
ದೇಶದ ರಾಜಧಾನಿ ದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭದ್ರತೆಯ ವಿಷಯದಲ್ಲಿ ದೊಡ್ಡ ಲೋಪ ಕಂಡುಬಂದಿದೆ, ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಖಚಿತ ಚಿನ್ನದ ಕಲಶವನ್ನು ಕೆಂಪು ಕೋಟೆಯ ಆವರಣದಿಂದ ಕದಿಯಲಾಗಿದೆ. ಈ 760 ಗ್ರಾಂ ಚಿನ್ನದ ಕಲಶದಲ್ಲಿ 150 ಗ್ರಾಂ ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳಿವೆ. ಕೆಂಪು ಕೋಟೆಯಲ್ಲಿ ಜೈನ ಧರ್ಮದ ಕಾರ್ಯಕ್ರಮ ನಡೆಯುತ್ತಿತ್ತು, ಅದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಲಶವೂ ಇರಿಸಲಾಗಿತ್ತು. ಆದರೆ ಅದ್ಯಾವುದೋ ಮಾಯೆಯಲ್ಲಿ ಅವಕಾಶವನ್ನು ನೋಡಿದ ಖದೀಮರು ಅದನ್ನು ಕದ್ದು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ನಂತರ, ಅದರ ತನಿಖೆಯನ್ನು ಪ್ರಾರಂಭಿಸಲಾಗಿದೆ. ಕೆಂಪು ಕೋಟೆ ಭದ್ರತೆಯ ವಿಷಯದಲ್ಲಿ ಬಹಳ ಸೂಕ್ಷ್ಮ ಸ್ಥಳವಾಗಿದೆ. ಐತಿಹಾಸಿಕ ಕಟ್ಟಡದ ಭದ್ರತೆಗಾಗಿ CISF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನು ಉದ್ಯಮಿ ಸುಧೀರ್ ಜೈನ್ ಪ್ರತಿದಿನ ಪೂಜೆಗಾಗಿ ತಂದಿದ್ದರು. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಗಣ್ಯ ರಾಜಕಾರಣಿಗಳು ಭಾಗವಹಿಸಿದ್ದರು. ಆದರೆ, ಸ್ವಾಗತದ ಗೊಂದಲದ ನಡುವೆ ಕಳ್ಳರು ಈ ಕಲಶವನ್ನು ಕದ್ದಿದ್ದಾರೆ. ಭಾರತದ ಪ್ರಮುಖ ಐತಿಹಾಸಿಕ ಸ್ಮಾರಕವಾಗಿರುವ ಕೆಂಪುಕೋಟೆ ಭದ್ರತೆಗೆ ಹೇಳಿ ಮಾಡಿಸಿರುವಂಥದ್ದು. ಇಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಅಚ್ಚರಿಯ ರೀತಿಯಲ್ಲಿ ಕಳ್ಳತನ
ಆದರೆ, ಇಂಥ ಸ್ಥಿತಿಯ ನಡುವೆಯೂ ಕಳ್ಳತನ ಆಗಿರುವುದು ಅಚ್ಚರಿ ಉಂಟು ಮಾಡುತ್ತಿದೆ. ಕಳ್ಳರು ಜನಸಂದಣಿಯ ಲಾಭವನ್ನು ಪಡೆದು ಕಲಶವನ್ನು ಕದ್ದಿರುವುದು ಭದ್ರತಾ ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸಿದೆ. ದೆಹಲಿ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕೋತವಾಲಿ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಸುಧೀರ್ ಜೈನ್ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ:
ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ದೃಶ್ಯಾವಳಿಗಳಲ್ಲಿ ಶಂಕಿತನ ಚಟುವಟಿಕೆಗಳು ಸೆರೆಯಾಗಿದ್ದು, ಆತನನ್ನು ಗುರುತಿಸಲಾಗಿದೆ. ಪೊಲೀಸರು ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಜೈನ ಸಮುದಾಯದ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ನಡೆದಿರುವುದರಿಂದ, ಸಮುದಾಯದಲ್ಲಿ ಆತಂಕ ಮತ್ತು ಕೋಪವನ್ನುಂಟುಮಾಡಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಭಾಗವಹಿಸಿದವರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ.
ಕೆಂಪು ಕೋಟೆ ಇತಿಹಾಸ: Cyber Crime: ಆನ್ಲೈನ್ನಲ್ಲಿ ಉತ್ತಮ ಹಾಲಿಗಾಗಿ ಹುಡುಕಾಡಿ 18.5 ಲಕ್ಷ ಕಳೆದುಕೊಂಡ ವೃದ್ಧೆ!
ಕೆಂಪು ಕೋಟೆ ದೆಹಲಿಯ ಸಮೀಪ ಆಗ್ರಾ ನಗರದಲ್ಲಿ ಇದೆ. ಪ್ರಸಿದ್ಧ ತಾಜ್ ಮಹಲ್ನಿಂದ 2.5 ಕಿಮೀ ದೂರದಲ್ಲಿದೆ. ಕೆಂಪು ಕೋಟೆ ನಿಜವಾಗಿ ಕೋಟೆಯಿಂದ ಸುತ್ತುವರಿದ ಅರಮನೆಗಳ ನಗರ ಎನ್ನಲಾಗುತ್ತದೆ. 16ನೇ ಶತಮಾನದ ಕೊನೆಯಲ್ಲಿ ಅಕ್ಬರನ ಕಾಲದಲ್ಲಿ ಮೊಘಲರು ಈ ಕೋಟೆಯನ್ನು ಲೋದಿ ವಂಶದಿಂದ ಪಡೆದರು. ಅಕ್ಬರ್ ತನ್ನ ಆಡಳಿತದ ಸಮಯದಲ್ಲಿ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿದನು. ಇದರಿಂದಾಗಿ ಆಗ್ರಾ ನಗರ ಹೆಚ್ಚು ಸಮೃದ್ಧವಾಯಿತೆನ್ನಬಹುದು. ಅಕ್ಬರ್ ಸಾಮಾನ್ಯವಾಗಿ ಕೋಟೆ-ಕಟ್ಟಡಗಳನ್ನು ಕಟ್ಟಿಸುತ್ತಿದ್ದದ್ದು ಕೆಂಬಣ್ಣದ ಕಲ್ಲಿನಿಂದ, ಮತ್ತು ಕೆಂಪು ಕೋಟೆಯಲ್ಲಿಯೂ ಇದೇ ಪ್ರಭಾವವನ್ನು ಕಾಣಬಹುದು.
ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೆ ರಾಜ- ರಾಣಿಯರ ನಿವಾಸವಾಗಿಯೂ ಬದಲಾಯಿತು. ಕೆಂಪು ಕೋಟೆ ತನ್ನ ಇಂದಿನ ರೂಪ ಪಡೆದದ್ದು ಅಕ್ಬರನ ಮೊಮ್ಮಗ ಷಾ ಜಹಾನನ ಕಾಲದಲ್ಲಿ. ಇಡೀ ಕೋಟೆ ಅರ್ಧಚಂದ್ರಾಕಾರವಾಗಿದ್ದು, ಕೋಟೆ ಗೋಡೆಗಳು 21 ಮೀ ಎತ್ತರ ಇವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಮುಖ್ಯ ದ್ವಾರ (ದೆಹಲಿ ದ್ವಾರ) ಯಮುನಾ ನದಿಯ ಕಡೆಗಿದೆ. ಕೋಟೆಯ ಸುತ್ತಳತೆ 2.4 ಕಿಮೀ.
ಇದನ್ನೂ ಓದಿ: ಗಿಳಿಯಿಂದ ಬಯಲಾಯ್ತು ಅಕ್ರಮ ಸಂಬಂಧದ ಗುಟ್ಟು: ಪತಿಗೆ ಕೋರ್ಟ್ ಕೊಟ್ಟಿತು ಶಿಕ್ಷೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ