ವಿಶ್ವಾಸಾರ್ಹ ವ್ಯವಹಾರಕ್ಕೆ ಎಲ್ಲರ ಆಯ್ಕೆ ಭಾರತ; ಅಮೆರಿಕ ಉದ್ಯಮಕ್ಕೆ ಮೋದಿ ಸ್ವಾಗತ!

By Suvarna NewsFirst Published Sep 4, 2020, 3:11 PM IST
Highlights

ಉದ್ಯಮಗಳ ಯಶಸ್ಸಿನಲ್ಲಿ ನಂಬಿಕೆ ಕೂಡ ಪ್ರಮುಖವಾಗಿದೆ. ಈಗ ಬಹುತೇಕ ರಾಷ್ಟ್ರಗಳು ಉದ್ಯಮ ವಿಸ್ತರಿಸಲು ಆಯ್ಕೆ ಮಾಡುವ ಮೊದಲ ಸ್ಥಳ ಭಾರತ. ವಿಶ್ವಾಸಾರ್ಹ ವ್ಯವಹಾರಕ್ಕೆ ಹೆಸರುವಾಸಿಯಾಗಿರುವ ಭಾರತ ಇದೀಗ ಅಮೆರಿಕ ಉದ್ಯಮಗಳಿಗೆ ಸ್ವಾಗತ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತ-ಅಮೆರಿಕಾ ಸ್ಟ್ರಾಟೆಜಿಕ್ ಪಾರ್ಟ್ನರ್‌ಶಿಪ್ ಫೊರಂನಲ್ಲಿ ಪ್ರಧಾನಿ ಮೋದಿ ಮಾತುಗಳ ವಿವರ ಇಲ್ಲಿದೆ.

ನವದೆಹಲಿ(ಸೆ.04): ಕೊರೋನಾ ನಡುವೆ ಭಾರತ ಹಲವು ವಿದೇಶಿ ಉದ್ಯಮಗಳನ್ನು ಭಾರತಕ್ಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಗೂಗಲ್, ಅಮೇಜಾನ್ ಸೇರಿದಂತೆ ಹಲವು ಕಂಪನಿಗಳು ಭಾರತದಲ್ಲಿ ಶಾಖೆ ಆರಂಭಿಸುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಭಾರತ-ಅಮೆರಿಕಾ ಸ್ಟ್ರಾಟೆಜಿಕ್ ಪಾರ್ಟ್ನರ್‌ಶಿಪ್ ಫೊರಂನಲ್ಲಿ ಅಮೆರಿಕ ಉದ್ಯಮಗಳನ್ನು ಭಾರತಕ್ಕೆ ಅಹ್ವಾನಿಸಿದ್ದಾರೆ. ಭಾರತ ವಿಶ್ವಾಸಾರ್ಹ ಆರ್ಥಿಕ ಪಾಲುದಾರ ಎಂದಿರುವ ಮೋದಿ, ಹೊಸ ಜಗತ್ತು ನಿರ್ಮಿಸಲು ಕೈಜೋಡಿಸಿ ಎಂದಿದ್ದಾರೆ.

ಲಿಂಗಸುಗೂರು: ಪಬ್‌ಜಿ ಗೇಮ್‌ ಬ್ಯಾನ್‌, ರೈತರಿಂದ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಪೂಜೆ

ಕೊರೋನಾ ವೈರಸ್‌ ವಕ್ಕರಿಸಿದ ಬಳಿಕ ವಿಶ್ವದ ಆರ್ಥಿಕ ವ್ಯವಹಾರ, ಪೂರೈಕೆಗಳಿಗೆ ಬೆಲೆಯೊಂದೇ ಕಾರಣವಾಗುದಿಲ್ಲ, ಜೊತೆಗೆ ನಂಬಿಕೆ ಕೂಡ ಕಾರಣವಾಗುತ್ತದೆ. ಹೀಗಾಗಿ ಹಲವು ಕಂಪನಿಗಳು ಕೊರೋನಾ ಸಮಯದಲ್ಲಿ ಭಾರತಕ್ಕೆ ಆಗಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮೂಲಕ ಚೀನಾಗೆ ಟಾಂಗ್ ನೀಡಿದ್ದಾರೆ . ಪ್ರತಿ ಉದ್ಯಮದಲ್ಲಿ ವಿಶ್ವಾಸ ಮುಖ್ಯ. ಇದರ ಜೊತೆಗ ಮೂಲಭೂತ ಸೌಕರ್ಯ, ಬೆಲೆ, ಆರ್ಥಿಕ ನೀತಿ ಸೇರಿದಂತೆ ಇತರ ಕಾರಣಗಳು ಸೇರಿಕೊಳ್ಳುತ್ತದೆ. ಇದಕ್ಕೆಲ್ಲ ಭಾರತ ಪೂರಕವಾಗಿದೆ ಎಂದು ಮೋದಿ ಹೇಳಿದ್ದಾರೆ.

ತಮ್ಮ ಉಳಿತಾಯದ 2.25 ಲಕ್ಷ ರೂ. ಪಿಎಂ ಕೇರ್ಸ್‌ ಫಂಡ್‌ಗೆ ದಾನ ಮಾಡಿದ ಮೋದಿ!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಭಾರತಕ್ಕೆ 20 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ಬಂಡವಾಳ ಹರಿದು ಬಂದಿದೆ. ಆತ್ಮನಿರ್ಭರ್ ಭಾರತ್ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ವಿಶ್ವ ಮಾರುಕಟ್ಟೆ ಒದಗಿಸುವ ಕಾರ್ಯಗಳು ನಡೆಯುತ್ತಿದೆ. ಅಮೆರಿಕ, ಗಲ್ಫ್, ಆಸ್ಟ್ರೇಲಿಯಾ, ಯೂರೊಪ್ ಎಲ್ಲಾ ದೇಶಗಳಿಗೆ ಭಾರತದ ಮೇಲೆ ವಿಶ್ವಾಸವಿದೆ. ಹೀಗಾಗಿ ಭಾರತ ಕೊರೋನಾದಂತಹ ಮಹಾಮಾರಿ ಸಮಯದಲ್ಲೂ 20 ಮಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ಬಂಡವಾಳ ಪಡೆಯುವಲ್ಲಿ ಯಶಸ್ವಿಯಾಗಿದೆ.

ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಿಗಿಸುವುದು ನಮ್ಮ ಕರ್ತವ್ಯವಾಗಿದೆ. ಇದರ ನಡುವೆ ನಾವು ಜಾಗತಿಕ ಮಟ್ಟದ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಿಲ್ಲ. ವಿಶ್ವದ ಹಲವು ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಘಟಕ ಆರಂಭಿಸಿ ಇತರ ದೇಶಗಳಿಗೆ ರಫ್ತು ಮಾಡುತ್ತಿದೆ. ಇನ್ನು ಕೊರೋನಾ ವೈರಸ್ ಲಸಿಕೆ ಸಂಶೋಧನೆಯಲ್ಲಿ ಭಾರತ ಕೂಡ ಮುಂಚೂಣಿಯಲ್ಲಿದೆ. ವಿಶ್ವಕ್ಕೆ ಔಷಧಿಗಳ ಪೂರೈಕೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂದು ಮೋದಿ ಹೇಳಿದರು. ಅಮೆರಿಕದ ಉದ್ಯಮಗಳು ಭಾರತಕೃದಲ್ಲಿ ಉದ್ಯವನ್ನು ವಿಸ್ತರಿಸಲು, ಭಾರತದಲ್ಲಿ ಘಟಕ ತೆರೆಯಲು ಪೂರಕ ವಾತಾವರಣ ಹಾಗೂ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.

click me!