ರಾಜಸ್ಥಾನದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಕೊಟ್ಟ ಸಿಎನ್‌ಎನ್! ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಇಲ್ಲಿದೆ ನೋಡಿ..

By Sathish Kumar KH  |  First Published Nov 30, 2023, 5:55 PM IST

ಪಂಚರಾಜ್ಯ ವಿಧಾನಸಭಾ ಚುನಾವನೆಯಲ್ಲಿ ರಾಜಸ್ಥಾನದ 199 ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಬರಲಿದೆ ಎಂದು ಸಿಎನ್‌ಎನ್‌ ಚುನಾವಣೋತ್ತರ ಸಮೀಕ್ಷೆಯನ್ನು ಹೊರಹಾಕಿದೆ. 


ಬೆಂಗಳೂರು (ನ.30): ದೇಶದ ಲೋಕಸಭಾ ಚುನಾವಣೆ 2024ರ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಜಸ್ಥಾನದ 199 ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಬರಲಿದೆ ಎಂದು ಸಿಎನ್‌ಎನ್‌ ಚುನಾವಣೋತ್ತರ ಸಮೀಕ್ಷೆಯನ್ನು ಹೊರಹಾಕಿದೆ. 

ದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕೆಲವೇ ರಾಜ್ಯಗಳಲ್ಲಿ ಒಂದಾದ ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಎಲ್ಲ ಕಡೆಗಳಲ್ಲಿ ಶಾಂತಿಯುತವಾಗಿ ಚುನಾವಣೆ ನಡೆದರೆ ಸಿಕಾರ್‌ನ ಫತೇಪುರ್ ಶೇಖಾವತಿಯಂತಹ ಪ್ರದೇಶಗಳಲ್ಲಿ ಕಲ್ಲು ತೂರಾಟದ ಘಟನೆಗಳು ಸಂಭವಿಸಿವೆ. ಇನ್ನು 5,25,38,105 ಮತದಾರರು 1,862 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಮತಗಳನ್ನು ಚಲಾಯಿಸಿದ್ದಾರೆ. ಇನ್ನು ಅಭ್ಯರ್ಥಿಗಳು ಪಡೆದ ಮತಗಳನ್ನು ಡಿಸೆಂಬರ್ 3 ರಂದು ಎಣಿಕೆ ಮಾಡಲಾಗುತ್ತದೆ. ಇಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತೊಂದು ಬಾರಿಗೆ ಅಧಿಕಾರ ಪಡೆಯುವ ಹವಣಿಸುತ್ತಿದ್ದರೆ, ಬಿಜೆಪಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ನೆಚ್ಚಿಕೊಂಡಿದೆ.

Tap to resize

Latest Videos

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ಕಹಳೆ ಎಂದ ಎಕ್ಸಿಟ್‌ ಪೋಲ್‌!

ಸಿಎನ್‌ಎನ್ ಎಕ್ಸಿಟ್ ಪೋಲ್ ವಿವರ: 200 ವಿಧಾನಸಭಾ ಕ್ಷೇತ್ರಗಳ ಪೈಕಿ 101 ಸ್ಥಾನ ಪಡೆದ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಬಗ್ಗೆ ಚುನಾವಣೋತ್ತರ ಸಮೀಕ್ಷೆಯನ್ನು ಬಹಿರಂಗ ಮಾಡಿದ ಸಿಎನ್‌ಎನ್‌ ಬಿಜೆಪಿ 111 ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿಸಿದೆ.
ಬಿಜೆಪಿ 111
ಕಾಂಗ್ರೆಸ್‌ 74
ಎಸ್‌ಪಿ 00
ಇತರೆ 14 ಸ್ಥಾನಗಳು ಬರಲಿವೆ.

ಪೋಲ್‌ಸ್ಟಾರ್ಟ್ (Polstart) ಸಂಸ್ಥೆಯ ವರದಿಯಲ್ಲಿಯೂ ಬಿಜೆಪಿಗೆ ಸರಳ ಬಹುಮತ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ವರದಿಯನ್ನು ಬಹಿರಂಗಪಡಿಸಿದೆ.
ಬಿಜೆಪಿ 100-110, 
ಕಾಂಗ್ರೆಸ್ 90-100
ಇತರೆ 5-15

ಟೈಮ್ಸ್‌ ನೌ (Times now) ಸಂಸ್ಥೆಯ ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿಯೂ ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ ಸಿಗಲಿದೆ ಎಂದು ಹೇಳಲಾಗಿದೆ.
ಬಿಜೆಪಿ 108-128
ಕಾಂಗ್ರೆಸ್ 56-72
ಎಸ್‌ಪಿ -00
ಇತರೆ 13-21

ಇನ್ಫೋಸಿಸ್ ನಾರಾಯಣಮೂರ್ತಿಯ ಕಾಂಗ್ರೆಸ್‌ ಗ್ಯಾರಂಟಿ ಕುರಿತ ಹೇಳಿಕೆ ಬೆಂಬಲಿಸಿದ ಸಚಿವ ಪ್ರಿಯಾಂಕ ಖರ್ಗೆ!

ಇಂಡಿಯಾ ಟುಡೇ ಎಕ್ಸಿಟ್ ಪೋಲ್: ರಾಜಸ್ಥಾನ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್‌ ಸಮೀಕ್ಷೆಯನ್ನು ನೀಡಿರುವ ಇಂಡಿಯಾ ಟುಡೇ ಸಂಸ್ಥೆ (India Today Axis My India) ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಬಲ ಸಾಧಿಸಲಿವೆ ಎಂದು ಹೇಳಿದೆ. ಇನ್ನು ಅತಂತ್ರ ಸ್ಥಿತಿ ಬರಲಿದ್ದು, ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಬಹುದು ಎಂದು ಹೇಳಲಾಗುತ್ತಿದೆ. 
ಬಿಜೆಪಿ 80-100
ಕಾಂಗ್ರೆಸ್ 86- 106
ಇತರೆ 9-18 

ಪಿ-ಮಾರ್ಕ್ (P-MARQ) ಸಂಸ್ಥೆಯು ಪ್ರಸ್ತುತ ಅಧಿಕಾರದಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವನ್ನು ನೀಡಿದೆ. ಈ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ತಿಳಿಸಿದೆ.
ಬಿಜೆಪಿ 69-81
ಕಾಂಗ್ರೆಸ್ 105-125
ಎಸ್‌ಪಿ 00
ಇತರೆ 5-15

click me!