
ನ್ಯೂಯಾರ್ಕ್(ನ.30) ಬರೋಬ್ಬರಿ 52 ವರ್ಷಗಳ ಹಿಂದಿನ ವಿವಾದಾತ್ಮಕ ಹೇಳಿಕೆ ಮತ್ತೆ ಮುನ್ನಲೆಗೆ ಬಂದಿದೆ. ಅಮೆರಿಕ ನಿವೃತ್ತ ರಾಜತಾಂತ್ರಿಕ ಹೆನ್ರಿ ಕೆಸ್ಸಿಂಜರ್ ಇಂದು ತಮ್ಮ ನಿವಾಸದಲ್ಲಿ ನಿಧರಾಗಿದ್ದಾರೆ. 100ನೇ ವಯಸ್ಸಿನಲ್ಲಿ ನಿಧನರಾದ ಹೆನ್ರಿ ಕಿಸ್ಸಿಂಜರ್ ಹೆಸರು ಭಾರತೀಯರು ಮರೆಯಲು ಸಾಧ್ಯವಿಲ್ಲ. ಕಾರಣ ಇಂದಿರಾ ಗಾಂಧಿ ಹಾಗೂ ಭಾರತೀಯರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಲ್ಲದೇ ನಿಂದಿಸಿದ್ದ ಹೆನ್ರಿ ಕಿಸ್ಸಿಂಜರ್ ಭಾರಿ ವಿವಾದ ಸೃಷ್ಟಿಸಿದ್ದರು. ಭಾರತದ ಆಕ್ರೋಶಕ್ಕೆ ಮಣಿದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದ ಕಿಸ್ಸಿಂಜರ್ ನಿಧನ ಇದೀಗ ಹಳೇ ವಿವಾದವನ್ನು ಮತ್ತೆ ಕೆದಕುವಂತ ಮಾಡಿದೆ.
ಅಮೆರಿಕ ಈಗಲೂ ತಾನು ವಿಶ್ವದ ದೊಡ್ಡಣ ಎಂದು ಬಿಂಬಿಸುತ್ತಿದೆ. ಸದ್ಯ ಅಮೆರಿಕ ಮಾತನ್ನು ಧಿಕ್ಕರಿಸುವ ಹಲವು ರಾಷ್ಟ್ರಗಳಿವೆ. ಆದರೆ ಇದು 1971ರ ಮಾತು. ಈ ಸಂದರ್ಭದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು, ಬಡ ರಾಷ್ಟ್ರಗಳು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ರಾಷ್ಟ್ರಗಳು ಅಮೆರಿಕ ಮಾತು ಮೀರುತ್ತಿರಲಿಲ್ಲ. ಆದರೆ 1971ರಲ್ಲಿ ಭಾರತ ಪ್ರಧಾನಿ ಇಂಧಿರಾ ಗಾಂಧಿ, ಅಮೆರಿಕದ ಮಾತನ್ನು ಮೀರಿದ್ದರು. ಅಮೆರಿಕದ ಎಚ್ಚರಿಕೆಗೆ ಸೊಪ್ಪು ಹಾಕದ ಇಂದಿರಾ ಗಾಂಧಿ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಲು ಯುದ್ಧ ಘೋಷಿಸಿಬಿಟ್ಟಿದ್ದರು.
ಪನ್ನು ಹತ್ಯೆಗೆ ಭಾರತೀಯ ನಿಖಿಲ್ ಸಂಚು: ಅಮೆರಿಕ ಆರೋಪ: ತನಿಖೆಗೆ ಸಮಿತಿ ರಚನೆ
1971ರಲ್ಲಿ ಪಾಕಿಸ್ತಾನ ವಿರುದ್ದ ಭಾರತ ಯುದ್ಧ ಸಾರಿತ್ತು. ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಯುದ್ಧಕ್ಕೆ ಸಜ್ಜಾಗಿತ್ತು. ಆದರೆ ಅಮೆರಿಕದ ಕಾರ್ಯದರ್ಶಿ ಇದೇ ಹೆನ್ರಿ ಕಿಸ್ಸಿಂಜರ್ ಪಾಕಿಸ್ತಾನ ಬೆಂಬಲಿಸಿದ್ದರು. ಇಷ್ಟೇ ಅಲ್ಲ ಭಾರತಕ್ಕೆ ಯುದ್ಧ ಕೈಬಿಡಲು ಎಚ್ಚರಿಸಿದ್ದರು. ಆದರೆ ಪ್ರಧಾನಿ ಇಂಧಿರಾ ಗಾಂಧಿ ಅಮೆರಿಕದ ಮಾತನ್ನು ತರಿಸ್ಕರಿಸಿ ಯುದ್ಧ ಘೋಷಣೆ ಮಾಡಿದ್ದರು.
ಅಮೆರಿಕ ಮಾತು ಮೀರಿದ ಇಂದಿರಾ ಗಾಂಧಿ ಹಾಗೂ ಭಾರತ ವಿರುದ್ಧ ಅಮೆರಿಕ ಕೆರಳಿತ್ತು. ಪ್ರಮುಖವಾಗಿ ಹೆನ್ಸಿ ಕಿಸ್ಸಿಂಜರ್ ಆಕ್ರೋಶಗೊಂಡಿದ್ದರು. ಇದೇ ವೇಳೆ ಹನ್ರಿ ಕಿಸ್ಸಿಂಜರ್ ಹಾಗೂ ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಈ ಕುರಿತು ಮಾತನಾಡಿದ್ದರು. ಭಾರತೀಯ ಮಹಿಳೆಯರ ಕುರಿತು ಅಸಭ್ಯವಾಗಿ ಪದ ಬಳಕೆ ಮಾಡಿದ್ದರು. ಇಂಧಿರಾ ಗಾಂಧಿಗೆ ಬಿಚ್ ಅನ್ನೋ ಪದ ಬಳಕೆ ಮಾಡಿದ್ದರು. ಮಾಟಗಾತಿ, ಬಾಸ್ಟರ್ಡ್, ನಪುಂಸಕರು, ವೇಶ್ಯೆಯರು ಸೇರಿದಂತೆ ಹಲವು ನಿಂದನಾತ್ಮ ಪದಕಗಳನ್ನು ಇಂದಿರಾ ಗಾಂಧಿ ಹಾಗೂ ಭಾರತೀಯರ ವಿರುದ್ದ ರಿಚರ್ಡ್ ಬಳಕೆ ಮಾಡಿದ್ದರು.
ಖಲಿಸ್ತಾನಿ ಉಗ್ರನ ಹತ್ಯೆ: ಭಾರತಕ್ಕೇ ವಾರ್ನಿಂಗ್ ಕೊಡ್ತಾ ಅಮೆರಿಕಾ? ಭಾರತದ ಪ್ರತ್ಯುತ್ತರವೇನು?
2005ರಲ್ಲಿ ನಿಕ್ಸನ್ ಹಾಗೂ ಕಿಸ್ಸಿಂಜರ್ ನಡುವಿನ ಈ ಸಂಭಾಷಣೆ ಟೇಪ್ ಆಡಿಯೋ ಬಹಿರಂಗವಾಗಿತ್ತು. ಇದು ಕೋಲಾಹವನ್ನೇ ಎಬ್ಬಸಿತ್ತು. ಭಾರತ ಈ ಪದ ಬಳಕೆಯನ್ನು ಖಂಡಿಸಿತ್ತು. ವಿವಾದ ಜೋರಾಗುತ್ತಿದ್ದಂತೆ ಕಿಸ್ಸಿಂಜರ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. ಇಂಧಿರಾ ಗಾಂಧಿಯನ್ನು ಗೌರವಿಸುದಾಗಿ ಹೇಳಿ ವಿವಾದ ತಣ್ಮಗಾಗಿಸುವ ಪ್ರಯತ್ನ ಮಾಡಿದ್ದರು. ಇದೀಗ ಕಿಸ್ಸಿಂಜರ್ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹೀಗಾಗಿ ಹಳೇ ವಿವಾದಗಳು ಮತ್ತೆ ಚರ್ಚೆಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ