರಲ್ಲಿ 952 ಮಂದಿ ಪುರುಷರು ಹಾಗೂ 114 ಮಂದಿ ಮಹಿಳೆಯರು. ಎರಡನೇ ಹಂತದ ಮತದಾನ ನವೆಂಬರ್ 3 ಹಾಗೂ ನವೆಂಬರ್ 7 ರಂದು ನಡೆಯಲಿದೆ. ಫಲಿತಾಂಶ 10 ನವೆಂಬರ್‌ನಂದು ಹೊರ ಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ