ಡ್ರೈವರ್‌ ಫುಲ್‌ ಟೈಟ್‌, ಯುಪಿಎಸ್‌ಆರ್‌ಟಿಸಿ ಬಸ್‌ ಡ್ರೈವ್‌ ಮಾಡಿಕೊಂಡು ಬಂದ ಪ್ರಯಾಣಿಕ!

By Santosh NaikFirst Published Feb 19, 2023, 4:07 PM IST
Highlights

ಆಗ್ರಾದಿಂದ ಮಥುರಾಗೆ ಪ್ರಯಾಣ ಮಾಡಬೇಕಿದ್ದ ಬಸ್‌ನ ಡ್ರೈವರ್‌ ಮಾರ್ಗಮಧ್ಯದಲ್ಲಿಯೇ ಮದ್ಯ ಸೇವಿಸಿ ಫುಲ್‌ ಟೈಟ್‌ ಆಗಿದ್ದ. ಬಸ್ ಡ್ರೈವಿಂಗ್‌ ಮಾಡಲು ಕೂಡ ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಕಂಪ್ಯೂಟರ್‌ ಸೈನ್ಸ್‌ ಪದವೀಧರ ಬಸ್‌ ಡ್ರೈವ್‌ ಮಾಡಿ ಪ್ರಯಾಣಿಕರನ್ನು ಗಮ್ಯ ತಲುಪಿಸಿದ್ದಾನೆ.

ಆಗ್ರಾ (ಫೆ.19): ಕುಡಿದು ಬಸ್‌ ಚಾಲನೆ ಮಾಡಿ ಅನಾಹುತಕ್ಕೆ ಕಾರಣವಾದ ಸಾಕಷ್ಟು ಸುದ್ದಿಗಳನ್ನು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಆಗುವಂತಿದ್ದ ಇನ್ನೊಂದು ಪ್ರಕರಣವನ್ನು ಎಚ್ಚರಿಕೆಯಿಂದ ನಿಭಾಯಿಸಲಾಗಿದೆ. ಆಗ್ರಾ ಮತ್ತು ದೆಹಲಿ ಹೆದ್ದಾರಿಯಲ್ಲಿ 42 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡ್ರೈವರ್‌, ಆಗ್ರಾದಿಂದ ಮಥುರಾಗೆ ಪ್ರಯಾಣ ಮಾಡುವ ಹಾದಿಯಲ್ಲಿ ಮದ್ಯದ ಅಮಲಿನಲ್ಲಿ ತೇಲುತ್ತಿದ್ದ. ಒಂದು ಹಂತದಲ್ಲಿ ಆತನಿಗೆ ಬಸ್‌ ಡ್ರೈವ್‌ ಮಾಡಲು ಕೂಡ ಸಾಧ್ಯವಾಗಿರಲಿಲ್ಲ. ಬಸ್‌ಅನ್ನು ರಸ್ತೆಯಲ್ಲಿಯೇ ಬಿಟ್ಟು ನಿದ್ರೆ ಹೋಗಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಯುಪಿಎಸ್‌ಆರ್‌ಟಿಸಿಗೆ ಕರೆ ಮಾಡಿದರೂ, ಯಾರೂ ಕರೆ ಸ್ವೀಕರಿಸುತ್ತಿರಲಿಲ್ಲ. ಆ ಬಳಿಕ ಬಸ್‌ನಲ್ಲಿಯೇ ಪ್ರಯಾಣ ಮಾಡುತ್ತಿದ್ದ 40 ವರ್ಷದ ಕಂಪ್ಯೂಟರ್‌ ಸೈನ್ಸ್‌ ಪದವೀಧರನೊಬ್ಬ ಸ್ಟೀರಿಂಗ್‌ ವೀಲ್‌ ಎದುರು ಕುಳಿತು 40 ಕಿಲೋಮೀಟರ್‌ಗೂ ದೂರು ಬಸ್‌ ಡ್ರೈವ್‌ ಮಾಡಿ, ಪ್ರಯಾಣಿಕರನ್ನು ಸೇಫ್‌ ಆಗಿ ಮಥುರಾಕ್ಕೆ ಕರೆತಂದಿದ್ದಾನೆ. ಈ ಪ್ರಯಾಣಿಕನನ್ನು ಸಂಕಲ್ಪ್‌ ಕಪಿಲ್‌ ಎಂದು ಗುರುತಿಸಲಾಗಿದ್ದು, ಈತ ಬಸ್ ಡ್ರೈವ್‌ ಮಾಡಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ.

ಯುಪಿಎಸ್‌ಆರ್‌ಟಿಸಿ ಪ್ರಾದೇಶಿಕ ವ್ಯವಸ್ಥಾಪಕ ವಿಪಿ ಅಗರ್ವಾಲ್ ಈ ಘಟನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. 'ಈ ಘಟನೆ ಗುರುವಾರ ನಡೆದಿದೆ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ಚಾಲಕನನ್ನು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ.. ಬಸ್ ಮಾಲೀಕನಾಗಿರುವ ಖಾಸಗಿ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಥುರಾ ಡಿಪೋದ ಹಿರಿಯ ಠಾಣಾಧಿಕಾರಿಗಳ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

Latest Videos

Viral Video: ಪಂಚಾಯತಿ ಅಧ್ಯಕ್ಷ ಸಂಬಂಧಿ ಮದುವೆಯಲ್ಲಿ ಲಕ್ಷಗಟ್ಟಲೆ ನೋಟುಗಳ ಸುರಿಮಳೆ!

ಘಟನೆಯನ್ನು ಬಹಳ 'ವಿಚಿತ್ರ' ಎಂದು ಕರೆದ ಮಥುರಾ ಜಿಲ್ಲೆಯ ನಿವಾಸಿ ಕಪಿಲ್, "ನಾನು ಸಂಜೆ 7:30 ರ ಸುಮಾರಿಗೆ ಮಥುರಾಗೆ ಹೋಗುವ ಮಾರ್ಗದಲ್ಲಿ ಬಸ್ ಹತ್ತಿದೆ. ಆದರೆ, ರಸ್ತೆಯಲ್ಲಿ ಚಾಲಕ ಒಂದೇ ಮಾರ್ಗದಲ್ಲಿ ಬಸ್‌ ಓಡಿಸುತ್ತಿರಲಿಲ್ಲ. ಒಂದು ಲೇನ್‌ನಿಂದ ಮತ್ತೊಂದು ಲೇನ್‌ಗೆ ಆಗಾಗ ಬಸ್‌ ಮಾರ್ಗ ಬದಲಾಯಿಸುತ್ತಿದ್ದ. ಅದಲ್ಲದೆ, ಅತಿಯಾದ ವೇಗದಲ್ಲಿಯೂ ಇದ್ದ. ರಸ್ತೆ ಬದಿಯ ಡಿವೈಡರ್‌ಗೆ ಎರಡು ಬಾರಿ ಬಸ್‌ ಡಿಕ್ಕಿಯಾಗುವುದನ್ನು ತಪ್ಪಿಸಿಕೊಂಡಿದ್ದ. ಇದರಿಂದ ಭಯಗೊಂಡಿದ್ದ ಪ್ರಯಾಣಿಕರು ಬಸ್‌ ನಿಲ್ಲಿಸುವಂತೆ ಚಾಲಕನ ಬಳಿ ಕಿರುಚಲು ಪ್ರಾರಂಭ ಮಾಡಿದ್ದರು' ಎಂದು ಹೇಳಿದ್ದಾರೆ. ಬಳಿಕ ಬಸ್ ಕಂಡಕ್ಟರ್‌ ಆಗಿದ್ದ ಅಂಕಿಶ್‌ ಶುಕ್ಲಾ, 30 ನಿಮಿಷದ ಬಳಿಕ ಡ್ರೈವರ್‌ಗೆ ಬಸ್‌ ನಿಲ್ಲಿಸುವಂತೆ ಹೇಳಿದ್ದರು. ಆ ಬಳಿಕ ಡ್ರೈವರ್‌ ರಸ್ತೆ ಪಕ್ಕದಲ್ಲಿ ವಾಂತಿ ಮಾಡಿಕೊಂಡಿದ್ದ. ಬಳಿಕ ಬಸ್‌ ಹತ್ತಿದ ಚಾಲಕನಿಗೆ ಇಂಜಿನ್‌ಗೆ ಕೀ ಹಾಕಲು ಕೂಡಸ ಅರಿವಿರಲಿಲ್ಲ. ಈ ನಡುವೆ ಪ್ರಯಾಣಿಕರು ಯುಪಿಎಸ್‌ಆರ್‌ಟಿಸಿಗೆ ಮಾಡಿದ ಕರೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ರಾತ್ರಿ 8.30ರ ವೇಳೆಗೆ ಡ್ರೈವರ್‌ ಓಡಿ ಹೋಗಿದ್ದ. ಹಿಂದೆಂದೂ ನನಗೆ ಬಸ್‌ ಡ್ರೈವ್‌ ಮಾಡಿರಲಿಲ್ಲ. ಕೊನೆಗೆ ನಾನೇ ಬಸ್‌ ಡ್ರೈವ್‌ ಮಾಡಿಕೊಂಡು ಬಂದೆ' ಎಂದಿದ್ದಾರೆ. 

ಪಾಕಿಸ್ತಾನದಲ್ಲೂ ಸಂಭ್ರಮದ ಶಿವರಾತ್ರಿ, ಇಲ್ಲಿವೆ ನೋಡಿ ಪಾಕ್‌ನ ಐದು ಪ್ರಸಿದ್ಧ ಶಿವ ದೇವಸ್ಥಾನ!

ಮಥುರಾ ಡಿಪೋದ ಹಿರಿಯ ನಿಲ್ದಾಣದ ಉಸ್ತುವಾರಿ ಸಂಜೀವ್ ಶರ್ಮಾ ಕೂಡ ಮಾತನಾಡಿದ್ದು, ಬಸ್ ಯುಪಿಎಸ್‌ಆರ್‌ಟಿಸಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಯಾವುದೇ ಪೂರ್ವ ಮಾಹಿತಿ ಇಲ್ಲದೆ ಮಾಲೀಕರು ಚಾಲಕನನ್ನು ಬದಲಾಯಿಸಿದ್ದರು. ಬಸ್‌ನ ಒಪ್ಪಂದವನ್ನು ರದ್ದುಗೊಳಿಸಲಾಗುವುದು ಎಂದಿದ್ದಾರೆ. ಈ ನಡುವೆ ಬಸ್ ಮಾಲೀಕ ಸೀತಾರಾಮ್ ಚೋಂಕರ್ ಅವರು ಶನಿವಾರದಂದು ಚಾಲಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ, ಅವರು ಕುಡಿದ ಸ್ಥಿತಿಯಲ್ಲಿ ವಾಹನ ಚಲಾಯಿಸುವ ಮೂಲಕ ಹಲವಾರು ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಾರೆ ಎಂದು ದೂರಿದ್ದಾರೆ.

click me!