ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡ ಗರ್ಭಿಣಿ: ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ತಾಯಿ!

Published : Feb 20, 2026, 09:39 PM IST
pregnant woman

ಸಾರಾಂಶ

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳು ಸಹಾಯಕ್ಕೆ ಯಾರೂ ಇಲ್ಲದ ಕಾರಣ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆಯ ನಂತರವೂ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬಹ್ರೈಚ್ (ಫೆ.20): ಹೆರಿಗೆ ನೋವಿನ ತೀವ್ರತೆ ತಾಳಲಾರದೆ ಗರ್ಭಿಣಿಯೊಬ್ಬಳು ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡ ಅಮಾನವೀಯ ಹಾಗೂ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಹೊಟ್ಟೆ ಸೀಳಿಕೊಂಡ ಸ್ಥಿತಿಯಲ್ಲೇ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬೌಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದ್ವಾಲ್ ಗ್ರಾಮದ ನಿವಾಸಿ ನಂಕೈ (35) ಎಂಬಾಕೆಯೇ ಈ ಸಾಹಸಕ್ಕೆ ಕೈಹಾಕಿದ ದುರ್ದೈವಿ. ಸುಮಾರು ಆರು ತಿಂಗಳ ಹಿಂದಷ್ಟೇ ಈಕೆಯ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಅಂದಿನಿಂದ ಆಕೆ ಮನೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು ಎನ್ನಲಾಗಿದೆ.

ನಡೆದಿದ್ದೇನು?

ಗುರುವಾರ ಮಧ್ಯಾಹ್ನ ನಂಕೈಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವು ಅಸಹನೀಯ ಹಂತಕ್ಕೆ ತಲುಪಿದಾಗ, ಮನೆಯಲ್ಲಿ ಸಹಾಯಕ್ಕೆ ಯಾರೂ ಇಲ್ಲದ ಕಾರಣ ಆಕೆ ತರಕಾರಿ ಹೆಚ್ಚುವ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡಿದ್ದಾಳೆ. ಆಕೆಯ ಕಿರುಚಾಟ ಕೇಳಿದ ನೆರೆಹೊರೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ, ತೀವ್ರ ರಕ್ತದ ಮಡುವಿನಲ್ಲಿದ್ದ ಆಕೆಯನ್ನು ಫಖರಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಮಗುವಿನ ಜನನ ಮತ್ತು ಹದಗೆಟ್ಟ ಆರೋಗ್ಯ

ಆಸ್ಪತ್ರೆಗೆ ದಾಖಲಾದ ಸ್ವಲ್ಪ ಸಮಯದಲ್ಲೇ ನಂಕೈ ಸಾಮಾನ್ಯ ಹೆರಿಗೆಯ (Normal Delivery) ಮೂಲಕ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಹೊಟ್ಟೆಯಲ್ಲಾದ ಆಳವಾದ ಗಾಯದಿಂದಾಗಿ ಆಕೆಯ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸಲು ಆರಂಭಿಸಿತು. ಕೂಡಲೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಕರುಳುಗಳೇ ಹೊರಬಂದಿದ್ದವು!

ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಈ ಬಗ್ಗೆ ಪ್ರತಿನಿಧಿಯೊಂದಿಗೆ ಮಾತನಾಡಿ, "ಮಧ್ಯಾಹ್ನ 3:20 ರ ಸುಮಾರಿಗೆ ಆಕೆಯನ್ನು ಆಸ್ಪತ್ರೆಗೆ ತರಲಾಯಿತು. ಆಕೆಯ ಹೊಟ್ಟೆಯ ಗಾಯ ಎಷ್ಟು ಆಳವಾಗಿತ್ತೆಂದರೆ ಕರುಳುಗಳು ಹೊರಬಂದಿದ್ದವು ಮತ್ತು ದೇಹದಿಂದ ಅತಿಯಾದ ರಕ್ತಸ್ರಾವವಾಗಿತ್ತು," ಎಂದು ತಿಳಿಸಿದ್ದಾರೆ. ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಲಕ್ನೋದ ಹಿರಿಯ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ.

ವಿಡಿಯೋ ವೈರಲ್

ನಂಕೈ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಕರೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಕೆ, "ನೋವು ತಡೆಯಲು ಸಾಧ್ಯವಾಗದೆ ನಾನೇ ಹೊಟ್ಟೆ ಸೀಳಿಕೊಂಡೆ" ಎಂದು ಹೇಳುತ್ತಿರುವುದು ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯ ತಾಯಿ ನೀತಾ ಅವರು ಆಕೆಯ ಜೊತೆಗಿದ್ದು, ಲಕ್ನೋದಲ್ಲಿ ಚಿಕಿತ್ಸೆ ಮುಂದುವರಿದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಏಪ್ರಿಲ್ 1 ರಿಂದ ಟೋಲ್ ಪ್ಲಾಜಾದಲ್ಲಿ ನಗದು ಸ್ವೀಕಾರ ಬಂದ್? ಸಂಪೂರ್ಣ ಡಿಜಿಟಲ್ ಪಾವತಿಗೆ NHAI ಮಾಸ್ಟರ್ ಪ್ಲಾನ್!
ಅಮ್ಮನ ಅಂಬಾರಿ: ಮೇವಿನ ಹೊರೆಯ ಜೊತೆ ಮಗನನ್ನು ಕಟ್ಟಿ ತಲೆಯ ಮೇಲಿಟ್ಟು ಸಾಗಿದ ತಾಯಿ