ಪಂಚರಾಜ್ಯ ಚುನಾವಣೆಯಲ್ಲಿ ಪ್ರಮುಖ ರಾಜ್ಯವಾಗಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿಲಿದೆ ಎಂದು ಕೆಲವು ಎಕ್ಸಿಟ್ ಪೂಲ್‌ಗಳು ತಿಳಿಸಿವೆ.
ನವದೆಹಲಿ (ನ.30): ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎಕ್ಸಿಟ್ ಪೂಲ್ ತಿಳಿಸಿದೆ. ರಿಪಬ್ಲಿಕ್ ಟಿವಿಯ ಎಕ್ಸಿಟ್ ಪೂಲ್ ವರದಿಯ ಪ್ರಕಾರ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ 116 ಮ್ಯಾಜಿಕ್ ನಂಬರ್ ಆಗಿದೆ. ಬಿಜೆಇ 118 ರಿಂದ 130 ಸೀಟ್‌ಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಕ್ಷ 111 ರಿಂದ 121 ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಇತರೆ 2 ರಿಂದ 4 ಸೀಟ್‌ನಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಇನ್ನು ಎಎನ್‌ಸ್‌ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 139 ರಿಂದ 143 ಸೀಟ್ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟಿದ್ದರೆ, ಬಿಜೆಪಿ 81 ರಿಂದ 85 ಸೀಟ್ ಗೆಲ್ಲುವ ನಿರೀಕ್ಷೆ ಇದೆ. ಇತರೆ 2 ರಿಂದ 4 ಸೀಟ್ ಗೆಲ್ಲುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಇನ್ನು ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ 100 ರಿಂದ 123 ಸೀಟ್ ಗೆಲ್ಲಲಿದೆ ಎಂದು ಹೇಳಿದ್ದರೆ, ಕಾಂಗ್ರೆಸ್ 102 ರಿಂದ 125 ಸೀಟ್ ಗೆಲ್ಲುವ ಸಾಧ್ಯತೆ ಇದೆ ಎಂದು ಭವಿಷ್ಯ ಹೇಳಿದೆ. ಇತರರು 0 ಯಿಂದ 5 ಸೀಟ್ ಗೆಲ್ಲಬಹುದು ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ತಿಳಿಸಿದೆ.
ಪೋಲ್ಸ್‌ಸ್ಟ್ರಾಟ್ ಮಾಡಿದ ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ ಬಿಜೆಪಿ 106-116 ಸೀಟ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್ ಪಕ್ಷ 111 ರಿಂದ 121 ಸೀಟ್‌ಗಳಲ್ಲಿ ಗೆಲವು ಕಾಣಲಿದೆ ಎಂದಿದೆ. ಇತರೆ 0 ಯಿಂದ 6 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎನ್ನುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದೆ.
News 24-Chanakya ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಲಿದೆ ಎಂದಿದೆ. ಬಿಜೆಪಿ ಇಲ್ಲಿ ಒಟ್ಟು 151 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್ 74 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂದು ತಿಳಿಸಿದೆ. ಇತರೇ 5 ಸೀಟ್‌ಗಳಲ್ಲಿ ಗೆಲುವು ಸಾಧಿಸಬಹುದು ಎಂದಿದೆ.
ರಾಜಸ್ಥಾನದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಕೊಟ್ಟ ಸಿಎನ್‌ಎನ್! ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಇಲ್ಲಿದೆ ನೋಡಿ..
ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 17 ರಂದು ಚುನಾವಣೆ ನಡೆದಿತ್ತು. ಡಿಸೆಂಬರ್ 3 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ದೊಡ್ಡ ವಿರೋಧ ಪಕ್ಷವಾಗಿದ್ದರೆ, ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪಾರ್ಟಿ, ಬಹುಜನ ಸಮಾಜವಾದಿ ಪಾರ್ಟಿ ಕೂಡ ಕೆಲವೊಂದು ಸ್ಥಳಗಳಲ್ಲಿ ಫೈಟ್ ನಡೆಸಿದೆ. 2003, 2008 ಹಾಗೂ 2013ರಲ್ಲಿ ಸತತ ಮೂರು ಬಾರಿ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋತಿತ್ತು. ಆದರೆ, ಮಾರ್ಚ್ 2020ರಲ್ಲಿ ಕಮಲ್‌ನಾಥ್ ಸರ್ಕಾರ ಉರುಳಿದಾಗ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿತ್ತು.
ಛತ್ತೀಸ್‌ಗಢ, ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಪರಾಕ್, ಮಿಜೋರಾಂ ಅತಂತ್ರ!