ಸಾರ್ವಜನಿಕರ ಹಣವನ್ನು ಬಿಜೆಪಿ ದೇವಸ್ಥಾನಗಳಿಗೆ ವಿನಿಯೋಗಿಸುತ್ತಿದೆ, ಸ್ಮಶಾನಗಳಿಗಲ್ಲ : ಯೋಗಿ ಆದಿತ್ಯನಾಥ್!

By Suvarna News  |  First Published Nov 4, 2021, 10:17 AM IST

*ಉತ್ತರಪ್ರದೇಶ ಸರ್ಕಾರದಿಂದ 500 ದೇವಸ್ಥಾನಗಳ ನವೀಕರಣ
*ಈ ಹಿಂದೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಅಪರಾಧವಾಗಿತ್ತು : ಯೋಗಿ
*ರಾಮ ಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ : ಯುಪಿ ಸಿಎಂ

BJP Using Public Money For Temples Not Kabristan said UP CM Adityanath

ಅಯೋಧ್ಯೆ (ನ.4): ಉತ್ತರ ಪ್ರದೇಶದ (Uttar Pradesh) ಹಿಂದಿನ ಸರ್ಕಾರಗಳನ್ನು ಗುರಿಯಾಗಿಸಿ, ಈ ಹಿಂದೆ ಸಾರ್ವಜನಿಕ ಹಣವನ್ನು ಸ್ಮಶಾನ ಭೂಮಿಗಳಿಗೆ (kabristan) ಖರ್ಚು ಮಾಡಲಾಗುತ್ತಿತ್ತು ಆದರೆ ಬಿಜೆಪಿ ಸರ್ಕಾರವು ದೇವಾಲಯಗಳ ನವೀಕರಣಕ್ಕಾಗಿ ಹಣವನ್ನು ಬಳಸುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬುಧವಾರ ಹೇಳಿದ್ದಾರೆ. ದೀಪೋತ್ಸವದ ಅಂಗವಾಗಿ ಉತ್ತರ ಪ್ರದೇಶ ಸರ್ಕಾರವು ರಾಮ್ ಕಥಾ ಪಾರ್ಕ್‌ನಲ್ಲಿ (Ram Katha Park) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇದು ಅವರವರ ಆಲೋಚನೆಯಲ್ಲಿರುವ ವ್ಯತ್ಯಾಸ. ಕಬ್ರಿಸ್ತಾನ್ ಬಗ್ಗೆ ಪ್ರೀತಿ ಇರುವವರು ಸಾರ್ವಜನಿಕ ಹಣವನ್ನು ಅಲ್ಲಿ ಖರ್ಚು ಮಾಡುತ್ತಿದ್ದರು, 'ಧರ್ಮ'  ಮತ್ತು 'ಸಂಸ್ಕೃತಿ' ಅನ್ನು ಪ್ರೀತಿಸುವವರು ಹಣವನ್ನು ಇಲ್ಲಿ ಖರ್ಚು ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ

ಪಡಿತರ ಯೋಜನೆ ಮಾರ್ಚ್‌ವರೆಗೂ ವಿಸ್ತರಣೆ

Tap to resize

Latest Videos

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳಿಗೆ (Prime Minister Garib Kalyan Anna Yojna) ಮುಂದಿನ ವರ್ಷ ಹೋಳಿಯವರೆಗೆ ಉಚಿತ ಪಡಿತರವನ್ನು ಮುಂದುವರಿಸಲಾಗುವುದು ಎಂದು ಯೋಗಿ ಘೋಷಿಸಿದ್ದಾರೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಉಚಿತ ಪಡಿತರವನ್ನು ಒದಗಿಸಲು ಹೊರತಂದಿರುವ ಯೋಜನೆಯು ಈ ವರ್ಷದ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ ಆದರೆ ಉತ್ತರಪ್ರದೇಶ ಸರ್ಕಾರವು ಅದನ್ನು ಮುಂದಿನ ವರ್ಷ ಹೋಳಿ (March) ವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಯೋಗಿ ಹೇಳಿದ್ದಾರೆ. ಈ ಯೋಜನೆಯಡಿ, ಫಲಾನುಭವಿಗಳಿಗೆ ಗೋಧಿ ಮತ್ತು ಅಕ್ಕಿಯೊಂದಿಗೆ ಉಪ್ಪು, ಸಕ್ಕರೆ, ಬೇಳೆ ಮತ್ತು ಎಣ್ಣೆಯನ್ನು ನೀಡಲಾಗುತ್ತಿದೆ.

ಉತ್ತರಪ್ರದೇಶ ಸರ್ಕಾರದಿಂದ 500 ದೇವಸ್ಥಾನಗಳ ನವೀಕರಣ

'661 ಕೋಟಿ ರೂ. ಮೌಲ್ಯದ 50 ವಿವಿಧ ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿ ಮಾತನಾಡಿದ ಯೋಗಿ "ಪಡಿತರ ಯೋಜನೆಯನ್ನು ವಿಸ್ತರಿಸುವ ತಮ್ಮ ಸರ್ಕಾರದ ನಿರ್ಧಾರವು ಉತ್ತರ ಪ್ರದೇಶದ 15 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ'. ಹಿಂದಿನ ಸರ್ಕಾರಗಳನ್ನು ಗುರಿಯಾಗಿಸಿ , 'ಹಿಂದೆ ರಾಜ್ಯದ ಹಣವನ್ನು ಕಬ್ರಿಸ್ತಾನದ ಭೂಮಿಗೆ ಖರ್ಚು ಮಾಡಲಾಗುತ್ತಿತ್ತು, ಇಂದು ದೇವಸ್ಥಾನಗಳ (Temple) ನವೀಕರಣಕ್ಕಾಗಿ ಹಣವನ್ನು ಖರ್ಚು ಮಾಡಲಾಗುತ್ತಿದೆ' ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ದೆಹಲಿ ಸರ್ಕಾರದಿಂದ ಅಯೋಧ್ಯೆಗೆ ಉಚಿತ ಪ್ರವಾಸ: ಕೇಜ್ರಿವಾಲ್‌ ಘೋಷಣೆ!

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ (Ayodhya Ram Temple) ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಉತ್ತರ ಪ್ರದೇಶದ 500 ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ನವೀಕರಣಕ್ಕಾಗಿ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಹೇಳಿದರು. ಈ ಪೈಕಿ 300ಕ್ಕೂ ಹೆಚ್ಚು ನಿವೇಶನಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಉಳಿದ ನಿವೇಶನಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.‌

ರಾಮ ಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್, 30 ವರ್ಷಗಳ ಹಿಂದೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದನ್ನು ಅಪರಾಧ (Crime) ಎಂದು ಪರಿಗಣಿಸಲಾಗಿತ್ತು. ಆದರೆ ಕಳೆದ ವರ್ಷ ಪ್ರಧಾನಿಯವರು ಶಂಕುಸ್ಥಾಪನೆ ಮಾಡಿದ ನಂತರ ಭವ್ಯ ರಾಮ ಮಂದಿರದ ನಿರ್ಮಾಣವು ಅಂತಿಮವಾಗಿ ಪ್ರಾರಂಭವಾಗಿದೆ. ಜತೆಗೆ ಪ್ರಜಾಪ್ರಭುತ್ವ (Democracy) ಮತ್ತು ಜನರ ಶಕ್ತಿಗೆ ಮನ್ನಣೆ ಸಿಕ್ಕಿದೆ. 30 ವರ್ಷಗಳ ಹಿಂದೆ ನಿಮ್ಮ ಮೇಲೆ ಗುಂಡು ಹಾರಿಸುತ್ತಿದ್ದವರು, ನಿಮ್ಮ ಶಕ್ತಿಯ ಮುಂದೆ ತಲೆಬಾಗುತ್ತಿದ್ದಾರೆ, ರಾಮ ಎಲ್ಲರನ್ನು ಒಂದುಗೂಡಿಸಿದ. ಇದು ರಾಮನ ಶಕ್ತಿ. ದೇವಾಲಯದ ನಿರ್ಮಾಣ 2023 ರ ವೇಳೆಗೆ ಪೂರ್ಣಗೊಳ್ಳುವುದನ್ನು ವಿಶ್ವದ ಯಾವುದೇ ಶಕ್ತಿಯು ತಡೆ ಹಿಡಿಯಲು ಸಾಧ್ಯವಿಲ್ಲ" ಎಂದು ಯೋಗಿ ಹೇಳಿದ್ದಾರೆ. ಇನ್ನೂ ಕೆಲವೇ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು  (Uttar Pradesh Assembly Elections 2022) ನಡೆಯಲಿವೆ ಎಂಬುವುದು ಉಲ್ಲೇಖನೀಯ.

Deepavali; ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳು.. ಗಿನ್ನಿಸ್ ದಾಖಲೆ ನಿರ್ಮಾಣ

vuukle one pixel image
click me!
vuukle one pixel image vuukle one pixel image