*ಕಳೆದ 65 ವರ್ಷಗಳಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ
*ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದ ಜನರಿಗೆ ವಿದ್ಯುತ್ ಸಂಪರ್ಕದಿಂದ ಬೆಳಕು
*ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣ : ಅಧಿಕಾರಿಗಳ ಭರವಸೆ
ಆಗ್ರಾ(ನ.4): 75 ವರ್ಷಗಳ ಕಾಲ ಕತ್ತಲೆ ಆವರಿಸಿದ್ದ ಉತ್ತರಪ್ರದೇಶದ (Uttar Pradesh) ಆಗ್ರಾದ ತುಲೈ ಕಾ ನಾಗ್ಲಾ (Tulai ka Nagla) ಗ್ರಾಮದಲ್ಲಿ ಕೊನೆಗೂ ಬೆಳಕು ಮೂಡಲಿದೆ. ಗ್ರಾಮದ ಜನರು ಕಳೆದ 65 ವರ್ಷಗಳಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ ಸಲ್ಲಿಸುತ್ತಿದ್ದರು. ಈಗ ಈ ಗ್ರಾಮದ ಜನರ ಮನವಿನಗ ಸ್ಪಂದನೆ ಸಿಕ್ಕಿದ್ದು, ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಉತ್ತರಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ (Shrikath Sharma) ಮಾತನಾಡಿ , ಕೇಂದ್ರ ಸರ್ಕಾರದಿಂದ ಹೊಸದಾಗಿ ಆರಂಭಿಸಿರುವ ವಿದ್ಯುತ್ ವಿತರಣಾ ಯೋಜನೆಯಲ್ಲಿ ಈ ಗ್ರಾಮವನ್ನು ಸೇರಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ಇಷ್ಟು ವರ್ಷ ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದ ಜನರಿಗೆ ವಿದ್ಯುತ್ ಸಂಪರ್ಕದಿಂದ ಬೆಳಕು ಸಿಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಜನ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರಿ ಸ್ವಾಮ್ಯದ ದಕ್ಷಿಣಾಂಚಲ್ ವಿದ್ಯುತ್ ವಿತರನ್ ನಿಗಮ್ ಲಿಮಿಟೆಡ್ (DVVNL) ಆಡಳಿತ ನಿರ್ದೇಶಕರು, ಜಿಲ್ಲಾಡಳಿತ ಹಾಗೂ ವಿದ್ಯುತ್ ಸರಬರಾಜು ಕಂಪನಿ ಹಾಗೂ ಇಲಾಖೆಯ ಜತೆಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಕತ್ತಲೆ ಆವರಿಸಿದ್ದ ಗ್ರಾಮಕ್ಕೆ ಶೀಘ್ರದಲ್ಲೆ ವಿದ್ಯುತ್ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದೇಶದ ಪ್ರತಿ ಮೂಲೆಯೂ ವಿದ್ಯುದ್ದೀಕರಣವಾಗಿದೆ ಎಂದು ಕೇಂದ್ರ ಸರ್ಕಾರ 2018ರಲ್ಲಿ ಹೇಳಿತ್ತು. ಆದರೆ ಈ ಗ್ರಾಮಕ್ಕೆ ಮಾತ್ರ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ.
ಸಾರ್ವಜನಿಕರ ಹಣವನ್ನು ಬಿಜೆಪಿ ದೇವಸ್ಥಾನಗಳಿಗೆ ವಿನಿಯೋಗಿಸುತ್ತಿದೆ, ಸ್ಮಶಾನಗಳಿಗಲ್ಲ : ಯೋಗಿ ಆದಿತ್ಯನಾಥ್!
ಮುಂದಿನ ಎರಡು ತಿಂಗಳಿನಲ್ಲಿ ಈ ಗ್ರಾಮದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದೀಪಾವಳಿ ಹಬ್ಬ ಮುಗಿದ ತಕ್ಷಣವೇ ವಿದ್ಯುತ್ ಕಂಬಗಳನ್ನು (Electricity Poles) ಅಳವಡಿಸುವ ಕಾರ್ಯ ಪ್ರಾರಂಭವಾಗಲಿದೆ. ಸದ್ಯದ ಮಟ್ಟಿಗೆ ಗ್ರಾಮದ ಜನರಿಗೆ ಹಬ್ಬ ಆಚರಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಜನರೇಟರ್ ಅಳವಡಿಸಲಾಗಿದ್ದು ರಸ್ತೆ ಬದಿಯಲ್ಲಿ ಲೈಟ್ಸ್ ಅಳವಡಿಸಲಾಗಿದೆ. ಈ ಜನರೇಟರ್ ಮೂಲಕ ತಾತ್ಕಾಲಿಕವಾಗಿ ಜನರು ತಮ್ಮ ಮನಗೆ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ. ಈ ಜನರೇಟರ್ ಗ್ರಾಮದಲ್ಲಿ ಒಂದು ವಾರ ಇರಲಿದೆ. ಜತೆಗೆ ಗ್ರಾಮದಲ್ಲಿ ಸೋಲಾರ್ ಲೈಟ್ಸ್ ಅಳವಡಿಸುವಂತೆ ಇಲಾಖೆಗ ತಿಳಿಸಲಾಗಿದೆ.
ಜನರ ಮನೆ ಮನೆಗೆ ಹೋಗಿ ಲಸಿಕೆ ಹಾಕಿ : ಪಿಎಂ ಮೋದಿ
300 ಜನರು ವಾಸಿಸುತ್ತಿರುವ ಈ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳಿವೆ. ಆದರೆ ಒಂದೇ ಒಂದು ಮನೆಗೂ ವಿದ್ಯುತ್ ಸಂಪರ್ಕವಿರಲಿಲ್ಲ. ತಮ್ಮ ಮೊಬೈಲ್ ಚಾರ್ಜ್ ಮಾಡುವುದು ಸೇರಿದಂತೆ ತಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ಎರಡು ಕಿ.ಮೀ ದೂರವಿರುವ ಇನ್ನೊಂದು ಗ್ರಾಮಕ್ಕೆ ಈ ಗ್ರಾಮದ ಜನರು ತೆರಳಬೇಕಿತ್ತು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಸೇರಲು ಹರಸಾಹಸಪಡಬೇಕಿತ್ತು. ಸಾಮಾನ್ಯವಾಗಿ ಇಲ್ಲಿನ ಜನರು ಸೂರ್ಯಾಸ್ತದ ಮುನ್ನವೇ ಮನೆಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸುತ್ತಿದ್ದರು.
UIDAI: ಆಧಾರ್ ಕಾಯ್ದೆ ಉಲ್ಲಂಘನೆಗೆ ಇನ್ನು 1 ಕೋಟಿವೆರೆಗೂ ದಂಡ!
'ತುಲೈ ಕಾ ನಾಗ್ಲಾ ಗ್ರಾಮಕ್ಕೆ ವಿದ್ಯುತ್ ಸಂಪರ್ಕಿಸುವ ಯೋಜನೆ ಆರಂಭವಾಗಿದೆ. ಇಟಾಹ್‌ನ ಸೂಪರಿಂಟೆಂಡೆಂಟ್ ಇಂಜಿನಿಯರ್ ಅವರನ್ನು ಈ ಯೋಜನೆ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲು ತಿಳಿಸಲಾಗಿದೆ. ಸರಿಯಾದ ಸಮಯದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ' ಎಂದು DVVNL ಆಡಳಿತ ನಿರ್ದೇಶಕರಾದ ಅಮಿತ್ ಕಿಶೋರ್ (Amit Kishore) ಹೇಳಿದ್ದಾರೆ. 'ಗ್ರಾಮದ ವಸ್ತುಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಆದ್ಯತೆಯ ಮೇರೆಗೆ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. ಸದ್ಯದ ಮಟ್ಟಿಗೆ ತಾತ್ಕಾಲಿಕ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ' ಎಂದು ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಅಗರವಾಲ್ (Ankit Kumar Agarwal) ಹೇಳಿದ್ದಾರೆ.