ಅಮೆರಿಕ ನೆಲದಲ್ಲಿ ನಿಂತು, ಯುಎಸ್‌-ಪಾಕ್‌ ಸಂಬಂಧದ 'ಮೌಲ್ಯ' ಪ್ರಶ್ನೆ ಮಾಡಿದ ಜೈಶಂಕರ್!

Published : Sep 26, 2022, 08:52 PM IST
ಅಮೆರಿಕ ನೆಲದಲ್ಲಿ ನಿಂತು, ಯುಎಸ್‌-ಪಾಕ್‌ ಸಂಬಂಧದ 'ಮೌಲ್ಯ' ಪ್ರಶ್ನೆ ಮಾಡಿದ ಜೈಶಂಕರ್!

ಸಾರಾಂಶ

ಅಮೆರಿಕವು ಪಾಕಿಸ್ತಾನದ ಜೊತೆಗಿನ ಎಫ್‌-16 ಯುದ್ಧ ವಿಮಾನವನ್ನು ಹಂಚಿಕೊಂಡಿರುವ ಬಗ್ಗೆ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಅವರನ್ನು ಪ್ರಶ್ನೆ ಮಾಡಿದಾಗ ಅವರು, ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.  

ನ್ಯೂಯಾರ್ಕ್‌ (ಸೆ. 26): ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಯುಎಸ್-ಪಾಕಿಸ್ತಾನ ಸಂಬಂಧದ 'ಮೌಲ್ಯದ" ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಇಸ್ಲಾಮಾಬಾದ್‌ನೊಂದಿಗಿನ ವಾಷಿಂಗ್ಟನ್‌ನ ಸಂಬಂಧಗಳು ಅಮೆರಿಕದ ಹಿತಾಸಕ್ತಿಯನ್ನು ಪೂರೈಸುತ್ತದೆಯೇ ಎನ್ನುವುದನ್ನು ಅವರು ಪ್ರಶ್ನೆ ಮಾಡಿಕೊಳ್ಳಬೇಕು ಎಂದಿದ್ದಾರೆ.  ವಾಷಿಂಗ್ಟನ್‌ನಲ್ಲಿ ಭಾನುವಾರ ಭಾರತೀಯ ಅಮೆರಿಕನ್ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಜೈಶಂಕರ್, ಇದು ಯಾವ ರೀತಿಯ ಸಂಬಂಧವೆಂದರೆ, ಇದು ಪಾಕಿಸ್ತಾನಕ್ಕಾಗಲಿ, ಅಮೆರಿಕಕ್ಕಾಗಿ ಇದರಿಂದ ಯಾವುದೇ ಲಾಭವಾಗುವುದಿಲ್ಲ' ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಎಫ್‌ಸಿ-16 ಪ್ಯಾಕೇಜ್‌ಅನ್ನು ಹಂಚಿಕೊಂಡಿದ್ದ ಅಮೆರಿಕ ಅದರ ನಿರ್ವಹಣೆಗಾಗಿ ಇತ್ತೀಚೆಗೆ ದೊಡ್ಡ ಮಟ್ಟದ ಹಣ ಬಿಡುಗಡೆ ಮಾಡಿತ್ತು. ಈ ಬಗ್ಗೆ ಭಾರತದ ಸಚಿವರಿಗೆ ಸಭಿಕರೊಬ್ಬರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡುವ ವೇಳೆ ಅವರು ಈ ಮಾತು ಹೇಳಿದ್ದಾರೆ. ಕೆಲವು ವರದ ಹಿಂದೆ 2018ರ ಬಳಿಕ ಮೊದಲ ಬಾರಿಗೆ ಅಮೆರಿಕದ ರಕ್ಷಣಾ ಇಲಾಖೆ, ಪಾಕಿಸ್ತಾನ ಸರ್ಕಾರಕ್ಕೆ ವಿದೇಶಿ ಸೇನಾ ಮಾರಾಟ (ಎಫ್‌ಎಂಎಸ್‌) ಅನುಮೋದನೆ ಮಾಡಿತ್ತು. ಅಮರಿಕ  ನೀಡಿದ್ದ ಎಫ್‌-16 ಯುದ್ಧ ವಿಮಾನಗಳ ಸುಸ್ಥಿರತೆ ಹಾಗೂ ನಿವರ್ಹಣೆ ಮಾಡುವ ಸಲುವಾಗು 450 ಮಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತವನ್ನು ಪಾಕಿಸ್ತಾನಕ್ಕೆ ನೀಡಿತ್ತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪಾಕಿಸ್ತಾನದ F-16 ಯುದ್ಧ ವಿಮಾನಗಳಿಗೆ ನಿವರ್ಹಣೆ ಪ್ಯಾಕೇಜ್ ಒದಗಿಸುವ ವಾಷಿಂಗ್ಟನ್ ನಿರ್ಧಾರದ ಬಗ್ಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೆ ಭಾರತದ ಕಳವಳವನ್ನು ಈಗಾಗಲೇ ತಿಳಿಸಿದ್ದಾರೆ. ಅಮೆರಿಕವು ಪಾಕಿಸ್ತಾನದ ಜೊತೆಗಿನ ಈ ಸಂಬಂಧಕ್ಕೆ ಪ್ರತಿಯಾಗಿ ಅವರು ಎನು ಪಡೆಯುತ್ತಾರೆ ಎನ್ನುವುದನ್ನು ಪ್ರತಿಬಿಂಬಿಸಲು ಅಮೆರಿಕಕ್ಕೆ ಇರುವ ನಿಜವಾದ ಸಮಯ ಎಂದು ಜೈಶಂಕರ್‌ ಹೇಳಿದ್ದಾರೆ.

ಬಹುಶಃ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಇದನ್ನು ಅಮೆರಿಕ (US-Pakistan relationship)ಮಾಡುತ್ತಿದೆ ಎಂದು ಕೆಲವು ಹೇಳಬಹುದು. ಆದರೆ, ಎಫ್‌-16 ರನ್ನುವ ಯುದ್ಧ ವಿಮಾನದ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ. ಇವುಗಳನ್ನು ಪಾಕಿಸ್ತಾನ ಎಲ್ಲಿ ನಿಯೋಜನೆ ಮಾಡುತ್ತಿದೆ ಹಾಗೂ ಅದನ್ನು ಯಾವ ರೀತಿ ಉಪಯೋಗಿಸುತ್ತಿದ್ದಾರೆ ಎನ್ನುವ ಮಾಹಿತಿಯೂ ನಿಮಗಿದೆ. ಇಂಥ ಮಾತುಗಳನ್ನು ಹೇಳುವ ಮೂಲಕ ಯಾರನ್ನೂ ಮೂರ್ಖರನ್ನಾಗಿ (Foreign Military Sale) ಮಾಡುವ ಅಗತ್ಯವಿಲ್ಲ ಎಂದು ಜೈಶಂಕರ್‌ (Jaishankar) ಖಡಕ್‌ ಆಗಿ ಉತ್ತರಿಸಿದ್ದಾರೆ.

ಭಾರತೀಯ ವಾಯುಪಡೆ ವಿಮಾನವೆಂದು ಸ್ಪೈಸ್‌ ಜೆಟ್‌ ಮೇಲೆ ಪಾಕ್‌ ‘ಅಟ್ಯಾಕ್‌’!

ಅಮೆರಿಕದ ನೀತಿ ನಿಯಮಾವಳಿ ಮಾಡುವ ವ್ಯಕ್ತಿಯೊಂದಿಗೆ ನಾನೇನಾದರೂ ಮಾತನಾಡಿದರೆ, ಖಂಡಿತವಾಗಿ ನಾನು ಅವರು ಮಾಡುತ್ತಿರುವ ಈ ವಿಚಾರದ ಬಗ್ಗೆ ಗಮನ ನೀಡುತ್ತಿದ್ದೆ ಎಂದು ಹೇಳಿದ್ದಾರೆ.  ಜೈಶಂಕರ್ ಅವರು ಶನಿವಾರ ನ್ಯೂಯಾರ್ಕ್‌ನಲ್ಲಿ ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚರ್ಚೆಯನ್ನು ಮುಕ್ತಾಯಗೊಳಿಸಿದರು ಮತ್ತು ಮುಂದಿನ ಮೂರು ದಿನಗಳನ್ನು ಅವರು ವಾಷಿಂಗ್ಟನ್‌ನಲ್ಲಿ ಕಳೆಯಲು ನಿರ್ಧರಿಸಿದ್ದಾರೆ. ಸಚಿವರು ತಮ್ಮ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ (Pakistan) ಮತ್ತು ಬಿಡೆನ್ ಆಡಳಿತದ ಇತರ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!

ಭಾರತದ ವಿರೋಧವೇಕೆ?: ಅಮೆರಿಕ ಪಾಕಿಸ್ತಾನಕ್ಕೆ ಎಫ್‌-16 ಯುದ್ಧವಿಮಾನವನ್ನು ನೀಡಿರುವ ಬಗ್ಗೆ ಭಾರತ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇದರಲ್ಲಿ ಕೆಲವು ವಿಮಾನಗಳನ್ನು ಟರ್ಕಿಯಿಂದ ಪಾಕಿಸ್ತಾನ ಪಡೆದುಕೊಂಡಿದೆ. ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಮಾತ್ರವೇ ಇದನ್ನು ಬಳಸಬೇಕು, ಯಾವುದೇ ಕಾರಣಕ್ಕೂ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಲು ಬಳಸಿಕೊಳ್ಳಬಾರದು ಎನ್ನುವುದು ಇಲ್ಲಿನ ಷರತ್ತು. ಆದರೆ, 2019ರ ಫೆ. 26 ರಂದು ಬಾಲಾಕೋಟ್‌ನಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ವಾಯು ದಾಳಿ ನಡೆಸಿತ್ತು. ಆದರೆ, ಇದರ ಮರುದಿನವೇ ಪಾಕಿಸ್ತಾನ 10 ಎಫ್‌16 ಯುದ್ಧವಿಮಾನಗಳನ್ನು ಬಳಸಿಕೊಂಡು ಭಾರತದ ವಾಯುಗಡಿ ದಾಟಿತ್ತು. ಈ ಸಂದರ್ಭದಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಸೇರಿದಂತೆ ಇತರ ಪೈಲಟ್‌ಗಳು ಮಿಗ್‌ 21 ಯುದ್ಧ ವಿಮಾನಗಳ ಮೂಲಕ ಪ್ರತಿರೋಧ ಒಡ್ಡಿದ್ದರು. ಇದರಲ್ಲಿ ಒಂದು ಎಫ್‌ 16 ಯುದ್ಧವಿಮಾನವನ್ನು ಭಾರತ ಹೊಡೆದುರುಳಿಸಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್